ಉತ್ತರಕನ್ನಡ:ಚಾಕೊಲೇಟ್ ಎಂದು ಅಕ್ಕ ಕೊಟ್ಟ ಜೀನ್ಸ್​ ಪ್ಯಾಂಟ್​ ಬಟನ್ ನುಂಗಿ ಎರಡು ತಿಂಗಳ ಮಗು ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿದ ಪ್ರಕರಣವೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಉತ್ತರಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ಬಳಿ ಪಾಲಿಷ್ ಕಮಲ-ಕಿಶೋರ ಅವರ ಪುತ್ರಿ, ಎರಡು ತಿಂಗಳ ಮಗು ಅಮೃತಾ ಜೀನ್ಸ್ ಪ್ಯಾಂಟ್​ ಬಟನ್ ನುಂಗಿದ್ದಳು. ಈಕೆಯ ಅಕ್ಕ 2 ವರ್ಷದ ನಮ್ರತಾ ಆಟವಾಡುತ್ತಿದ್ದಾಗ ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್ ಬಟನ್ ನೀಡಿದ್ದಳು.
ಆ ಜೀನ್ಸ್ ಪ್ಯಾಂಟ್ ಬಟನ್ ನುಂಗಿದ ಮಗು ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿ ಒದ್ದಾಟ ಅನುಭವಿಸಿತ್ತು. ತಕ್ಷಣ ಪಾಲಕರು ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ನಡೆಸಿದ್ದ ಚಿಕಿತ್ಸೆ ಯಶಸ್ವಿಯಾಗಿದೆ. ಕೊಳವೆ ಮೂಲಕ ಬಟನ್ ಹೊರ ತೆಗೆದು ಹಸುಳೆಯ ಜೀವ ಉಳಿಸಲಾಗಿದೆ.
ಸದ್ಯ ಈ ಬಿಯರ್ ಕುಡಿಯಬೇಡಿ!; ಸೆಡಿಮೆಂಟ್ ಶೇಖರಣೆ ಆಗಿರುವುದರಿಂದ ತಡೆ ಹಿಡಿದ ಅಬಕಾರಿ ಇಲಾಖೆ

ಹೇಗಿದೆ ನೋಡಿ ಪೂಜಾ ಗಾಂಧಿ ಕೈಬರಹ!; ಕನ್ನಡದಲ್ಲೇ ಬರೆದು ಶುಭಾಶಯ ಕೋರಿದ ‘ಮುಂಗಾರು ಮಳೆ’ ಬೆಡಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
