ಬಳ್ಳಾರಿ:ರೈತ ಬೆಳೆದ ಮೆಣಸಿನಕಾಯಿ ಫಸಲನ್ನು ಹೊತ್ತೊಯ್ಯುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಹಿನ್ನೆಲೆ ಲಾರಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಸಿದ್ದಮನಹಳ್ಳಿ ಹೊರವಲಯದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಅಷ್ಟು ದೊಡ್ಡ ವ್ಯಕ್ತಿ ಅಂತಾ ಗೊತ್ತಿರಲಿಲ್ಲ; ಬಿಲ್​ಗೇಟ್ಸ್​ ಭೇಟಿ ಕುರಿತು ಚಾಯ್​ವಾಲಾ ಹೇಳಿದ ಮಾತಿದು
ವಿದ್ಯುತ್ ತಂತಿ ತಗುಲಿ ಸಂಪೂರ್ಣ ಲಾರಿ ಸುಟ್ಟು ಕರಕಲಾಗಿದೆ. ರೈತರು ಬೆಳೆದ ಮೆಣಸಿನಕಾಯಿ ತೆಗೆದುಕೊಂಡು ಹೋಗುತ್ತಿದ್ದ ಮೆಣಸಿನಕಾಯಿ ಲಾರಿಯು ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಬೆಳೆಯನ್ನು ತುಂಬಿಕೊಂಡು ಬೆಂಗಳೂರು ಕಡೆಗೆ ಹೊರಟಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ತಂತಿ ಲಾರಿಗೆ ತಗುಲಿದ್ದೇ ತಡ, ಕ್ಷಣಮಾತ್ರದಲ್ಲಿ ಬೆಂಕಿ ಆವರಿಸಿದೆ. ಲೋಡ್ ಮಾಡಲಾಗಿದ್ದ ಮೆಣಸಿನಕಾಯಿ ಸೇರಿದಂತೆ ಸಂಪೂರ್ಣ ಲಾರಿ ಬೆಂಕಿಯಿಂದ ಸುಟ್ಟು ಹೋಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಅಂತಿಮವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
‘ಗೊಂದಲ, ಹೋರಾಟ, ಪ್ರಯತ್ನ’….: ವಿಚ್ಛೇದನ ನೆನೆದು ಸಾನಿಯಾ ಭಾವುಕ!

ಆಧಾರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ…..ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ನಿಜಕ್ಕೂ ಪಾಪ ಅನಿಸುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
