ಕಾರವಾರ:ಹಾಲಿ ಎಂಎಲ್‌ಎ ರೂಪಾಲಿ ನಾಯ್ಕ ಅವರ ವಿರುದ್ಧ ಏಳು ವರ್ಷದ ಹಿಂದೆ ಜಿಪಂ ಚುನಾವಣೆಯಲ್ಲಿ ಸೆಣಸಿದ್ದ ಚೈತ್ರಾ ಕೊಠಾರಕರ್ ಈ ಬಾರಿ ಮತ್ತೊಮ್ಮೆ ರೂಪಲಿ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.
ಕಾರವಾರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚೈತ್ರಾ ಕೊಠಾರಕರ್ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೇರಿ ಪಕ್ಷದ ʼಬಿ’ ಫಾರ್ಮ್ ಪಡೆದು ಬಂದಿದ್ದಾರೆ.
2016 ರಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಚೆಂಡಿಯಾ ಕ್ಷೇತ್ರದಿಂದ ಚೈತ್ರಾ ಕೊಠಾರಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರ ಎದುರು ರೂಪಾಲಿ ನಾಯ್ಕರು ಪಕ್ಷೇತರವಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಚೈತ್ರಾ ಜಿಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜಿಪಂ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ಸೇರಿದ ರೂಪಾಲಿ ನಾಯ್ಕ ಕಾರವಾರ,ಅಂಕೋಲಾ ಕ್ಷೇತ್ರದ ಶಾಸಕರಾದರು.ಇತ್ತ ಚೈತ್ರಾ ಈ ಬಾರಿ ಕಾಂಗ್ರೆಸ್ ಎಂಎಲ್‌ಎ ಟಿಕೆಟ್ ಆಕಾಂಕ್ಷಿಯಾಗಿ ಕೆಪಿಸಿಸಿಗೆ ಅಽಕೃತವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸತೀಶ ಸೈಲ್ ಅವರಿಗೆ ಕೈ ಟಿಕೆಟ್ ದೊರೆತ ಹಿನ್ನೆಲೆಯಲ್ಲಿ ಚೈತ್ರಾ ಅಸಮಾಧಾನಗೊಂಡು ಬಂಡಾಯವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಶುಕ್ರವಾರ ಅವರು ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಗೊಂಡು, `ಬಿ’ ಫಾರ್ಮ್ ಪಡೆದು ಬಂದಿದ್ದಾರೆ.
ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಸಂಘಟನೆಯಲ್ಲಿ ನಗಣ್ಯ ಎನಿಸಿದ್ದ ಜೆಡಿಎಸ್ ಈಗ ಬೇರ ಪಕ್ಷಗಳ ಅತೃಪ್ತರು ಹಾಗೂ ಹೊಸ ಮುಖಗಳನ್ನು ಸೇರಿಸಿಕೊಂಡು ಉಳಿದೆರಡು ರಾಜಕೀಯ ಪಕ್ಷಗಳಿಗೆ ಪೈಪೋಟಿ ಕೊಡಲು ಸಜ್ಜಾಗಿದೆ.ಎರಡು ದಿನ ಜಿಲ್ಲೆಯ ಪ್ರವಾಸ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಪಕ್ಷ ಸಂಘಟನೆಗೆ ಟಾನಿಕ್ ನೀಡಿದ್ದರು. ಶುಕ್ರವಾರ ಜಿಲ್ಲೆಯ ಎಲ್ಲ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಯನ್ನು ಅಽಕೃತವಾಗಿ ಬಿಡುಗಡೆ ಮಾಡಿದ್ದಾರೆ.ಹಳಿಯಾಳದಿಂದ ಶ್ರೀಕಾಂತ ಘೋಟ್ನೇಕರ್, ಕಾರವಾರದಿಂದ ಚೈತ್ರಾ ಕೊಠಾರಕರ್, ಕುಮಟಾದಿಂದ ಸೂರಜ್ ನಾಯ್ಕ ಸೋನಿ, ಭಟ್ಕಳದಿಂದ ನಾಗೇಂದ್ರ ನಾಯ್ಕ, ಶಿರಸಿಯಿಂದ ಉಪೇಂದ್ರ ಪೈ, ಯಲ್ಲಾಪುರದಿಂದ ಡಾ.ನಾಗೇಶ ನಾಯ್ಕ ಅವರ ಹೆಸರು ಜೆಡಿಎಸ್ ಪಟ್ಟಿಯಲ್ಲಿದೆ.
ಅವರೆಲ್ಲರಿಗೂ ಈಗಾಗಲೇ ಬಿ’ ಫಾರ್ಮ್ ದೊರೆತೂ ಆಗಿದೆ. ಹಳಿಯಾಳ, ಕುಮಟಾ ಹಾಗೂ ಶಿರಸಿಯ ಅಭ್ಯರ್ಥಿಗಳ ಹೆಸರು ಈಗಾಗಲೇ ಜನಜನಿತವಾಗಿದ್ದರೆ.
ಯಲ್ಲಾಪುರದಲ್ಲಿ ನಿವೃತ್ತ ಪ್ರೊಫೆಸರ್ ನಾಗೇಶ ನಾಯ್ಕ ಹಾಗೂ ಭಟ್ಕಳದಲ್ಲಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಆಕಾಂಕ್ಷಿಯಾಗಿದ್ದರು. ಈಗ ಅವರ ಹೆಸರು ಅಂತಿಮಗೊಂಡಿದೆ.
ಇದನ್ನೂ ಓದಿ:ಜೆಡಿಎಸ್‌ ಟಿಕೆಟ್‌ ಪಡೆದ ವಕೀಲ ನಾಗೇಂದ್ರ ನಾಯ್ಕ-ನ್ಯಾಯಮೂರ್ತಿಯಾಗಬಯಸಿದ್ದವರೀಗ ವಿಧಾನಸಭೆ ಕಣದಲ್ಲಿಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಕಳೆದ ನಾಲ್ಕು ವರ್ಷಗಳಲ್ಲಿ ನಗಣ್ಯ ಎಂಬ ಮಟ್ಟಿಗೆ ತಲುಪಿತ್ತು.
2019 ರ ಎಂಪಿ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಿದ್ದ ಆನಂದ ಅಸ್ನೋಟಿಕರ್ ಸೋಲಿನ ನಂತರ ಪಕ್ಷದ ಸಂಘಟನೆಯಿಂದ ದೂರವೇ ಉಳಿದಿದ್ದರು.
ಸಿದ್ದಾಪುರದಲ್ಲಿ ಶಶಿಭೂಷಣ ಹೆಗಡೆ ಕೂಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಕೆಲ ತಿಂಗಳ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಕಾಂಗ್ರೆಸ್ ಸೇರಿದ್ದರು.
ಗಣಪಯ್ಯ ಗೌಡ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಇತ್ತೀಚೆಗೆ ಅವರು ಅಪಘಾತವೊಂದರಲ್ಲಿ ಗಾಯಗೊಂಡ ಕಾರಣ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿತ್ತು.
ಕುಮಟಾದಲ್ಲಿ ಸೂರಜ್ ನಾಯ್ಕ ಸೋನಿ ಬಿಟ್ಟರೆ ಉಳಿದರ‍್ಯಾರೂ ಇಲ್ಲ ಎಂಬ ಪರಿಸ್ಥಿತಿ ಎರಡು ತಿಂಗಳ ಹಿಂದಿತ್ತು.
ಈಗ ಹಳಿಯಾಳ ಹಾಗೂ ಕಾರವಾರದಲ್ಲಿ ಕಾಂಗ್ರೆಸ್‌ನ ಅಸಮಾಧಾನಿತರು ಜೆಡಿಎಸ್ ಸೇರಿದ್ದಾರೆ. ಉಳಿದ ಕೆಲವು ಹೊಸ ಮುಖಗಳು ಕಣಕ್ಕಿಳಿದಿವೆ. ಮೂವರು ನಾಮಧಾರಿಗಳಿಗೆ, ಒಬ್ಬ ಮರಾಠ ಹಾಗೂ ಒಬ್ಬ ಬ್ರಾಹ್ಮಣ ಹಾಗೂ ಇನ್ನೊಬ್ಬ ಮಹಿಳೆಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಸಾಮಾಜಿಕ ನ್ಯಾಯವನ್ನೂ ಪರಿಗಣಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
