ಚಿತ್ರದುರ್ಗ:ಆಸ್ತಿ ವಿಚಾರಕ್ಕಾಗಿ ದಾಯಾದಿ ಮಹಿಳೆಯರು ಜಗಳ ಆಡಿಕೊಂಡು, ಓರ್ವ ಮಹಿಳೆ ಗಂಭೀರ ಹಲ್ಲೆಗೊಳಗಾಗಿ, ಕೊನೆಯುಸಿರೆಳೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೇ ಸರ್ವೆ ನಂಬರ್​ನಲ್ಲಿ 5 ಜನ ಆಸ್ತಿ ಹಂಚಿಕೊಂಡಿದ್ದರು. ಅದನ್ನು ಅಧಿಕೃತ ಮಾಡಲೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಷ್ಟರೊಳಗೆ ದಾಯಾದಿಗಳು ಜಗಳ ಆರಂಭಿಸಿದ್ದಾರೆ. ಒಂದೇ ಮನೆಯ ಸೊಸೆಯಂದಿರಾದ ಮಂಜಮ್ಮ, ಸುಮಕ್ಕ, ನೀಲಮ್ಮ ಮತ್ತು ವಿಶಾಲಾಕ್ಷಿ ನಡುವೆ ಜಗಳ ನಡೆದಿದೆ. ಮಂಜಮ್ಮನನ್ನು ಉಳಿದ ಮೂವರು ಮಹಿಳೆಯರು ಹಿಡಿದು ಥಳಿಸಿದ್ದಾರೆ.
ಜಗಳದಲ್ಲಿ ಮಂಜಮ್ಮ ತೀವ್ರವಾಗಿ ಗಾಯಾಳುವಾಗಿದ್ದಾರೆ. ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಸುಮಕ್ಕ, ನೀಲಮ್ಮ, ವಿಶಾಲಾಕ್ಷಿ, ಚಿದಾನಂದಪ್ಪ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಆಸ್ತಿಗಾಗಿ ಜಡೆ ಫೈಟ್​! ವಾರ್​ಗಿತ್ತಿಯರ ಜಗಳಕ್ಕೆ ಮಹಿಳೆ ಬಲಿ…!ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿಯಲ್ಲಿ ಆಸ್ತಿಯ ವಿಚಾರದಲ್ಲಿ ನಡೆದ ಫೈಟ್​ ಇದು. ಈ ಫೈಟ್​ನಿಂದಾಗಿ ಓರ್ವ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆhttps://t.co/JCps2efeGVನೋಡಿ..pic.twitter.com/x96WoOxEph
— Vijayavani (@VVani4U)March 15, 2021

ಹೆಂಡತಿಗೆ ಬ್ರೈನ್​ ಟ್ಯೂಮರ್​; ಚಿಕಿತ್ಸೆ ಕೊಡಿಸಲಾಗದ ಗಂಡ ಮಾಡಿದ್ದೇನು ಗೊತ್ತಾ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:two × 4 =
Remember me
