ಚಿತ್ರದುರ್ಗ:ದೀಪಾವಳಿ ದಿನವೇ ಚಿತ್ರದುರ್ಗದಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನವಾಗಿದ್ದು, ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗುತ್ತಿದ್ದ 7 ಲಕ್ಷ ನಗದನ್ನು ಖದೀಮನೊಬ್ಬ ಹಾಡಹಗಲೇ ದೋಚಿ ಪರಾರಿಯಾಗಿದ್ದಾನೆ.
ನಗರದ ಹೊಳಲ್ಕೆರೆ ರಸ್ತೆಯ ಮೋರ್ ಮಾಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಡಿಕೆ ಮಂಡಿ ಮ್ಯಾನೇಜರ್ ಭೀಮಸಮುದ್ರ ಮೂಲದ ಓಂಕಾರಪ್ಪ ಎಂಬುವವರಿಗೆ ಸೇರಿದ ಹಣವಾಗಿದ್ದು, ಎಸ್​ಬಿಐ ಬ್ಯಾಂಕಿನಲ್ಲಿ ಹೊಸ ನೋಟು ಎಕ್ಸ್ ಚೇಂಜ್ ಮಾಡಿಕೊಂಡು ಹೋಗುವಾಗ ಕಳ್ಳತನ ನಡೆದಿದೆ.
ಇದನ್ನೂ ಓದಿ:ಇವರು ಇನ್​ಸ್ಟಾಗ್ರಾಮ್​ಗೆ ಬಂದಿದ್ದೇ ತಡ, ಭರ್ಜರಿ ಫಾಲೋವರ್ಸ್!; ನಾಲ್ಕೇ ಗಂಟೆಗಳಲ್ಲಿ ದಾಖಲೆ!
ಓಂಕಾರಪ್ಪ ಲಕ್ಷ್ಮಿಪೂಜೆಗಾಗಿ ಹೊಸನೋಟು ತೆಗೆದುಕೊಂಡು ಹೋಗುತ್ತಿದ್ದರು. ಬೈಕ್ ಹಿಂಬದಿ ಬ್ಯಾಗ್​ನಲ್ಲಿ ಹಣವನ್ನಿಟ್ಟು ಮನೆಗೆ ಹೋಗುವಾಗ ಮೋರ್ ಮಾಲ್ ಬಳಿ ಬೈಕ್ ನಿಲ್ಲಿಸಿ ಕಿರಾಣಿ ಅಂಗಡಿಗೆ ಚಾಕಲೇಟ್ ತರಲು ಹೋಗಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ಖತರ್ನಾಕ್ ಕಳ್ಳ ಹಣ ದೋಚಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಕೋಟೆ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
2 ಕಾರು, ಬಸ್​, ಕ್ಯಾಂಟರ್, ಟಾಟಾ ಏಸ್ ಸರಣಿ ಅಪಘಾತ; ಇಬ್ಬರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 11 =
Remember me
