ಬೆಂಗಳೂರು:ನಗರದ ಮಲ್ಲೇಶ್ವರದ ಗಾಂಧಿ ಗ್ರಾಮ ಪ್ರದೇಶದ ಪಿಜಿಯಲ್ಲಿ ವಾಸವಿದ್ದ ಬೆಳ್ಳಂದೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 27 ವರ್ಷ ಯುವತಿಯಲ್ಲಿ ಕಾಲರಾ ರೋಗ ಶಂಕೆ ವ್ಯಕ್ತವಾಗಿದೆ.
ಯುವತಿಯು ಮಾ.30 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಏ.3 ರಂದು ಗುಣಮುಖರಾಗಿ ಮನೆ ತೆರಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಯುವತಿ ವಾಸ ಇರುವ ಪ್ರದೇಶದ ಸುಮಾರು 100 ಮನೆಗಳನ್ನು ಸರ್ವೇ ಮಾಡಲಾಗಿದೆ. ಕಾಲರಾ ರೋಗದ ಲಕ್ಷಣ ಇರುವ ರೋಗಿಗಳು ಪತ್ತೆಯಾಗಿಲ್ಲ.
ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಶೇ 50 ರಷ್ಟು ಏರಿಕೆಯಾಗಿವೆ. ನಗರದಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ಸಾಮಾನ್ಯವಾಗಿ ತಿಂಗಳಿಗೆ ಒಂದು ಅಥವಾ ಎರಡು ಕಾಲರಾ ಪ್ರಕರಣಗಳನ್ನು ವರದಿ ಮಾಡುತ್ತವೆ. ಮಾರ್ಚ್‌ನಲ್ಲಿ ಹದಿನೈದು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಆರು ಅಥವಾ ಏಳು ಪ್ರಕರಣಗಳು ದೃಢಪಟ್ಟಿದ್ದವು.
ಕಳಪೆ ನೈರ್ಮಲ್ಯ ಮತ್ತು ಕಲುಷಿತ ನೀರಿನ ಮೂಲಗಳು ನಗರದಲ್ಲಿ ಕಾಲರಾ ಪ್ರಕರಣಗಳ ಉಲ್ಬಣಕ್ಕೆ ಮುಖ್ಯ ಕಾರಣಗಳಾಗಿವೆ. ರಸ್ತೆ ಬದಿಯ ತಳ್ಳುಗಾಡಿಗಳಲ್ಲಿ ಆಹಾರ ಸೇವಿಸಿದವರಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾಗುತ್ತಿವೆ. ತೀವ್ರವಾದ ನೀರಿನ ಕೊರತೆಯಿಂದ ಈ ಸಣ್ಣಪುಟ್ಟ ವ್ಯಾಪಾರಿಗಳು ಕಲುಷಿತ ನೀರನ್ನು ಅಡುಗೆಗೆ ಬಳಸಿರುವ ಸಾಧ್ಯತೆ ಇದೆ. ಹೀಗಾಗಿ ಸೋಕು ಹರಡುವಿಕೆ ಉಲ್ಬಣಗೊಳ್ಳುತ್ತಿರಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಲರಾ ಎಂದರೇನು?:ಕಾಲರಾವು ವಿಷಕಾರಿ ಬ್ಯಾಕ್ಟೀರಿಯ ವಿಬ್ರಿಯೊ ಕಾಲರಾದಿಂದ ಹರಡುವ ಸೋಂಕಾಗಿದೆ. ಈ ಬ್ಯಾಕ್ಟೀರಿಯಾದಿಂದ ಕರುಳಿನ ಸೋಂಕು ಉಂಟಾಗುತ್ತದೆ. ಪರಿಣಾಮವಾಗಿ ತೀವ್ರವಾದ ವಾಂತಿ ಭೇದಿ ಕಾಯಿಲೆಗೆ ವ್ಯಕ್ತಿ ತುತ್ತಾಗುತ್ತಾರೆ.
ಅಮೆರಿಕಾದಲ್ಲಿರುವ ನಟಿ ಆರತಿ ಗುಟ್ಟಾಗಿ ಪದೇಪದೇ ಕೋಲಾರಕ್ಕೆ ಯಾಕೆ ಬರ್ತಾರೆ?

ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ ಕಳ್ಳ ಬೆಕ್ಕನ್ನು ಹುಡುಕಿಕೊಟ್ರೆ ನೀವೇ ಗ್ರೇಟ್

“ಒಂದು ರಿಪ್ಲೇ ಕೊಡಿ ಸಾಕು” ಎಂದು ಮನವಿ ಮಾಡಿದ ಅಭಿಮಾನಿ; ಕಿಚ್ಚ ರಿಪ್ಲೈ​ ಮಾಡಿದಾಗ ಓದಲು ಆತನೇ ಬದುಕಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
