ಚಿತ್ರದುರ್ಗ:ಜಿಲ್ಲೆಯ ಕೆ.ಆರ್.ಹಳ್ಳಿ ಗೇಟ್ ಬಳಿ ಬುಧವಾರ ಬೆಂಕಿಗಾಹುತಿಯಾದ ಖಾಸಗಿ ಬಸ್​ನಿಂದ ಬೆಂಗಳೂರು ಮೂಲದ ಪ್ರಯಾಣಿಕನೊಬ್ಬ ಕಾಣೆಯಾಗಿರುವುದು ಹಿರಿಯೂರು ಗ್ರಾಮಾಂತರ ಪೊಲೀಸರನ್ನು ಕಂಗೆಡಿಸಿದೆ.
ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅದರಲ್ಲಿದ್ದ 29 ಪ್ರಯಾಣಿಕರ ಪೈಕಿ ಮೂವರು ಮಕ್ಕಳ ಸಹಿತ ಐವರು ಮೃತಪಟ್ಟಿದ್ದರು. ಉಳಿದ 24 ಜನರ ಪೈಕಿ 23 ಪ್ರಯಾಣಿಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಘಟನೆ ನಡೆದ ವೇಳೆಯಿಂದ ಸುರೇಶ್(34) ಎಂಬುವರ ಮೊಬೈಲ್ ಸ್ವಿಚ್ಡ್​ಆಫ್ ಆಗಿದ್ದು, ಈವರೆಗೂ ಆತನ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.
ತನ್ನ ಮನೆಯವರನ್ನೂ ಸುರೇಶ್ ಸಂರ್ಪಸಿಲ್ಲ. ಬಸ್​ನಲ್ಲಿದ್ದಾತ ಎಲ್ಲಿಗೆ ಹೋದ, ಯಾಕೆ ಮನೆಗೆ ಬಂದಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದೆ ಕುಟುಂಬದ ಸದಸ್ಯರು ಕಂಗೆಟ್ಟಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಬಸ್​ಗೆ ಬೆಂಕಿ ತಗುಲಿ ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನ
ಘಟನೆಗೂ ಮುನ್ನ ಆತ ಕೊನೆಯದಾಗಿ ಯಾರೊಂದಿಗೆ ಫೋನ್ ಮೂಲಕ ಮಾತನಾಡಿದ್ದ ಎಂಬ ವಿವರ ಪಡೆದ ಪೊಲೀಸರ ತಂಡ ಮೈಸೂರು ಮತ್ತಿತರೆಡೆಗೆ ತೆರಳಿದೆ.
ಈ ನಡುವೆ, ಕಾಣೆಯಾಗಿದ್ದ ಸುರೇಶ್ ಕೊನೆಗೂ ಕುಟುಂಬದವರೊಂದಿಗೆ ಮಾತನಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ‌ ಅವರು ಮನೆಗೆ ಹೋಗಿರಲಿಲ್ಲ. ಆದರೆ ಅವರು ಸುರಕ್ಷಿತವಾಗಿ ಇದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾವಿರ ಕೋಟಿ ರೂ. ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
