ಕರೊನಾ ಸೋಂಕು ವ್ಯಾಪಕವಾಗುತ್ತಿರುವ ನಡುವೆಯೇ ಇದೀಗ ಕೆಲವರಿಗೆ ಆಸ್ತಿ ಕೈತಪ್ಪಿ ಹೋಗುತ್ತದೆಂಬ ಚಿಂತೆ ಶುರುವಾಗಿದ್ದು, ತಂದೆ, ತಾಯಿ ಮತ್ತು ಸಂಬಂಧಿಕರಿಂದ ವಿಲ್, ದಾನ ಪತ್ರ ಮಾಡಿಸಿಕೊಳ್ಳಲು ಉಪ ನೋಂದಣಿ ಕಚೇರಿಗಳಿಗೆ ಮುಗಿಬಿದ್ದಿದ್ದಾರೆ.
ಕೋವಿಡ್-19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಆಸ್ತಿಯ ವಾರಸುದಾರರು ಅಕಾಲಿಕ ಮರಣ ಹೊಂದಿದರೆ ಸಹೋದರರು ಅಥವಾ ಮತ್ಯಾರೋ ಸಂಬಂಧಿಕರು ತಕರಾರು ತೆಗೆದು ನ್ಯಾಯಾಲಯದ ಮೇಟ್ಟಿಲೇರಿದರೆ ಕೋರ್ಟು ಕಚೇರಿ ಎಂದು ಅಲೆಯಬೇಕಾಗುತ್ತದೆಂಬ ಭಯ ಉಂಟಾಗಿ ವಿಲ್, ದಾನ ಪತ್ರ ಮಾಡಿಸಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹೋಗುತ್ತಿದ್ದಾರೆ.
ಕೆಲವರಂತೂ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಪಾಲಕರನ್ನೇ ಕರೆತರುತ್ತಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದರೂ ಗಾಲಿ ಕುರ್ಚಿ ಮೇಲೆ ಕರೆ ತಂದು ಕರಾರು ಪತ್ರ ನೋಂದಣಿ ಮಾಡಿಸಿಕೊಳ್ಳುತ್ತಿರುವ ದೃಶ್ಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾಣುತ್ತಿದೆ. ಅದರಲ್ಲಿಯೂ ಮೊದಲೇ ಟೋಕನ್ ಪಡೆಯದೇ ನೇರವಾಗಿ ಪಾಲಕರನ್ನು ಕಚೇರಿಗೆ ಕರೆತಂದು ತುರ್ತಾಗಿ ನೋಂದಣಿ ಮಾಡಿಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಏರುತ್ತಿದ್ದಾರೆ. ಕರೊನಾ ಮಾರ್ಗಸೂಚಿಗಳನ್ನು ಸಹ ಪಾಲನೆ ಮಾಡುತ್ತಿಲ್ಲ. ಇದರಿಂದ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.
ಸ್ವಯಾರ್ಜಿತ ಆಸ್ತಿಯನ್ನು ವಾರಸುದಾರ ಯಾರಿಗೆ ಬೇಕಾದರೂ ವಿಲ್ ಅಥವಾ ದಾನ ಪತ್ರ ಮಾಡಬಹುದು. ವಿಲ್ ಮಾಡಿದರೆ ಅದರಲ್ಲಿನ ಷರತ್ತುಗಳು ಪೂರ್ಣಗೊಂಡ ಮೇಲೆ ಆಸ್ತಿಯ ಹಕ್ಕು ವಿಲ್​ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗೆ ಹಕ್ಕು ವರ್ಗಾವಣೆ ಆಗಲಿದೆ. ದಾನ ಪತ್ರವಾದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಕೂಡಲೇ ವಾರಸುದಾರನಿಗೆ ಹಕ್ಕು ಬರಲಿದೆ. ವಿಲ್ ಮತ್ತು ದಾನ ಪತ್ರಕ್ಕೆ ಕಾನೂನಿನಲ್ಲಿ ಹೆಚ್ಚು ಮಾನ್ಯತೆ ಮತ್ತು ಕಡಿಮೆ ಖರ್ಚು ತಗಲುವ ಕಾರಣಕ್ಕೆ ಎಲ್ಲರೂ ವಿಲ್ ಮತ್ತು ದಾನ ಪತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಒಂದು ವೇಳೆ ಕರೊನಾ ಸೋಂಕಿಗೆ ಆಸ್ತಿಯ ವಾರಸುದಾರ ನಿಧನವಾದರೆ ಉತ್ತಾರಧಿಕಾರಿಗೆ ಅಧಿಕಾರ ಸಿಗಲಿ ಎಂಬ ಕಾರಣಕ್ಕೆ ಕೆಲವರು ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳ ದೌರ್ಜನ್ಯಕ್ಕೆ ಒಳಗಾಗಿ ಅಥವಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆಯಿಂದ ಹಿರಿಯರು ಅನಿವಾರ್ಯವಾಗಿ ವಿಲ್ ಮತ್ತು ದಾನ ಪತ್ರ ಮಾಡಿಕೊಡುತ್ತಿದ್ದಾರೆ ಎಂದು ಉಪನೋಂದಣಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರೊನಾ ಭೀತಿ: ರಾಜ್ಯದ ವಿವಿಧೆಡೆ ಸಬ್ ರಿಜಿಸ್ಟ್ರಾರ್ ಸೇರಿ ಅಧಿಕಾರಿ, ಸಿಬ್ಬಂದಿಗೆ ದಿನೇ ದಿನೆ ಕರೊನಾ ಸೋಂಕು ದೃಢವಾಗುತ್ತಿದೆ. ಆದರೆ, ಕರಾರು ಪತ್ರಗಳನ್ನು ಮಾಡಿಸಿಕೊಳ್ಳಲು ಜನರು ಮಾತ್ರ ಆತುರವಾಗಿ ಉಪ ನೋಂದಣಿ ಕಚೇರಿಗಳಿಗೆ ಬರುತ್ತಿದ್ದಾರೆ. ಒಂದು ಕರಾರು ಪತ್ರಕ್ಕೆ ಹತ್ತಾರು ಮಂದಿ ಬರುತ್ತಿದ್ದಾರೆ. ಕಡ್ಡಾಯವಾಗಿ ಬೆರಳಚ್ಚು ಕೊಡಬೇಕಾಗಿದ್ದು, ಇಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಬರಲೇಬೇಕಾದ ಕಾರಣಕ್ಕೆ ಎಲ್ಲ ರೀತಿಯ ಜನರು ಕಚೇರಿಗೆ ಬರುತ್ತಿದ್ದ ಪರಿಣಾಮ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿಯಲ್ಲಿ ಸೋಂಕು ಹೆಚ್ಚಾಗುತ್ತಿದೆ.
ಅಡಮಾನ ಪತ್ರಕ್ಕೂ ಹೆಚ್ಚು ಆಸಕ್ತಿ
ಆಸ್ತಿ ಮೇಲೆ ಬ್ಯಾಂಕ್ ಸಾಲ ಪಡೆಯಲು ನಾಗರಿಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸೈಟು, ಮನೆ, ವಾಣಿಜ್ಯ ಕಟ್ಟಡಗಳನ್ನು ಅಡಮಾನವಿಟ್ಟು ಲಕ್ಷಾಂತರ ರೂ. ಸಾಲ ಪಡೆದು ಆಸ್ತಿ ದಾಖಲೆಗಳಿಗೆ ನೋಂದಣಿ ಮಾಡಿಸಲು ಫೈನಾನ್ಸ್ ಕಂಪನಿ ಅಧಿಕಾರಿ ಮತ್ತು ಸಾಲಗಾರರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಕೆಲವರು ಆಸ್ಪತ್ರೆ ಖರ್ಚಿಗೆ ಸಾಲ ಪಡೆಯುತ್ತಿರುವುದಾಗಿ ಹೇಳಿದರೆ ಇನ್ನೂ ಕೆಲವರು ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 14 =
Remember me
