ಚಿತ್ರದುರ್ಗ:ಹಾವು ಕಚ್ಚಿ ವಲಯ ಅರಣ್ಯಾಧಿಕಾರಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಅಧಿಕಾರಿಯನ್ನು ಟಿ.ಆರ್​. ಪ್ರಕಾಶ್​ ಎಂದು ಗುರುತಿಸಲಾಗಿದೆ. ಇವರು ಮೊಳಕಾಲ್ಮೂರಿನಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಎಂಡಿ ಮಹದೇವ್ ಎಂಬುವರ ನರ್ಸರಿಯಲ್ಲಿ ಹಾವು ಕಚ್ಚಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಸ್ನೇಹಿತನ ಜತೆ ಕುಡಿದ ಮತ್ತಿನಲ್ಲಿದ್ದ ಪ್ರಿಯಕರನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ
ಹಾವು ಕಚ್ಚಿದ ಬಳಿಕ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕಾಶ್​ ಅವರ ಸಾವಿನಿಂದ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅರಣ್ಯ ಹಾಗೂ ಪ್ರಾಣಿಗಳು ರಕ್ಷಣಾ ಸೇವೆ ತೊಡಗಿಸಿಕೊಂಡಿದ್ದ ಪ್ರಕಾಶ್​ ಅವರು ಹಾವಿನಿಂದಲೇ ಮೃತಪಟ್ಟಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದ್ದು, ಬಂಧುಮಿತ್ರರು ಮತ್ತು ಆಪ್ತರು ಪ್ರಕಾಶ್​ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೃದಯಾಘಾತದಿಂದ ಸರ್ಕಲ್​ ಇನ್ಸ್​ಪೆಕ್ಟರ್ ನಿಧನ: ಚಿತ್ರದುರ್ಗದ ಲಾಡ್ಜ್​ನಲ್ಲಿ ದುರ್ಘಟನೆ

ಇದೇನು IPL ಅಂದ್ಕೊಂಡಿದ್ದೀಯಾ? ಕೊಹ್ಲಿಯನ್ನು ಕೊಂಡಾಡಿ ರೋಹಿತ್​ಗೆ ಟಾಂಗ್​ ಕೊಟ್ಟ ನಟಿ ಶ್ರೀರೆಡ್ಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 1 =
Remember me
