ಇತಿಹಾಸ ಪ್ರಸಿದ್ಧಕೋಟೆ ನಾಡು ಎಂದೆ ಹೆಸರಾಗಿರುವ ಚಿತ್ರದುರ್ಗದ ಹೆಮ್ಮೆಯ ಎಸ್​ಆರ್​ಎಸ್ ಸಮೂಹ ಶಿಕ್ಷಣ ಸಂಸ್ಥೆಗಳಡಿ ನಡೆಯುತ್ತಿರುವ ಎಸ್​ಆರ್​ಎಸ್ ಪಿಯು ಕಾಲೇಜು ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಅದರಲ್ಲಿಯೂ 2023ರ ಬೋರ್ಡ್, ಜೆಇಇ ಹಾಗೂ ನೀಟ್ ಫಲಿತಾಂಶಗಳಲ್ಲಿ ಹಿಂದೆಂದೂ ಕಂಡುಕೇಳರಿಯದ ಅದ್ವಿತೀಯ ಸಾಧನೆ ಮಾಡಿದೆ.
ಪಿಯು ಎಂದರೆ ಯಾವುದೋ ಸಾಧಾರಣ ಕೋರ್ಸ್ ಅಲ್ಲ ಎಂದು ಸಾಬೀತುಪಡಿಸಿದ, ಮಧ್ಯ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಎಸ್​ಆರ್​ಎಸ್ ಪಿಯು ಕಾಲೇಜು 2009 ರಲ್ಲಿ ಕಾರ್ಯಾರಂಭ ಮಾಡಿದ್ದು, ಸ್ಥಾಪನೆಯಾದ ದಿನದಿಂದ ಇಂದಿನವರೆಗೂ ಪಿಯು ಫಲಿತಾಂಶದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. 2013ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ್, ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ 5 ನೇ ರ್ಯಾಂಕ್ ಗಳಿಸಿದ್ದು, ರಾಜ್ಯವೇ ಚಿತ್ರದುರ್ಗದ ಎಸ್​ಆರ್​ಎಸ್​ನ ಕಡೆ ತಿರುಗಿ ನೋಡುವಂತಾಯಿತು. ಹೀಗೆ ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತ ಬಂದಿದೆ.
ಬರಿ ಬೋರ್ಡ್ ಮಾತ್ರವಲ್ಲದೆ ಸಿಇಟಿ, ಜೆಇಇ, ನೀಟ್ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅಸಾಧಾರಣ ಸಾಧನೆ ಮಾಡಿರುವ ಎಸ್ ಆರ್​ಎಸ್ ಪಿಯು ಕಾಲೇಜು ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ. ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಮುಂಬೈ, ಖರಗಪುರ್, ಲಕ್ನೋ, ಐಐಟಿಗಳಲ್ಲಿ ಪದವಿ ಪೂರೈಸಿದ್ದು, ವೈದ್ಯಕೀಯ ವಿಭಾಗದಲ್ಲಿ ಏಮ್ಸ್​, ಬಿ.ಎಂ.ಸಿ. ಎಂ.ಎಂ.ಸಿ, ವಿಮ್ಸ್​ ಮುಂತಾದ ಹೆಸರಾಂತ ಕಾಲೇಜುಗಳಲ್ಲಿ ಪದವಿ ಪಡೆದು ಉತ್ತಮ ವೈದ್ಯರಾಗಿದ್ದಾರೆ. ರಾಜ್ಯಮಟ್ಟದ ಸಿಇಟಿಯಿಂದ ಜೆಇಇ, ನೀಟ್​ನಂತಹ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡಲು ಬೇಕಾದ ಪರಿಣತಿ ಸಾಧಿಸಿದೆ. ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಪ್ರವೇಶ ಪರೀಕ್ಷೆಗಳನ್ನು ಬರೆಯುವ ಅವಕಾಶವಿದೆ.
ಎನ್​ಸಿಇಆರ್​ಟಿ ಪಠ್ಯಕ್ರಮ ಜಾರಿಗೆ ಬಂದಾಗಿನಿಂದ ಪಿಯು ಶಿಕ್ಷಣ ಬೇರೆಯ ಮಜಲಿಗೆ ಹೊರಳಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಹೊಸ ಸವಾಲುಗಳನ್ನು ಒಡ್ಡಿದೆ. ಇದನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾದ ಎಸ್​ಆರ್​ಎಸ್ ತನ್ನ ಸಾಧನೆಯ ನಾಗಾಲೋಟವನ್ನು ಮುಂದುವರಿಸಿ ಪ್ರತಿ ವರ್ಷ ಹೊಸ ಇತಿಹಾಸವನ್ನು ದಾಖಲಿಸುತ್ತಿದೆ. 2023ನೇ ಸಾಲಿನ ಜೆಇಇ ಮೈನ್ಸ್​ನಲ್ಲಿ ರಾಷ್ಟ್ರಮಟ್ಟದ 136 ನೇ ರ್ಯಾಂಕ್​ಗೆ ಸರಿಸಮನಾಗಿ ನೀಟ್​ನಲ್ಲಿ ಎಂಟು ವಿದ್ಯಾರ್ಥಿಗಳು 720ಕ್ಕೆ 650 ಕ್ಕೂ ಹೆಚ್ಚು ಅಂಕಗಳಿಸುವುದಲ್ಲದೆ ಆ ಪೈಕಿ ಓರ್ವ ವಿದ್ಯಾರ್ಥಿ 675 ಅಂಕಗಳನ್ನು ಗಳಿಸಿರುವುದು (NTA ಬಿಡುಗಡೆ ಮಾಡಿರುವ Key ಆಧಾರದಲ್ಲಿ) ಎಸ್​ಆರ್​ಎಸ್ ಹಿರಿಮೆಗೆ ಹೊಸಗರಿ ಮೂಡಿಸಿದೆ. ಈ ಎಲ್ಲಾ ಸರಣಿ ಸಾಧನೆಗಳಿಂದ ಉತ್ತೇಜನಗೊಂಡ ಎಸ್​ಆರ್​ಎಸ್ ಪಿಯು ಕಾಲೇಜು, ಎರಡು ವರ್ಷಗಳ ಮೆಡಿಕಲ್ ಸೀಟ್ ಗ್ಯಾರಂಟಿ ಯೋಜನೆಯನ್ನು ಪರಿಚಯಿಸುವ ಮೂಲಕ ಪಿಯು ಶಿಕ್ಷಣಕ್ಕೆ ಹೊಸ ಮೆರುಗು ನೀಡಲು ಮುಂದಾಗಿದೆ.

ನೀಟ್, ಜೆಇಇ, ಕೋಚಿಂಗ್​ನಲ್ಲಿ ಈಗಾಗಲೇ ಪರಿಣತಿ ಸಾಧಿಸಿ, ರಾಷ್ಟ್ರಮಟ್ಟದ ರ್ಯಾಂಕ್ ಗಳಿಸಿರುವ ಎಸ್​ಆರ್​ಎಸ್​ ಪಿಯು ಕಾಲೇಜು ಇನ್ನೊಂದು ಹೆಜ್ಜೆ ಮುಂದಿಟ್ಟು ಈ ವರ್ಷದಿಂದ ನೀಟ್ ಲಾಂಗ್​ಟರ್ಮ್​ ಆಕಾಂಕ್ಷಿಗಳಿಗೂ ಸಹ ಮೆಡಿಕಲ್ ನೀಟ್ ಗ್ಯಾರಂಟಿ ಯೋಜನೆ (ಸ್ಕೀಮ್ ಜಾರಿಗೆ ತಂದಿದೆ. ಈ ಮೆಡಿಕಲ್ ಸೀಟ್ ಗ್ಯಾರಂಟಿ ಯೋಜನೆಯಡಿ ದಾಖಲಾದ ಪ್ರತಿಯೊಬ್ಬರಿಗೂ ವೈದ್ಯಕೀಯ ಸೀಟಿನ ಪ್ರತಿಶತ 100 ರಷ್ಟು ಗ್ಯಾರಂಟಿ (ಖಾತ್ರಿ) ನೀಡಲಾಗುವುದು. ಈಗಾಗಲೇ ಪ್ರಸ್ತುತ ಸಾಲಿನ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿರುವ ಮೆಡಿಕಲ್ ಸ್ಟಾರ್ ಬ್ಯಾಚಿನ ಹಾಗೂ ಲಾಂಗ್​ಟರ್ಮ್​ ವಿದ್ಯಾರ್ಥಿಗಳಿಗೆ ಸೀಟ್ ಗ್ಯಾರಂಟಿ ಪ್ರೋಗ್ರಾಮ್​ ಅಡಿಯಲ್ಲಿ ತರಬೇತಿ ನೀಡುತ್ತಿದ್ದು, ಸೀಟ್ ಪಡೆಯದಿದ್ದರೆ ಕೋಚಿಂಗ್ ಶುಲ್ಕವನ್ನು ಹಿಂದಿರುಗಿಸಲಾಗುವುದು. ಈ ಸ್ಕೀಮಿಗೆ ನೀಟ್ ತರಬೇತಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ವಿಷಯತಜ್ಞರನ್ನು ನೇಮಿಸಲಾಗಿದೆ.
ಕೋಟಾ, ಹೈದರಾಬಾದ್ ಹಾಗೂ ದೆಹಲಿಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ವಿಷಯ ಪರಿಣತರಾದ ಇವರು ಪ್ರತಿಷ್ಠಿತ ಖರಗಪುರ್ ಐಐಟಿ ಹಾಗೂ ಚೆನ್ನೈ ಐಐಟಿಯಿಂದ ಡಾಕ್ಟರೇಟ್ ಪದವಿ ಪಡೆದವರಾಗಿದ್ದಾರೆ. ತಮ್ಮ ಬೋಧನೆ ಹಾಗೂ ತರಬೇತಿಯಿಂದಲೇ ಖ್ಯಾತಿ ಗಳಿಸಿರುವ ಇವರು ಈಗಾಗಲೇ ಮಂಗಳೂರು ಹಾಗೂ ಹೈದರಾಬಾದ್ ಪ್ರತಿಷ್ಠಿತ ಪಿಯು ಕಾಲೇಜುಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ಇಂತಹ ವಿಷಯತಜ್ಞರೆ ಗ್ಯಾರಂಟಿ ಸ್ಕಿಂನ ಉಸ್ತುವಾರಿ ಹಾಗೂ ಮಾರ್ಗದರ್ಶಕರಾಗಿರುತ್ತಾರೆ.
ವೃತ್ತಿಪರ ಹಾಗೂ ಅನುಭವಿ ವಿಷಯತಜ್ಞರನ್ನು ಹೊಂದಿ ನೀಟ್, ಜೆಇಇ, ಸಿಇಟಿಯಲ್ಲಿ ಉತ್ತಮ ಫಲಿತಾಂಶ ಗಳಿಸಿರುವ ಎಸ್​ಆರ್​ಎಸ್ ಪಿಯು ಕಾಲೇಜಿಗೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ ನೀಟ್​ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಈ ನಿರ್ಧಾರ ಮಹತ್ವದ್ದಾಗಿದೆ. ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಸಾವಿರಾರು ವೈದ್ಯಕೀಯ ಆಕಾಂಕ್ಷಿಗಳಿಗೆ ಸುಮಾರು 12 ಎಕರೆ ದೊಡ್ಡ ಕ್ಯಾಂಪಸ್ಸನ್ನುಹೊಂದಿರುವ ಕಾಲೇಜಿನಲ್ಲಿ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ನಿರಂತರ ಅಧ್ಯಯನಕ್ಕೆ ಅಣಿಗೊಳಿಸಲಾಗಿದೆ.
ಎಸ್​ಆರ್​ಎಸ್ ಪಿಯು ಕಾಲೇಜು ಮೆಡಿಕಲ್ ಲಾಂಗ್​ಟರ್ಮ್​ ವಿದ್ಯಾರ್ಥಿಗಳು ಹತ್ತು ತಿಂಗಳ ಅವಧಿಯಲ್ಲಿ ಸುಮಾರು 75000 80000 ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಗಳು ಒಟ್ಟು 40 ವೀಕೆಂಡ್ ಟೆಸ್ಟ್ ಹಾಗೂ 60 ಪೂರ್ಣ ಪ್ರಮಾಣದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿದಿನ ವಿಷಯವಾರು 75 ರಿಂದ 80 ಪ್ರಶ್ನೆಗಳನ್ನು ಪ್ರತೀ ವಿದ್ಯಾರ್ಥಿಯು ಅಭ್ಯಸಿಸಬೇಕಾಗುತ್ತದೆ. ಹಾಗಾಗಿ ಪರೀಕ್ಷೆಗಳಿಲ್ಲದ ಒಟ್ಟು 200 ದಿನಗಳಲ್ಲಿ ವಿದ್ಯಾರ್ಥಿಗಳು 60000 ಪ್ರಶ್ನೆಗಳು ಹಾಗೂ 100 ಟೆಸ್ಟ್​ಗಳ ಪ್ರಶ್ನೆಪತ್ರಿಕೆಗಳಿಂದ ಒಟ್ಟು 20000 ಪ್ರಶ್ನೆಗಳನ್ನು ಅಭ್ಯಾಸ ಮಾಡುತ್ತಾರೆ. ಇದರ ಜೊತೆಗೆ ಕೋಟಾ ಹಾಗೂ ಹೈದರಾಬಾದ್​ನ ಪ್ರತಿಷ್ಠಿತ ಕಾಲೇಜುಗಳ ಅತ್ಯುತ್ತಮ ಪ್ರಶ್ನೆಪತ್ರಿಕೆಗಳನ್ನೂ ಅಭ್ಯಾಸಕ್ಕಾಗಿ ನೀಡಲಾಗುತ್ತದೆ. ಈ ಮೆಡಿಕಲ್ ಲಾಂಗ್​ಟರ್ಮ್​ ಗ್ಯಾರಂಟಿ ಸ್ಕೀಂನ ಅಡಿಯಲ್ಲಿ ಬರುವ ವಿದ್ಯಾರ್ಥಿಗಳು 2023ನೇ ಸಾಲಿನಲ್ಲಿ ಆಯಾ ಮೀಸಲಾತಿಯಡಿ ವೈದ್ಯಕೀಯ ತರಬೇತಿ ಅರ್ಹತೆಗಾಗಿ NTA ನಿಗದಿ ಪಡಿಸುವ ಅಂಕಗಳನ್ನು ಪ್ರತೀ ವಾರ ಕಾಲೇಜಿನಲ್ಲಿ ನಡೆಸುವ ಟೆಸ್ಟ್ ಗಳಲ್ಲಿ ಕಾಯ್ದುಕೊಳ್ಳಲೇಬೇಕು. ಜನವರಿ ತಿಂಗಳ ಹೊತ್ತಿಗೆ 650 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ನಿಯಮಿತವಾಗಿ ಆನ್​ಲೈನ್ ಪರೀಕ್ಷೆಗಳನ್ನು ನೀಡಿ ಅಂತಿಮ ನೀಟ್ ಪರೀಕ್ಷೆಯಲ್ಲಿ 720 ಕ್ಕೆ 700 ಅಂಕಗಳಿಸಲು ಶಕ್ತರಾಗುವಂತೆ ತಯಾರು ಮಾಡಲಾಗುತ್ತದೆ.
| ಶ್ರೀ ಬಿ.ಎ. ಲಿಂಗಾರೆಡ್ಡಿ ಅಧ್ಯಕ್ಷರು, ಎಸ್​ಆರ್​ಎಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಚಿತ್ರದುರ್ಗ
ವೆಬ್​ಸೈಟ್:www.srspucollege.in
ಗುಣಮಟ್ಟದ PUC ಶಿಕ್ಷಣಕೆ ಎಸ್​ಆರ್​ಎಸ್ ಕಾಲೇಜನ್ನು ಸಂಪರ್ಕಿಸಿ:ಫೋನ್:9591453336,9900000811,9901852435ವೆಬ್​ಸೈಟ್: www.srspucollege.in
Sign in to your account
Please enter an answer in digits:8 + 12 =
Remember me
