ಬೆಂಗಳೂರು: ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಸುಲಿಗೆ ಪ್ರಕರಣದ ಸಂಬಂಧ ಪಶ್ಚಿಮ ವಿಭಾಗದ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಪರಿಶೀಲನೆ ನಡೆಸಿ ಸಿಸಿ ಕ್ಯಾಮರಾದ ಡಿವಿಆರ್ ಮತ್ತು ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಡಿಸಿಪಿ ವಿಚಾರಣೆ ಸಾಧ್ಯತೆ
ಸುಲಿಗೆ ಪ್ರಕರಣದ ಸಂಬಂಧ ಸಿಸಿಬಿ ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್ ಮತ್ತು ರವಿಕುಮಾರ್​ರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲು ಪಶ್ಚಿಮ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ನೋಟಿಸ್ ಸಹ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ. ನಕಲಿ ಮಾಸ್ಕ್ ದಂಧೆ ಮತ್ತು ಅಕ್ರಮ ಸಿಗರೇಟ್ ಮಾರಾಟದ ಪ್ರಕರಣಗಳ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ಸಿಸಿಬಿಯ ಡಿಸಿಪಿಗಳು, ಆಯುಕ್ತರಿಗೆ ವರದಿ ನೀಡಿದ್ದರು. ಈ ವರದಿ ಅನುಸಾರ ಆರೋಪಿಗಳಾದ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ:ತರಕಾರಿ, ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟ: ಸುಲಿಗೆಗಿಳಿದ ಚಿಲ್ಲರೆ ವ್ಯಾಪಾರಿಗಳು
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದ ತಂಡ ಕಮಿಷನರ್ ಕಚೇರಿ, ಸಿಸಿಬಿ ಕಚೇರಿ ಮತ್ತು ಆರ್​ಬಿಎಲ್ ಬ್ಯಾಂಕ್ ಸೇರಿದಂತೆ ಹಲವೆಡೆ ಶೋಧ ನಡೆಸಿತು. ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಪಿ ಎಂ. ಪ್ರಭುಶಂಕರ್ ಮತ್ತು ಇನ್​ಸ್ಪೆಕ್ಟರ್​ಗಳಾದ ಆರ್.ಎಂ. ಅಜಯ್ ಹಾಗೂ ನಿರಂಜನ್ ಕುಮಾರ್ ಸಿಗರೇಟ್ ವ್ಯಾಪಾರಿಗಳಿಂದ ಹಣ ಪಡೆದಿದ್ದರು ಎನ್ನಲಾದ ಸ್ಥಳಗಳಲ್ಲಿ ತನಿಖಾಧಿಕಾರಿಗಳು ಮಹಜರ್ ನಡೆಸಿದ್ದಾರೆ.
ಇದನ್ನೂ ಓದಿ:ತಳವಾರ, ಪರಿವಾರಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿ
ಹಣ ವರ್ಗಾವಣೆ ನಡೆದಿದ್ದ ಪೊಲೀಸ್ ಆಯುಕ್ತರ ಕಚೇರಿ, ಚಾಮರಾಜಪೇಟೆಯ ಸಿಸಿಬಿ ಕಚೇರಿಯ ಎಸಿಪಿ ಕೊಠಡಿ ಹಾಗೂ ಆರ್​ಬಿಎಲ್ ಬ್ಯಾಂಕ್ ಕಚೇರಿಗಳ ಸಿಸಿ ಕ್ಯಾಮರಾ ಮತ್ತು ಡಿವಿಆರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೇ 4ರಂದು ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ಎಸಿಪಿ ಪ್ರಭುಶಂಕರ್​ರ ವಿಚಾರಣೆ ನಡೆಸಿದ್ದರು. ಆಗ ಎಸಿಪಿ 25 ಲಕ್ಷ ರೂ.ಗಳನ್ನು ಆಯುಕ್ತರ ಕಚೇರಿಯಲ್ಲಿರುವ ಡಿಸಿಪಿ ಕೊಠಡಿಗೆ ತಂದು ಒಪ್ಪಿಸಿದ್ದರು.
ಇದನ್ನೂ ಓದಿ:ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ಹೋರಾಟ ನಡೆಸುವ ಎಚ್ಚರಿಕೆ
ಮೇ 6ರಂದು ಇನ್​ಸ್ಪೆಕ್ಟರ್ ಅಜಯ್ ಮತ್ತು ನಿರಂಜನ್ ಅವರಿಂದ ಹಣವನ್ನು ಜಪ್ತಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ರಮೇಶ್ ಬಾನೋತ್ ನೇತೃತ್ವದ ತಂಡ ಆಯುಕ್ತರ ಕಚೇರಿಯ ಸಿಸಿ ಕ್ಯಾಮರಾದ ಡಿವಿಆರ್​ಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಎಸಿಪಿ ಹಾಗೂ ಇನ್​ಸ್ಪೆಕ್ಟರ್​ಗಳ ಚಲನವಲನಗಳು ಪತ್ತೆಯಾಗಿವೆ. ಇದನ್ನು ಸಾಕ್ಷ್ಯಾಗಿ ಪರಿಗಣಿಸಲಾಗಿದೆ. ಅದೇ ರೀತಿ ಬಾಣಸವಾಡಿಯ ನಕಲಿ ಮಾಸ್ಕ್ ದಂಧೆ ಪ್ರಕರಣದಲ್ಲಿ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಅಜಯ್ ಆರ್​ಬಿಎಲ್ ಬ್ಯಾಂಕ್ ಶಾಖೆಯಲ್ಲಿ ಡ್ರಾ ಮಾಡಿದ್ದರು. ಈ ಬ್ಯಾಂಕ್ ಶಾಖೆ ಮೇಲೂ ದಾಳಿ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು, ಬ್ಯಾಂಕ್ ಸಿಸಿ ಕ್ಯಾಮರಾ ಜಪ್ತಿ ಮಾಡಿ ದ್ದಾರೆ. ಹಣ ವರ್ಗಾವಣೆ ಸಂಬಂಧ ಬ್ಯಾಂಕ್ ಅಧಿಕಾರಿ ಗಳ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಗೆ ನೈಋತ್ಯ ರೈಲ್ವೆ ಚಾಲನೆ
ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲು:ಪೊಲೀಸರಿಗೆ ಹಣ ಕೊಟ್ಟ ನಗರದ ಪ್ರಮುಖ 8 ಮಂದಿ ಸಿಗರೇಟ್ ವಿತರಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಪ್ರಮುಖ ದಾಖಲೆಯಾಗಿವೆ. ಸಿಸಿಬಿ ಕಚೇರಿಯ ಸಿಬ್ಬಂದಿ, ಆರೋಪಿಗಳಾದ ಬಾಬು ರಾಜೇಂದ್ರ ಪ್ರಸಾದ್ ಮತ್ತು ಭೂಷಣ್​ನ ಕುಟುಂಬದ ಸದಸ್ಯರು ಸೇರಿದಂತೆ ಮತ್ತಿತರನ್ನು ಕೂಡಾ ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ.
ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + sixteen =
Remember me
