ಚಿತ್ರದುರ್ಗ:ಮಹಾಮಾರಿ ಕರೊನಾಗೆ ಹೆದರಿರುವ ಗ್ರಾಮಸ್ಥರು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮದಲ್ಲಿ ನಡೆದಿದೆ.
ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮ ಮನ್ನೇಕೋಟೆಯಲ್ಲಿ ಕೇವಲ 25 ದಿನಗಳ ಅಂತರದಲ್ಲಿ 15 ಜನರ ಸರಣಿ ಸಾವಾಗಿದೆ. ಅಲ್ಲದೆ, 450ಕ್ಕೂ ಹೆಚ್ಚು ಜನರಿಗೆ ಶೀತ, ಕೆಮ್ಮು, ನಗಡಿ, ಜ್ವರ ಕಾಣಿಸಿಕೊಂಡಿದೆ.
ಮೃತ 15 ಮಂದಿಯಲ್ಲಿ 5 ಜನರು ಕೋವಿಡ್​ಗೆ ಬಲಿಯಾಗಿದ್ದರೆ, ಉಳಿದ 10 ಮಂದಿ ಇನ್ನಿತರ ರೋಗಗಳಿಗೆ ತುತ್ತಾಗಿದ್ದಾರೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಆರೋಗ್ಯ ಇಲಾಖೆಯ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸೌಜನ್ಯಕ್ಕೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಮೂಢನಂಬಿಕೆಗೆ ಮೊರೆಹೋಗಿರುವ ಗ್ರಾಮಸ್ಥರು ಗ್ರಾಮದ ನಾಲ್ಕೂ ದಿಕ್ಕಿಗು ಮಂತ್ರಿಸಿದ ತೆಂಗಿನಕಾಯಿಯನ್ನು ತಂದು ಕಟ್ಟಿದ್ದಾರೆ. ಕರೊನಾಗೆ ಹೆದರಿ ಹೀಗೆ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಧೋನಿ, ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ: ಫ್ಯಾನ್ಸ್​ ಪ್ರಶ್ನೆಗೆ ಸೂರ್ಯಕುಮಾರ್​ ಸೂಪರ್​ ಉತ್ತರ ಇಲ್ಲಿದೆ….

ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್

ಒಂದೇ ದಿನ ಸೂಪರ್​ಮೂನ್-ಬ್ಲಡ್​ಮೂನ್; ಮೇ 26ರ ಚಂದ್ರಗ್ರಹಣದ ದಿನ ಕೌತುಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
