ಚಿತ್ರದುರ್ಗ:ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ. ಬಾಣಂತಿ ಎಂದೂ ನೋಡದೆ ಊರಿನಿಂದ ಹೊರಗೆ ಹಾಕುವ ಮೂಲಕ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಎನ್​. ದೇವರಹಳ್ಳಿ ಗ್ರಾಮದ ಮುಖಂಡರು ಅಮಾನವೀಯವಾಗಿ ವರ್ತಿಸಿದ್ದಾರೆ.
ಎನ್.ದೇವರಹಳ್ಳಿಯ ಸಾವಿತ್ರಮ್ಮ ಹಾಗೂ ಆಂಧ್ರ ಪ್ರದೇಶ ಮೂಲದ ಮಣಿಕಂಠ ಇಬ್ಬರಿಗೂ ವಾಕ್-ಶ್ರವಣ ದೋಷವಿದ್ದು ವಿದ್ಯಾಭ್ಯಾಸ ಪಡೆದಿದ್ದರು. 3 ವರ್ಷದ ಹಿಂದೆಯೇ ಪ್ರೀತಿಸಿ ಇಬ್ಬರು ಮದುವೆ ಆಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ನಗರದಲ್ಲಿ ನೆಲೆಸಿದ್ದರು. ಮದುವೆ ಬಳಿಕ ಜೋಡಿ ಎನ್.ದೇವರಹಳ್ಳಿಗೆ ಬಂದಿತ್ತು. ಆದರೆ, ಇಬ್ಬರದು ಅಂತರ್ಜಾತಿ ವಿವಾಹ ಎಂಬ ಕಾರಣಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ.
ಇದನ್ನೂ ಓದಿ:ಕಾಶ್ಮೀರಿ ಗೇಟ್ ಬಳಿ ಖಲಿಸ್ತಾನ್ ಪರ ಘೋಷಣೆ ಬರೆದಿದ್ದಕ್ಕಾಗಿ ಎಫ್‌ಐಆರ್ ದಾಖಲು; ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ
ಎನ್.ದೇವರಹಳ್ಳಿಯ ಜೋಗಿ ಸಮಾಜದ ಮುಖಂಡರು ಇಂಥದ್ದೊಂದು ಅಮಾನವೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಬಹಿಷ್ಕಾರ ಹಾಕಿದ್ದಲ್ಲದೆ, 30 ಸಾವಿರ ರೂ. ದಂಡ ಸಹ ವಸೂಲಿ ಮಾಡಿದ್ದಾರೆ. ಇದಾದ ಬಳಿಕ ದಂಪತಿ ಮತ್ತೆ ಬೆಂಗಳೂರಿಗೆ ತೆರಳಿದರು. ಸಾವಿತ್ರಮ್ಮ ತಿಂಗಳ ಹಿಂದೆ ಮಗುವಿಗೆ ಜನ್ಮ‌ ನೀಡಿದ್ದು, ಬಾಣಂತಿಯಾಗಿರುವ ಆಕೆ ತವರು ಮನೆಗೆ ಬಂದಾಗ ಗ್ರಾಮಸ್ಥರು ಮತ್ತೆ ಕಿರಿಕ್ ಮಾಡಿದ್ದಾರೆ. ಮನೆ ಬಿಟ್ಟು ಹೊಗುವಂತೆ ಒತ್ತಡ ಹಾಕಿದ್ದಾರೆ.
ಗ್ರಾಮದಿಂದ ಬಹಿಷ್ಕಾರ ಹಿನ್ನೆಲೆಯಲ್ಲಿ ದಂಪತಿ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ. ಇದೀಗ ಪುಟ್ಟ ಮಗುವಿನೊಂದಿಗೆ ದಂಪತಿ ಚಳ್ಳಕೆರೆಯ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸಾಮಾಜಿಕ ಹೋರಾಟಗಾರರು ಸಂತ್ರಸ್ತ ದಂಪತಿಯ ಪರ ನಿಂತಿದ್ದು, ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.(ಏಜೆನ್ಸೀಸ್​)
ಕಾವೇರಿ ಕಿಚ್ಚಿಗೆ ನಾಳೆ ಕರ್ನಾಟಕ ಸ್ತಬ್ಧ: ಬಂದ್​ ತಯಾರಿ ಜೋರು, ನಾಳೆ ಏನಿರುತ್ತೆ? ಏನಿರಲ್ಲ?

ರಾಜಮೌಳಿಯು ಅಲ್ಲ ಅಟ್ಲಿಯು ಅಲ್ಲ… ಸ್ಕ್ರಿಪ್ಟ್​ ಇಲ್ಲದೇ ಮುಂದಿನ ಚಿತ್ರಕ್ಕೆ 55 ಕೋಟಿ ರೂ. ಪಡೆದ ನಿರ್ದೇಶಕ!

ಕೇವಲ 1 ಕಿ.ಮೀ. ತಲುಪಲು 2 ಗಂಟೆ! ಸಾಲು ಸಾಲು ರಜೆ, ಬೆಂಗ್ಳೂರು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಪರದಾಡಿದ ಜನರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
