ಬೆಂಗಳೂರು:ಕರೊನಾ ಕೇಡುಗಾಲದಲ್ಲಿ ಹೊಸ ಹೊಸ ಅವಕಾಶಗಳ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ದೇಶ ಬಿಡಲು ಆಸಕ್ತಿ ತೋರಿದ್ದು, ಆ ಕಂಪನಿಗಳನ್ನು ಕರ್ನಾಟಕಕ್ಕೆ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿವೆ. ಈ ಬೆಳವಣಿಗೆ ಕುರಿತು ಮುಖ್ಯಮಂತ್ರಿ ಕಚೇರಿ ಮತ್ತು ಕೈಗಾರಿಕೆ ಇಲಾಖೆ ವಿಜಯವಾಣಿಗೆ ಖಚಿತಪಡಿಸಿದ್ದು, ಪ್ರಾಥಮಿಕ ಹಂತದಲ್ಲಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲೂ ಈ ಬಗ್ಗೆ ರ್ಚಇಸುವ ಸಾಧ್ಯತೆ ಇದ್ದು, ಚೀನಾದಿಂದ ಕಾಲೆತ್ತಿರುವ ಕಂಪನಿಗಳನ್ನು ಗುರುತಿಸಿ ಕರೆತರುವ ಕುರಿತು ವಿಚಾರ ವಿನಿಮಯ ನಡೆಯಲಿದೆ. ಈ ವಿಚಾರದಲ್ಲಿ ಉತ್ತರಪ್ರದೇಶ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಭೆಗಳನ್ನು ನಡೆಸಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಯನ್ನು ಸಂರ್ಪಸಿ ಚರ್ಚೆ ನಡೆಸುವಂತೆ ಅಲ್ಲಿನ ಕೈಗಾರಿಕೆ ಸಚಿವರಿಗೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆನ್ನಲಾಗಿದೆ.
ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಅಲೋಚನೆಗಳು ನಡೆದಿವೆ. ನವೆಂಬರ್​ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಪ್ರಕ್ರಿಯೆ ನಡೆಸಲಾಗಿದೆ. ಹೊಸ ಕೈಗಾರಿಕೆ ನೀತಿ ತರುತ್ತಿದ್ದು, ಅದರಲ್ಲಿ ಸಾಕಷ್ಟು ಪ್ರೋತ್ಸಾಹವಿರುತ್ತದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್​ಡೌನ್ ಬಳಿಕ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಯೇ ಸವಾಲು. ಇಂಥ ಸಂದರ್ಭದಲ್ಲಿ ಹೊಸ ಹೂಡಿಕೆದಾರರು ಕರ್ನಾಟಕಕ್ಕೆ ಬಂದರೆ ಲಾಭವಾಗಲಿದೆ. ಈಗಾಗಲೇ ದೇಶದಲ್ಲಿರುವ ದಕ್ಷಿಣ ಕೊರಿಯಾ ಕಂಪನಿಗಳು ತಮ್ಮ ವಿಸ್ತರಣೆ ಚಟುವಟಿಕೆಗೆ ರಾಜ್ಯಗಳನ್ನು ಹುಡುಕಾಡಿವೆ. ಅದರಲ್ಲಿ ಕರ್ನಾಟಕ ಕೂಡ ಒಂದಾಗಿತ್ತು. ಕೈಗಾರಿಕೆ ಆರಂಭಿಸಲು ಸೂಕ್ತ ವಾತಾವರಣ ಇಲ್ಲೂ ಇದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಹೂಡಿಕೆಗೆ ರಾಜ್ಯವೇಕೆ ಸೂಕ್ತ?
ಮನವಿಗಳ ರಾಶಿ
ಲಾಕ್​ಡೌನ್​ನಿಂದ ಕೈಗಾರಿಕೆ ನಡೆಸುವುದೇ ದುಸ್ತರ. ಸರ್ಕಾರ ನೆರವಿಗೆ ಬರಲೇಬೇಕೆಂದು ದೊಡ್ಡ ಸಂಖ್ಯೆಯಲ್ಲಿ ಮನವಿಗಳು ಕೈಗಾರಿಕೆ ಇಲಾಖೆಗೆ ಸಲ್ಲಿಕೆಯಾಗಿವೆೆ. ರಫ್ತು ನಿಲ್ಲಿಸಿರುವುದರಿಂದ ಉತ್ಪಾದನಾ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಆಗುತ್ತದೆ. ಬ್ಯಾಂಕ್ ಇಎಂಐ ಸಮಸ್ಯೆಯಾಗುತ್ತದೆ, ಸಿಬ್ಬಂದಿ ವೇತನ ಪಾವತಿಯೂ ಕಷ್ಟವಾಗಬಹುದು. ಹೀಗಾಗಿ ವಿಶೇಷ ಆರ್ಥಿಕ ನೆರವು ಸಿಗುವಂಥ ಪ್ಯಾಕೇಜ್ ಘೋಷಿಸಬೇಕೆಂದು ವಿವಿಧ ಸಂಘಟನೆಗಳು ಪಟ್ಟು ಹಿಡಿದಿವೆ. ಕಡಿಮೆ ಬಡ್ಡಿ ದರದಲ್ಲಿ ತುರ್ತಸಾಲ, ಹಾಲಿ ಸಾಲದ ಇಎಂಐ ಪಾವತಿಗೆ ತಕ್ಷಣದ ರಿಯಾಯಿತಿಯಂಥ ಬೇಡಿಕೆಯನ್ನೂ ಸಲ್ಲಿಸಿವೆ. ಈ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಒಂದು ತೀರ್ವನವಾಗಲಿದೆ ಎಂದು ಮೂಲಗಳು ತಿಳಿಸಿವೆ.
| ಶ್ರೀಕಾಂತ್ ಶೇಷಾದ್ರಿ
ಭಾರತ ಕರೊನಾ ವೈರಸ್​ನಿಂದ ಪಾರಾಗುವ ದಿನ ದೂರ ಇಲ್ಲ..! ಇಲ್ಲೊಂದು ಗುಡ್​ ನ್ಯೂಸ್​ ಇದೆ ನೋಡಿ…

ಜ್ಞ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eleven =
Remember me
