ಚಿಂತಾಮಣಿ:ಚಿಂತಾಮಣಿ-ಮದನಪಲ್ಲಿ ರಸ್ತೆಯ ದಂಡುಪಾಳ್ಯ ಸಮೀಪ ಬುಧವಾರ ಸಂಜೆ 6.30 ಸುಮಾಗೆ ಟೆಂಪೋ ಟ್ರಾವೆಲರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಗೋವಾ: ಪಾಕಿಸ್ತಾನ ಮೂಲದ ಕ್ರಿಶ್ಚಿಯನ್‌ಗೆ ಮೊದಲ ಸಿಎಎ ಪೌರತ್ವ
ಮೃತಪಟ್ಟವರು ಆಂಧ್ರಪ್ರದೇಶದ ನಲ್ಲೂರಿನವರಾಗಿದ್ದು, ಕಾರಿನ ಚಾಲಕ ಶ್ರೀಕಾಂತ್ (35), ಶ್ರೀನಿವಾಸುಲು (50) ಮತ್ತು ಪುಷ್ಪ (50) ಎಂದು ಗುರುತಿಸಲಾಗಿದೆ.
ಟೆಂಪೋ ಟ್ರಾವೆಲರ್ ಚಾಲಕ ಸೇರಿ 10 ಜನಕ್ಕೆ ಗಾಯಗಳಾಗಿವೆ. ಲವಕುಮಾರ್ (34), ಆದ್ಯ (7), ಕಿಶೋರ್​ಕುಮಾರ್ (44), ಮನುತೇಜ್ (8), ಹಿಮಶ್ರೀ (5), ನಾಗೇಂದ್ರ (28), ಗುರುಸ್ವಾಮಿ (55), ರಮ್ಯ (37), ವಿಹಾನ್ (9) ಹಾಗೂ ಜಗದೀಶ್ವರಿ (45) ಗಾಯಾಳುಗಳಾಗಿದ್ದು, ಎಲ್ಲರೂ ಬೆಂಗಳೂರಿನವರು ಎನ್ನಲಾಗಿದೆ.
ಆಂಧ್ರಪ್ರದೇಶ ನೋಂದಣಿ ಸಂಖ್ಯೆ ಕಾರು ಚಿಂತಾಮಣಿಯಿಂದ ಮದನಪಲ್ಲಿ ಕಡೆಗೆ ಹೋಗುತ್ತಿದ್ದಾಗ ದಂಡುಪಾಳ್ಯ ಬಳಿ ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಂಚಾರ್ಲಹಳ್ಳಿ ಠಾಣೆಯ ಪ್ರಭಾರ ಇನ್​ಸ್ಪೆಕ್ಟರ್ ಶಿವರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × two =
Remember me
