ಆನೇಕಲ್​: ಕಾಂತಾರ ಸಿನಿಮಾ ಕ್ರೇಜ್​​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಉದಾಹರಣೆಯಾಗಿ ಶಾಲಾ ಮಕ್ಕಳು ಈ ಸಿನಿಮಾದ ‘ವರಾಹ ರೂಪಂ’ ಹಾಡಿಗೆ ವಿಶೇಷವಾಗಿ ವೇಷತೊಟ್ಟು ನೃತ್ಯ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆನೇಕಲ್​ ಪಟ್ಟಣದ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವು ಮಕ್ಕಳು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಧರಿಸಿದ್ದ ಕೋಲವೇಷದಂತೆ ತಾವು ಕೂಡ ವೇಷ ಹಾಕಿಕೊಂಡು ‘ವರಾಹ ರೂಪಂ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದರು ಜನರಿಂದ ಮಕ್ಕಳ ವಿಶೇಷ ನೃತ್ಯಕ್ಕೆ ಚಪ್ಪಾಳೆಯ ಮಹಾಪೂರ ಹರಿದು ಬಂದಿದೆ.
ಇದೀಗ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಣ್ಮನ ಸೆಳೆದ ವಿದ್ಯಾರ್ಥಿಗಳ ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
Sign in to your account
Please enter an answer in digits:two × 2 =
Remember me
