|ಪಂಕಜ ಕೆ.ಎಂ.ಬೆಂಗಳೂರು
ಕರೊನಾ ಕಾಲದಲ್ಲಿ ಆನ್​ಲೈನ್ ಕಲಿಕೆಯ ಅನಿವಾರ್ಯಕ್ಕೆ ಕಟ್ಟುಬಿದ್ದು ಮಕ್ಕಳ ಕೈಗೆ ಕೊಟ್ಟ ಸ್ಮಾರ್ಟ್​ಫೋನ್ ಈಗ ಅವರಿಗೆ ಚಟವಾಗಿ ಅಂಟಿಕೊಂಡಿದೆ! ಮಕ್ಕಳು ವಿಡಿಯೋ, ಗೇಮಿಂಗ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಸನಿಗಳಾಗಿದ್ದಾರೆ. ಸಣ್ಣಪುಟ್ಟ ಮಕ್ಕಳಿಗೂ ವ್ಯಸನ ಬಿಡಿಸಲು ಪರದಾಡುವ ಪರಿಸ್ಥಿತಿ ನಿರ್ವಣವಾಗಿದ್ದು, ಪಾಲಕರಲ್ಲಿ ಆತಂಕ ಮೂಡಿಸಿದೆ.
ಸಾಮಾಜಿಕ ಜಾಲತಾಣ ಪ್ರವೇಶಿಸುವ ಹದಿಹರೆಯದ ಮಕ್ಕಳಲ್ಲಿ ಶೇ. 40ಕ್ಕೂ ಹೆಚ್ಚು ಮಂದಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಾರೆ. ಶೇ. 50ಕ್ಕೂ ಹೆಚ್ಚಿನವರು ಶಾಲೆ ಮತ್ತು ಕಾಲೇಜುಗಳಲ್ಲಿ ಸಹಪಾಠಿಗಳ ಜತೆ ಅಶ್ಲೀಲತೆ ಬಗ್ಗೆ ಚರ್ಚೆ ಮಾಡುತ್ತಾರೆ. ಭಾರತದ ನಗರವಾಸಿಗಳಲ್ಲಿ 9 ರಿಂದ 17 ವರ್ಷದ ಮಕ್ಕಳು ವಿಡಿಯೋ ಹಾಗೂ ಗೇಮಿಂಗ್ ಸೇರಿ ಸಾಮಾಜಿಕ ಜಾಲತಾಣಗಳ ಚಟಕ್ಕೆ ಒಗ್ಗಿಕೊಂಡಿದ್ದಾರೆ ಎಂಬುದು ಖಾಸಗಿ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 9 ರಿಂದ 13 ವರ್ಷದ ಶೇ. 55 ಮಕ್ಕಳು ಹಾಗೂ 13 ರಿಂದ 17 ವರ್ಷದ ಶೇ. 71 ಮಕ್ಕಳು ಸ್ಮಾರ್ಟ್​ಫೋನ್ ವ್ಯಸನಿಗಳಾಗಿದ್ದಾರೆ. ಆನ್​ಲೈನ್ ತರಗತಿಗಾಗಿ ಮಕ್ಕಳು ಗ್ಯಾಜೆಟ್ (ಸ್ಮಾರ್ಟ್​ಫೋನ್, ಟ್ಯಾಬ್, ಕಂಪ್ಯೂಟರ್, ಲ್ಯಾಪ್​ಟಾಪ್ ಇತ್ಯಾದಿ)ಗಳನ್ನು ಬಳಸಬೇಕಾಯಿತು. ಆದರೆ, ನಂತರದಲ್ಲಿ ಅದರ ಅತಿಯಾದ ಬಳಕೆ ಈಗ ಮಕ್ಕಳನ್ನು ವ್ಯಸನಕ್ಕೆ ದೂಡಿದೆ. ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪಾಲಕರು, ಸ್ಮಾರ್ಟ್​ಫೋನ್ ಬಳಕೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯಲು ವಯೋಮಿತಿ ನಿಗದಿಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಯಸ್ಸು ನಿಗದಿಯಾಗಲಿ…!:ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಸಲು ಅವಕಾಶ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಶೇ. 73 ನಾಗರಿಕರು ತಮ್ಮ ಮಕ್ಕಳು 15 ವರ್ಷದವರೆಗೆ ಸಾಮಾಜಿಕ ಜಾಲತಾಣಗಳ ಪ್ರವೇಶ ಹೊಂದುವುದನ್ನು ವಿರೋಧಿಸಿದ್ದಾರೆ. ಉಳಿದಂತೆ ಶೇ. 59 ನಾಗರಿಕರು 11 ಮತ್ತು 13 ವರ್ಷ ಬೇಡ ಎಂದು ತಿಳಿಸಿದ್ದಾರೆ. ಇದರಲ್ಲಿ ಕೆಲವರು ವಿಡಿಯೋಗಳು ಮತ್ತು ಗೇಮಿಂಗ್ ಆಗಿದ್ದರೆ 9 ರಿಂದ 13 ವರ್ಷದಲ್ಲಿ ಬಳಕೆ ಮಾಡಲು ಒಪ್ಪಿದ್ದಾರೆ.
* 13-17 ವರ್ಷದ ಶೇ. 62 ಮಕ್ಕಳು ನಿತ್ಯ 3 ಗಂಟೆಗಳಿಗೂ ಹೆಚ್ಚು ಕಾಲ ವೀಡಿಯೋ, ಗೇಮಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿದ್ದಾರೆ.
* 9-13 ವರ್ಷದ ಶೇ. 49 ಮಕ್ಕಳು ವೀಡಿಯೋ, ಗೇಮಿಂಗ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಮೂರು ಗಂಟೆಗಳಿಗೂ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
* 13-17 ವರ್ಷದ ಶೇ. 71 ಮಕ್ಕಳು (ಶಾಲೆಯಿಂದ ಹೊರಗೆ) ಅತಿ ಹೆಚ್ಚು ಸಮಯ ಸ್ಮಾರ್ಟ್​ಫೋನ್ ಬಳಕೆ ಮಾಡುತ್ತಿದ್ದಾರೆ.
* 13-17 ವರ್ಷದ ಶೇ. 44 ಮಕ್ಕಳು ವೀಡಿಯೋ ಮತ್ತು ಗೇಮಿಂಗ್​ಗಳ ವ್ಯಸನಿಗಳಾಗಿದ್ದಾರೆ.
* 9-13 ವರ್ಷದ ಶೇ. 55 ಮಕ್ಕಳು (ಶಾಲೆಯಿಂದ ಹೊರಗೆ) ಹೆಚ್ಚಿನ ಸಮಯ ಸ್ಮಾರ್ಟ್​ಫೋನ್ ಬಳಕೆ ಮಾಡುತ್ತಿದ್ದಾರೆ.
* 9-13 ವರ್ಷದ ಶೇ. 47 ಮಕ್ಕಳು ವೀಡಿಯೋ ಮತ್ತು ಗೇಮಿಂಗ್​ಗಳ ವ್ಯಸನಿಗಳಾಗಿದ್ದಾರೆ.
ಕೇಂದ್ರದಿಂದ ಸಮಿತಿ ರಚನೆ:ಆನ್​ಲೈನ್ ಗೇಮಿಂಗ್ ನಿಯಂತ್ರಿಸಲು ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಮೇಲ್ವಿಚಾರಣೆ ನಡೆಸಿ ಅಧ್ಯಯನ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಇದರಿಂದ ಗೇಮಿಂಗ್ ವ್ಯಸನ ತಡೆಯುವ ಉದ್ದೇಶ ಹೊಂದಿದ್ದು, ಸರ್ಕಾರ ಸಮಿತಿಯ ವರದಿಯ ನಿರೀಕ್ಷೆಯಲ್ಲಿದೆ.
ಪಾಲಕರು ಮಕ್ಕಳ ಜತೆ ಹೆಚ್ಚು ಸಮಯ ಕಳೆಯಬೇಕು. ಅವರ ಭಾವನೆ ಅರಿಯಲು ಪ್ರಯತ್ನಿಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ಚಿಕ್ಕಮಕ್ಕಳಿಗೆ ಪಾಲಕರೇ ಮೊಬೈಲ್ ಬಳಕೆ ಮಾಡಲು ಅವಕಾಶ ನೀಡುತ್ತಾರೆ. ಆಟದ ರೀತಿಯಲ್ಲಿ ಆರಂಭವಾಗುವ ಮೊಬೈಲ್ ಬಳಕೆ ನಂತರದಲ್ಲಿ ವ್ಯಸನಕ್ಕೆ ತಿರುಗುತ್ತದೆ.
–ಡಾ. ಮನೋಜ್ ಕುಮಾರ್ ಶರ್ಮಾ, ಸಮನ್ವಯಕಾರ, ಶಟ್ ಕ್ಲಿನಿಕ್, ನಿಮ್ಹಾನ್ಸ್
ಮೊಬೈಲ್ ಬಳಕೆಯಿಂದ ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೆ ಬೊಜ್ಜು, ದೃಷ್ಟಿ ದೋಷ ಸೇರಿ ನಾನಾ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹದಿಹರೆಯದ ಮಕ್ಕಳಲ್ಲಿ ಖಿನ್ನತೆ, ಮಾನಸಿಕ ಒತ್ತಡದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಪಾಲಕರು ಮೊಬೈಲ್ ಕೊಡುವ ಮುನ್ನ ಎಚ್ಚರವಹಿಸಬೇಕು.
–ಡಾ.ನಿಜಗುಣ,ಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ
287 ಜಿಲ್ಲೆಗಳಲ್ಲಿ ಸಮೀಕ್ಷೆ:ದೇಶದ 287 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 65 ಸಾವಿರ ನಾಗರಿಕರಿಂದ ಪ್ರತಿಕ್ರಿಯೆ ಸ್ವೀಕರಿಸಲಾಗಿದೆ. ಇವರಲ್ಲಿ ಶೇ. 67 ಪುರುಷರು ಹಾಗೂ ಶೇ. 33 ಮಹಿಳೆಯರು ಅಭಿಪ್ರಾಯ ನೀಡಿದ್ದಾರೆ. ಇವರಲ್ಲಿ ಮಹಾನಗರ ಮತ್ತು ಮೊದಲ ಶ್ರೇಣಿಯ ಜಿಲ್ಲೆಗಳಲ್ಲಿ ಶೇ. 51, 2ನೇ ಶ್ರೇಣಿಯ ಜಿಲ್ಲೆಗಳಲ್ಲಿ ಶೇ. 37 ಹಾಗೂ 3 ಮತ್ತು 4ನೇ ಶ್ರೇಣಿಯ ಜಿಲ್ಲೆಗಳಲ್ಲಿ ಶೇ. 12 ನಾಗರಿಕರು ಪ್ರತಿಕ್ರಿಯಿಸಿದ್ದಾರೆ. ಈ ಸಮೀಕ್ಷೆ ನಡೆಸಿರುವ ಲೋಕಲ್ ಸರ್ಕಲ್ಸ್ ಪ್ಲಾಟ್​ಫಾಮ್ರ್ ಸಾಮಾಜಿಕ ಹಿತಾಸಕ್ತಿಗಾಗಿ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅವನ್ನು ಸರ್ಕಾರಕ್ಕೆ ತಲುಪಿಸುವ ಮೂಲಕ ಸೂಕ್ತ ನೀತಿ ರೂಪಿಸಲು ನೆರವಾಗುವ ಉದ್ದೇಶ ಹೊಂದಿದೆ.
ಅಶ್ಲೀಲ ವಿಡಿಯೋ ವೀಕ್ಷಣೆ:ಸಾಮಾಜಿಕ ಜಾಲತಾಣಗಳ ವ್ಯಸನದಿಂದಾಗಿ ನಿಮ್ಹಾನ್ಸ್​ಗೆ ಚಿಕಿತ್ಸೆಗೆ ಬರುವ ಒಟ್ಟಾರೆ 13-19 ವರ್ಷದ ಮಕ್ಕಳಲ್ಲಿ ವಾರದಲ್ಲಿ 15 ರಿಂದ 16 ಮಕ್ಕಳು ಅಶ್ಲೀಲ ಚಿತ್ರ/ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಉಳಿದಂತೆ 20ಕ್ಕೂ ಹೆಚ್ಚು ಮಕ್ಕಳು ಶಾಲೆಗಳಲ್ಲಿ ಸ್ನೇಹಿತರೊಂದಿಗೆ ಈ ಬಗ್ಗೆ ಮಾತನಾಡುತ್ತಾರೆ. ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರಲ್ಲಿ ಶೇ. 99 ಗಂಡು ಮಕ್ಕಳೇ ಆಗಿದ್ದಾರೆ. ಶೇ.1ಕ್ಕಿಂತ ಕಡಿಮೆ ಹೆಣ್ಣು ಮಕ್ಕಳು ಕಂಡು ಬರುತ್ತಾರೆ. ಉಳಿದಂತೆ ವಿಡಿಯೋ, ಗೇಮಿಂಗ್, ಚಾಟಿಂಗ್, ನೆಟ್​ಫ್ಲಿಕ್ಸ್, ಆನ್​ಲೈನ್ ಗ್ಯಾಂಬ್ಲಿಂಗ್ ವ್ಯಸನಿಗಳೂ ಇದ್ದಾರೆ ಎಂದು ನಿಮ್ಹಾನ್ಸ್​ನ ಶಟ್ ಕ್ಲಿನಿಕ್ (ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ)ನ ಸಮನ್ವಯಕಾರ ಪ್ರೊ. ಡಾ. ಮನೋಜ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ.
ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

ಶ್ರದ್ಧಾ 35 ಪೀಸ್.. ನಾನು ನಿನ್ನನ್ನು 70 ತುಂಡು​ ಮಾಡುವೆ; ಅತ್ಯಾಚಾರ​ ಮಾಡಿ, ಮತಾಂತರಿಸಿ, ಜೊತೆಗಿಟ್ಟುಕೊಂಡವನ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 1 =
Remember me
