ಮೈಸೂರು: ಕರೊನಾವೈರಸ್ ಕುರಿತು ಅನಿಮೇಷನ್​ ಮೂಲಕ ಜಾಗೃತಿ ಮೂಡಿಸಲು ಮೈಸೂರು ಮೂಲದ ಅನಿಮೇಷನ್ ಸಂಸ್ಥೆ ಮುಂದಾಗಿದೆ. ಈಗಾಗಲೇ ಒಂದೂವರೆ ನಿಮಿಷದ ‘ಚೋಟಿ ಚೇತನಾ’ ಅನಿಮೇಷನ್ ಚಿತ್ರ ಸಿದ್ಧಪಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಚೇರಿಗೆ ತಲುಪಿಸಲಾಗಿದೆ.
ಹಿಂದಿ ಅವತರಣಿಕೆಯ ಒಟ್ಟು ಆರು ಅನಿಮೇಷನ್ ತುಣುಕುಗಳು ಇದ್ದು, ಇನ್ನು ಐದು ಅನಿಮೇಷನ್ ಚಿತ್ರಗಳ ಸಿದ್ಧತೆ ಅಂತಿಮ ಹಂತದಲ್ಲಿವೆ. ಕರೊನಾವೈರಸ್ ನಿಗ್ರಹಿಸಲು ಹೋರಾಡುತ್ತಿರುವ ವೈದ್ಯರು, ನರ್ಸ್​ಗಳು, ಪೊಲೀಸರು, ಪೌರಕಾರ್ವಿುಕರು ಸೇರಿ ಇನ್ನಿತರರ ಸೇವೆಯನ್ನು ಸ್ಮರಿಸುವ ಪುಟ್ಟ ಬಾಲಕಿ ‘ಮೋದಿ ಅಂಕಲ್’ ಹೇಳಿದ್ದನ್ನು ಪಾಲಿಸಿ ಮನೆಯಲ್ಲಿಯೇ ಇರಿ ಎನ್ನುವ ಸಲಹೆ ನೀಡಿದ್ದಾರೆ.
ಇಂತಹ ಕ್ರಿಯೇಟಿವ್ ಅನಿಮೇಷನ್ ಸೃಷ್ಟಿಸಿರುವವರು ಶಾಸಕ ಎಸ್.ಎ.ರಾಮದಾಸ್ ಸಹೋದರ ಎಸ್.ಎ. ಶ್ರೀಕಾಂತ್​ದಾಸ್ ನೇತೃತ್ವದ ‘ಓಂ ಅನಿಮೇಷನ್’ ತಂಡ. ಮೈಸೂರು, ಮಂಗಳೂರಿನ ಸ್ಟುಡಿಯೋದಲ್ಲಿ ಈ ಚಿತ್ರ ನಿರ್ವಣಗೊಂಡಿದೆ.
ನಾಗರಿಕರಾದ ದೊಡ್ಡವರೇ ಕರೊನಾ ನಿಯಂತ್ರಿಸಲು ನಿಯಮ ಪಾಲನೆ ಮಾಡದಿರುವುದಾಗ ಜನರಲ್ಲಿ ಜಾಗೃತಿ ಮೂಡಿಸಲು ನಾಲ್ಕು ವರ್ಷದ ಪುಟ್ಟ ಬಾಲಕಿ ‘ಚೋಟಿ ಚೇತನಾ’ ಸೃಷ್ಟಿಯಾಗಿದ್ದಾಳೆ. ಚೋಟಾ ಭೀಮ್ ಮಾದರಿಯಲ್ಲಿ ಈ ಪುಟ್ಟ ಬಾಲಕಿ ಮೋದಿಯನ್ನು ‘ಅಂಕಲ್’ ಎಂದು ಸಂಬೋಧಿಸುತ್ತ, ನಮ್ಮೆಲ್ಲರ ರಕ್ಷಣೆಗೆ ನಿಂತಿರುವ ಅವರ ಆಜ್ಞೆಯನ್ನು ಎಲ್ಲರೂ ಪಾಲಿಸಬೇಕು ಎನ್ನುವ ಸಂದೇಶ ನೀಡಿದ್ದಾಳೆ.
ತಮ್ಮ ಜೀವನದ ಹಂಗು ತೊರೆದು ವೈದ್ಯರು, ನರ್ಸ್​ಗಳು, ಪೊಲೀಸರು, ಪೌರಕಾರ್ವಿುಕರು, ಇತರರು ದುಡಿಯುತ್ತಿದ್ದಾರೆ. ತಮ್ಮ ಪ್ರೀತಿಪಾತ್ರರು, ಹೆಂಡತಿ, ಮಕ್ಕಳನ್ನು ಮುಟ್ಟಲು ಸಾಧ್ಯವಿಲ್ಲದಂತೆ ಬಲು ದೂರವೇ ನಿಂತು ಹಗಲಿರುಳು ಶ್ರಮಿಸುತ್ತಿರುವ ಅವರ ಸೇವೆಗೆ ನಾವೆಲ್ಲರೂ ಬೆಲೆ ಕೊಡಬೇಕು. ಮೋದಿ ಅಂಕಲ್ ಹೇಳುವಂತೆ ಹೊರಗಿನ ಚಿಂತೆ ಬಿಟ್ಟು ನೀವು ನಿಮ್ಮ ಕುಟುಂಬದೊಂದಿಗೆ ನೆಮ್ಮದಿಯಾಗಿ ಇದ್ದು, ಆಟವಾಡಿ, ಸಹಾಯ ಮಾಡಿ. ಒಂದೊಮ್ಮೆ ಬೋರ್ ಅದರೆ ನನಗೆ ಕಾಲ್ ಮಾಡಿ ಎನ್ನುವ ಮಾತುಗಳನ್ನು ಹೇಳುವ ಮೂಲಕ ಕರೊನಾ ಹರಡುವಿಕೆಯಿಂದ ದೂರ ಇರಿ ಎನ್ನುವ ಕೋರಿಕೆಯನ್ನು ಪುಟ್ಟಬಾಲಕಿ ಮನಮುಟ್ಟುವಂತೆ ಹೇಳುತ್ತಾಳೆ.
ಕೋವಿಡ್​ಗಾಗಿ ಪರೀಕ್ಷೆ ನಡೆಸಿದರೆ ಹಿಮಾಚಲದಲ್ಲಿ ಇನ್​ಫ್ಲೂಯೆನ್ಜಾ ರೀತಿಯ ಜ್ವರದಿಂದ ಬಳಲುತ್ತಿರುವ 10 ಸಾವಿರ ಜನ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
