ಚಿತ್ರದುರ್ಗ:ಇಲ್ಲಿನ ಬಿಜೆಪಿ ಶಾಸಕ ಜಿ.ಎಚ್​. ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಯತ್ನ ನಡೆದಿದ್ದು, ಸ್ವತಃ ಶಾಸಕರೇ ಚಿತ್ರದುರ್ಗದ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಬೆತ್ತಲೆಯಾಗಿದ್ದ ಯುವತಿಯೊಬ್ಬಳು ವಿಡಿಯೋ ಕಾಲ್​ ಮಾಡುವ ಮೂಲಕ ಶಾಸಕರನ್ನು ಹನಿಟ್ರ್ಯಾಪ್​ ಬಲೆಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾಳೆ. ಅಪರಿಚಿತ ಯುವತಿ ಒಟ್ಟು ಮೂರು ಬಾರಿ ವಿಡಿಯೋ ಕಾಲ್ ಮಾಡಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.
ವಿಡಿಯೋ ಕರೆ ನೋಡಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟಿದ್ದಾಗಿ ತಿಪ್ಪಾರೆಡ್ಡಿ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕರೆ ಬಂದಿದ್ದ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿಸಿದ್ದೇನೆ. ಕರೆ ಕಡಿತಗೊಳಿಸಿದ ಬಳಿಕವೂ ಅಶ್ಲೀಲ ವಿಡಿಯೋಗಳನ್ನು ವಾಟ್ಸ್​ಆ್ಯಪ್​ ಮಾಡಿದ್ದರು ಎಂದು ಶಾಸಕರು ಹೇಳಿದ್ದಾರೆ.
ಶಾಸಕರ ದೂರು ಆಧರಿಸಿ CEN ಪೊಲೀಸ್ ಠಾಣೆಯಲ್ಲಿ‌ ಎಫ್​ಐಆರ್​ ದಾಖಲಾಗಿದೆ. ಐಟಿ ಆಕ್ಟ್ 66 (A) ಅಡಿಯಲ್ಲಿ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜಸ್ಥಾನ, ಒರಿಸ್ಸಾ ಭಾಗದಿಂದ ವಿಡಿಯೋ ಕಾಲ್ ಬಂದಿದೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೆನಾ? ಪತ್ನಿಯಿಂದ ಹಲ್ಲೆಗೊಳಗಾಗಿ ಪ್ರಧಾನಿ ಕಚೇರಿಗೆ ದೂರಿತ್ತ ಪತಿ

VIDEO| ಇಡೀ ಜಿಂಕೆಯ ದೇಹವನ್ನೇ ಸೆಕೆಂಡ್​ಗಳಲ್ಲಿ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 7 =
Remember me
