ಬೆಂಗಳೂರು:ಚಿಕ್ಕಬಳ್ಳಾಪುರ ಜಿಲ್ಲೆಯ ಅರಿಕೆರೆ ಗ್ರಾಮದ ಸರ್ವೆ ನಂಬರ್ 10ರಲ್ಲಿ ಕ್ರಿಶ್ಚಿಯನ್ ಮಿಶನರಿಗಳು 170 ಎಕರೆ ಗೋಮಾಳ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅಲ್ಲಿ ಅಕ್ರಮವಾಗಿ ಚರ್ಚ್, ಶಿಲುಬೆ ತಲೆಎತ್ತಿವೆ. ಇದಕ್ಕೆ ಮಿಶನರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯನ್ನೂ ಪಡೆದಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯಿಂದ ದೃಢಪಟ್ಟಿದೆ. ಮಿಶನರಿಗಳ ಈ ಕೃತ್ಯ ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನೂ ಓದಿ:ಉದ್ಯಮಿಗಳೇ ಇವರ ಟಾರ್ಗೆಟ್​: ಖತರ್ನಾಕ್​ ವಂಚಕನಿಗೆ ಖಳನಾಯಕಿಯ ಸಾಥ್​!
‘‘ಈ ಜಾಗವು ಒಟ್ಟು 173 ಎಕರೆ ಸರ್ಕಾರಿ ಗೋಮಾಳವಾಗಿದೆ. ಈ ಪೈಕಿ 1 ಎಕರೆಯನ್ನು ಸಾರ್ವಜನಿಕ ಸ್ಮಶಾನಕ್ಕೆ, ಇನ್ನು 2 ಎಕರೆಯನ್ನು ಬಹಳ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಬಿಟ್ಟುಕೊಡಲಾಗಿದೆ. ಉಳಿದ 170 ಎಕರೆ ಜಾಗವನ್ನು ಕ್ರೈಸ್ತ ಮಿಶನರಿಗಳು ಅತಿಕ್ರಮಿಸಿಕೊಂಡಿದ್ದಾರೆ’’ ಎಂದು ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಆರೋಪಿಸಿದ್ದಾರೆ.
ಈ ಬೆಟ್ಟಕ್ಕೆ ಮಹಿಮಾ ಬೆಟ್ಟ ಎಂದೂ ಮಿಶನರಿಗಳು ಹೆಸರಿಟ್ಟಿದ್ದಾರೆ. ಬೆಟ್ಟಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿ ಉದ್ದಕ್ಕೂ ಶಿಲುಬೆಗಳನ್ನು ನೆಟ್ಟಿದ್ದಾರೆ. ಮತಾಂತರವಾಗುವ ಜನರನ್ನು ಇಲ್ಲಿಗೆ ಕರೆತಂದು ಪ್ರತಿ ತಿಂಗಳು ಕಾರ‌್ಯಕ್ರಮ ಏರ್ಪಡಿಸಿ ಅವರಿಗೆ ಸನ್ಮಾನ- ಬೋಧನೆ ಮಾಡುವುದು ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.ಇದನ್ನೂ ಓದಿ:ಜ್ಯುವೆಲರಿ ಶಾಪ್ ಬಳಿ ಆಚಾರಿ ಕೆಲ್ಸ ಮಾಡ್ತಿದ್ದವ ಕದ್ದು ಸಂಗ್ರಹಿಸಿದ್ದ ಚಿನ್ನದ ಬೆಲೆ ಕೇಳಿದ್ರೆ ದಂಗಾಗ್ತೀರಾ!​
ಅರಿಕೆರೆ ಗ್ರಾಮಕ್ಕೆ ಈ ಕ್ರೈಸ್ತ ಮಿಶನರಿ ಸಂಸ್ಥೆ ಐದಾರು ವರ್ಷಗಳ ಹಿಂದೆ ಬಂದು ಸೇರಿಕೊಂಡಿದೆ. ನಂತರ ನಿಧಾನವಾಗಿ ಹಿಂದು ಕುಟುಂಬಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಇನ್ನೂ ಈ ಷಡ್ಯಂತ್ರವನ್ನು ಮುಂದುವರಿಸಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
https://www.facebook.com/VVani4U/videos/2835697419875662/?v=2835697419875662
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 1 =
Remember me
