ಮೈಸೂರು:ಕಿರುತೆರೆ, ಬೆಳ್ಳಿತೆರೆಯಲ್ಲಿ ನಟಿಸಲು ಒಂದೇ ಒಂದು ಚಾನ್ಸ್​ ಸಿಕ್ಕರೆ ಸಾಕು… ಎಂದು ಕಾಯುವವರಿಗೇನು ಕಮ್ಮಿ ಇಲ್ಲ. ಅದಕ್ಕಾಗಿಯೇ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಸಿಕ್ಕರೆ ಪೂರ್ವಾಪರ ತಿಳಿಯೋಕು ಮುನ್ನವೇ ಅವರನ್ನು ಸುಲಭವಾಗಿ ನಂಬಿಬಿಡ್ತಾರೆ. ಸಲುಗೆ ಬೆಳೆಸಿಕೊಳ್ಳವು ಜತೆಗೆ ಹಣವನ್ನೂ ಸುರಿದುಬಿಡ್ತಾರೆ… ಇದನ್ನೇ ಇದನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ!
ಚಾಮರಾಜ ಜೋಡಿ ರಸ್ತೆಯ ಖಿಲ್ಲೆ ಮೊಹಲ್ಲಾದ ನಿವಾಸಿ ಗಿರೀಶ್​ ಎಂಬಾತ ನಗರದ ವಿವಿಧೆಡೆ ನಟನೆ ಏಜೆನ್ಸಿ ಕಚೇರಿಗಳನ್ನು ತೆರೆದು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅಭಿನಯದಲ್ಲಿ ಆಸಕ್ತಿ ಇರುವವರ ಮಾಹಿತಿ ಸಂಗ್ರಹಿಸಿದ್ದ. ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕೇ ಬಿಟ್ಟಿತು ಎಂದು ನಂಬಿಸಿ ಕೆಲವರ ಬಳಿ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೂ ಹಣ ಪೀಕಿದ್ದ. ಕೆಲ ಯುವತಿಯರೊಂದಿಗೆ ಅಸಭ್ಯವಾಗಿಯೂ ನಡೆದುಕೊಂಡಿದ್ದ. ಪರದೆ ಮೇಲೆ ಕಾಣಿಸಿಕೊಳ್ಳುವ ಕನಸಿನೊಂದಿಗೆ ಎಲ್ಲವನ್ನೂ ಸಹಿಸಿಕೊಂಡು ಕಾಯುತ್ತಿದ್ದ ಮಹಿಳೆಯರಿಗೆ ಗಿರೀಶ್ ಬಿಗ್​ ಶಾಕ್​ ಕೊಟ್ಟಿದ್ದಾನೆ.​ ರಾತ್ರೋರಾತ್ರಿ ತನ್ನ ಕಚೇರಿ ಬಂದ್​ ಮಾಡಿ ಪರಾರಿಯಾಗಿದ್ದಾನೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಮೋಸಹೋದ ಮಹಿಳೆಯರು ಚಾಮರಾಜ ಜೋಡಿ ರಸ್ತೆಯ ಕಚೇರಿ ಎದುರು ಇತ್ತೀಚಿಗೆ ಪ್ರತಿಭಟನೆ ನಡೆಸಿದ್ದರು. ನಜರ್​ಬಾದ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆಗೆ ಒಳಗಾದ ಸಂತೋಷ್​ಕುಮಾರ್​ ಸಿಂಗ್​, ಜಲಜಾಕ್ಷಿ, ಸುಕನ್ಯಾ, ಗೋಪಿ, ವೈಭವ್​, ನಾಗರತ್ನಾ, ಅಂಜಲಿ, ರಾಮು ಮತ್ತಿತರರು ವಂಚಕ ಗಿರೀಶ್​ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸಿಎಂ ಯೋಗಿ ವಿರುದ್ಧ ಕರ್ನಾಟಕ ಕಾಂಗ್ರೆಸ್​ ಮುಖಂಡನಿಂದ ಅವಹೇಳನ

ನವೆಂಬರ್ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ? ಇಲ್ಲಿದೆ ಸರ್ಕಾರದ ನಿಲುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
