ಬೆಂಗಳೂರು: ರಾಜಧಾನಿಯ 21 ಪೊಲೀಸರಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ಚಿಕ್ಕಪೇಟೆ ಉಪ ವಿಭಾಗ ಎಸಿಪಿ, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಇನ್​ಸ್ಪೆಕ್ಟರ್, ಕಲಾಸಿಪಾಳ್ಯ ಠಾಣೆ ಇನ್​ಸ್ಪೆಕ್ಟರ್, ಲೋಕಾ ಯುಕ್ತದ ಇಬ್ಬರು ಪೇದೆ, ಕೆಂಪಾಪುರ ಅಗ್ರಹಾರ ಠಾಣೆ ಪೇದೆ, ರಾಜ್ಯ ಅಪರಾಧ ದಾಖಲಾತಿ ವಿಭಾಗದ 6 ಮಂದಿ ಹಾಗೂ ಸಿಐಡಿಯ 9 ಸಿಬ್ಬಂದಿಗೆ ಸೋಂಕು ತಗುಲಿರುವುದು ಆರೋಗ್ಯ ಇಲಾಖೆಯ ವರದಿಯಿಂದ ಗೊತ್ತಾಗಿದೆ.
43 ಮಂದಿ ಡಿಸ್ಚಾರ್ಜ್: ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಗರದಲ್ಲಿ ಈವರೆಗೆ 168ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದು, 43 ಮಂದಿ ಗುಣಮುಖರಾಗಿದ್ದಾರೆ. ಕಳೆದ ವಾರ ಸಿಐಡಿ ವಿಶೇಷ ತನಿಖಾ ತಂಡದ ಪಿಎಸ್​ಐಗೆ ಸೋಂಕು ತಗುಲಿತ್ತು. ಹೀಗಾಗಿ, ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೂ ಕರೊನಾ ಪರೀಕ್ಷೆ ಮಾಡಿಸಿ, ಕ್ವಾರಂಟೈನ್ ಮಾಡಲಾಗಿತ್ತು. ವರದಿ ಬಂದಿದ್ದು, 9 ಮಂದಿಗೆ ಪಾಸಿಟಿವ್ ಇರುವುದು ಗೊತ್ತಾಗಿದೆ. ಇದೀಗ ಸಿಐಡಿ ಕಚೇರಿಯನ್ನು ಸೀಲ್​ಡೌನ್ ಮಾಡಲಾಗಿದೆ.
ಇದನ್ನೂ ಓದಿ:ದೂರು ಕೊಡಲು ಹೊರಟವಳ ಹತ್ಯೆ
ಎಸ್​ಸಿಆರ್​ಬಿ ಕಚೇರಿ ಸೀಲ್​ಡೌನ್: ಎಂ.ಎಸ್. ಬಿಲ್ಡಿಂಗ್​ನ 6ನೇ ಮಹಡಿಯಲ್ಲಿರುವ ಅಪರಾಧ ವರದಿ ದಾಖಲಾತಿ ವಿಭಾಗದ 6 ಸಿಬ್ಬಂದಿಗೆ ಸೋಂಕು ತಗುಲಿದೆ. ಬಿಬಿಎಂಪಿ ಸಿಬ್ಬಂದಿ ಕಚೇರಿಯಲ್ಲಿ ಸ್ಯಾನಿಟೈಸರ್ ಸಿಂಪಡಿಸಿ 3 ದಿನಗಳವರೆಗೆ ಸೀಲ್​ಡೌನ್ ಮಾಡಿದ್ದಾರೆ. ಇವರ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಿ, ಕ್ವಾರಂಟೈನ್ ಮಾಡಲಾಗಿದೆ.
ಲೋಕಾಯುಕ್ತ ಕಚೇರಿ ಬಂದ್: ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪೇದೆಗಳಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಮುಚ್ಚಲಾಗಿದೆ. ಸೋಂಕಿಗೆ ಒಳಗಾದ ಇಬ್ಬರು ಪೇದೆಗಳನ್ನು ಲೋಕಾಯುಕ್ತ ಕಚೇರಿ ಭದ್ರತೆಗಾಗಿ ಕೆಎಸ್​ಆರ್​ಪಿಯಿಂದ ನಿಯೋಜಿಸಲಾಗಿತ್ತು. ಕೆಲ ಸಮಯದಿಂದ ಲೋಕಾಯುಕ್ತ ಕಚೇರಿ ಮುಂಭಾಗ ಭದ್ರತಾ ಕೆಲಸ ನಿರ್ವಹಿಸುತ್ತಿದ್ದರು. ಕರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಇತಿ್ತೕಚೆಗೆ ಇವರನ್ನು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವಿಚಾರ ತಿಳಿದ ಕೂಡಲೇ ಲೋಕಾಯುಕ್ತ ಕಚೇರಿಯನ್ನು ಬಂದ್ ಮಾಡಿ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ಸದ್ಯ ಲೋಕಾಯುಕ್ತ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಕರೊನಾಗೆ ತುತ್ತಾದ ಇಬ್ಬರು ಪೊಲೀಸರ ಸಂಪರ್ಕದಲ್ಲಿದ್ದ ಮೂವರು ಪೊಲೀಸರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ 22 ಕೈದಿಗಳಿಗೆ ಕರೊನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 14 =
Remember me
