ರಾಯಬಾಗ (ಬೆಳಗಾವಿ): ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಕರೊನಾ ವೈರಸ್ ಶಂಕಿತರನ್ನು ಕ್ವಾರಂಟೈನ್ ಮಾಡಲಾದ ಸ್ಥಳದ ಸುತ್ತಲಿನ ಸುಮಾರು 20 ಕುಟುಂಬಸ್ಥರು ಭೀತಿಯಿಂದ ಸೋಮವಾರ ಮನೆ ಖಾಲಿ ಮಾಡಿದ್ದಾರೆ!ತಾಲೂಕಿನ ಕುಡಚಿ ಪಟ್ಟಣದಲ್ಲಿ 17 ಜನರಿಗೆ ವೈರಸ್ ಇರುವುದು ದೃಢಪಟ್ಟಿದೆ. ಸೋಂಕಿತರ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ರಾಯಬಾಗ ತಾಲೂಕಿನ ಚಿಂಚಲಿ, ರಾಯಬಾಗ ಹಾಗೂ ಹಾರೂಗೇರಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆ ಪೈಕಿ ಚಿಂಚಲಿ ಪಟ್ಟಣದಲ್ಲಿ ತಮ್ಮನ್ನೂ ಕ್ವಾರಂಟೈನ್‌ಗೆ ಒಳಪಡಿಸಬಹುದೆಂದು ಹೆದರಿ ಕೆಲವರು ಮನೆ ಖಾಲಿ ಮಾಡಿದ್ದಾರೆ.
ಕುಡಚಿ ಪಟ್ಟಣದ 17 ರೋಗಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕುಡಚಿ ಪಟ್ಟಣದ ವಸತಿ ಶಾಲೆಯಲ್ಲಿ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ದ್ವಿತೀಯ ಸಂಪರ್ಕ ಹೊಂದಿದವರನ್ನು ತಾಲೂಕಿನ ವಿವಿಧ ವಸತಿ ಶಾಲೆಗಳಲ್ಲಿಡಿ ಎಂದು ಚಿಂಚಲಿ, ಹಾರೂಗೇರಿ ಪಟ್ಟಣದ ಜನರು ಮೊನ್ನೆ ಪ್ರತಿಭಟನೆ ನಡೆಸಿದ್ದರು. ಆದರೆ, ತಾಲೂಕು ಆಡಳಿತದವರು ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಸೆಕೆಂಡರಿ ಸಂಪರ್ಕ ಹೊಂದಿದ್ದ 44 ಜನರನ್ನು ಚಿಂಚಲಿಯ ಮಾಯಕ್ಕಾ ಭಕ್ತ ನಿವಾಸದಲ್ಲಿ, 36 ಜನರನ್ನು ಹಾರೂಗೇರಿಯ 3 ಲಾಡ್ಜ್‌ಗಳಲ್ಲಿ, 14 ಜನರನ್ನು ರಾಯಬಾಗ ಪಟ್ಟಣದ ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಿದ್ದಾರೆ.
ಚಿಂಚಲಿ ಪಟ್ಟಣದ ಜನರು ಆತಂಕಗೊಂಡು ಗಂಟುಮೂಟೆ ಕಟ್ಟಿಕೊಂಡು ತಮ್ಮ ಮನೆ ಖಾಲಿ ಮಾಡಿ ಸಂಬಂಧಿಕರ, ತೋಟದ ಮನೆಗಳಿಗೆ ಹೊರಟಿದ್ದಾರೆ. ಚಿಂಚಲಿಯಲ್ಲಿ ಸುಮಾರು 20 ಕುಟುಂಬಗಳು ಮನೆಗಳನ್ನು ಈಗಾಗಲೇ ಖಾಲಿ ಮಾಡಿದ್ದು, ಹಾರೂಗೇರಿ ಮತ್ತು ರಾಯಬಾಗದ ಕೆಲ ಕುಟುಂಬಗಳವರು ಮನೆ ಖಾಲಿ ಮಾಡುವ ತಯಾರಿಯಲ್ಲಿದ್ದಾರೆ.
ಮೈಸೂರಿನಲ್ಲಿ ನಾಲ್ಕು ಕೋತಿಗಳ ಶಂಕಾಸ್ಪದ ಸಾವು, ಮಂಗನ ಕಾಯಿಲೆ ವದಂತಿ ಹಿನ್ನೆಲೆ ಮಂಗಗಳ ದೇಹದ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + fifteen =
Remember me
