ಬೆಂಗಳೂರು:‘ಛೋಟಾ ಬಾಂಬೆ’ ಕನ್ನಡ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರದ ನಿರ್ಮಾಪಕರೂ ಆದ ಯೂಸುಫ್ ಖಾನ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಹುಬ್ಬಳ್ಳಿಯೇ ‘ಛೋಟಾ ಬಾಂಬೆ’. ಹೂಬಳ್ಳಿಯಂತಿದ್ದ ಊರು ಹುಬ್ಬಳ್ಳಿಯಾಗಿ ರೂಪುಗೊಂಡಿದ್ದು, ಅಲ್ಲಿ ನಡೆದ ಘಟನೆ, ರೌಡಿಯಿಸಂ, ಅಪರಾಧ ಜಗತ್ತು… ಹುಬ್ಬಳ್ಳಿಯನ್ನು ಮತ್ತೆ ಹೂಬಳ್ಳಿ ಮಾಡೋ ಪರಿಕಲ್ಪನೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಸೂರಜ್ ಸಾಸನೂರ ಮತ್ತು ಅಭಿಷೇಕ್ ಜಾಲಿಹಾಳ ನಾಯಕ ನಟರಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹೀರೋ, ಹೀರೋಯಿನ್, ವಿಲನ್, ಸಹ ಪಾತ್ರಧಾರಿಗಳು ಹೀಗೆ ಬಹುತೇಕರು ಉತ್ತರ ಕರ್ನಾಟಕ್ಕೆ ಸೇರಿದವರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮುಂಡಗೋಡ ಸೇರಿ ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಕಥೆ, ಉತ್ತರ ಕರ್ನಾಟಕದವರ ಅಭಿನಯ, ಉತ್ತರ ಕರ್ನಾಟಕದವರ ನಿರ್ದೇಶನ ಒಳಗೊಂಡ ಈ ಚಿತ್ರವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
'ಛೋಟಾ ಬಾಂಬೆ' ಕನ್ನಡ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಹುಬ್ಬಳ್ಳಿ 'ಛೋಟಾ ಬಾಂಬೆ' ಆಗಿದ್ದು ಹೇಗೆ? ಹುಬ್ಬಳ್ಳಿಯನ್ನು ಮತ್ತೆ ಹೂಬಳ್ಳಿ ಮಾಡೋ ಪರಿಕಲ್ಪನೆ ಈ ಚಿತ್ರದಲ್ಲಿದೆ.#ChotaBombay#Sandalwood#Hubli#Hooballi#KannadaFilmpic.twitter.com/2OiOK7msLH
— Vijayavani (@VVani4U)July 1, 2022

ಹಣಕ್ಕಾಗಿ ಸುಚೇಂದ್ರ ಪ್ರಸಾದ್ ಜತೆ ನಾನು ಮದ್ವೆ ಆಗಿರ್ಲಿಲ್ಲ.. ನನ್ನ ಟಾರ್ಗೆಟ್ ಮಾಡೋದೆ ಆಕೆ ಉದ್ದೇಶ: ಪವಿತ್ರಾ ಲೋಕೇಶ್ ಆಕ್ರೋಶ

ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
