ಬೆಂಗಳೂರು:ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದ ಪುಂಡರು, ಕ್ಯಾಬ್ ಚಾಲಕನಿಗೆ ಗುದ್ದಿ ಬ್ಯಾನೆಟ್ ಮೇಲೆ ಆತ ಬಿದ್ದಾಗ ಎರಡೂವರೆ ಕಿ. ಮೀಟರ್ ಅಡ್ಡಾದಿಡ್ಡಿ ಕಾರು ಚಲಾಯಿಸಿ ದುಂಡಾವರ್ತನೆ ತೋರಿದ್ದಾರೆ. ಮಹಾಲಕ್ಷ್ಮಿಲೇಔಟ್ ನಿವಾಸಿ ಶಂಕರೇಗೌಡ ಹಲ್ಲೆಗೆ ಒಳಗಾದವರು. ಈತ ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಪೊಲೀಸರು ಎ್ಐಆರ್ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
‘ನಮ್ಮ ಚಾಲಕರ ಸಂಘ’ದ ಅಧ್ಯಕ್ಷ ಶಂಕರೇಗೌಡ, ಸೋಮವಾರ ರಾತ್ರಿ 7.30ರಲ್ಲಿ ಶಂಕರನಗರದಲ್ಲಿ ಕಾರಿಗೆ ಡಿಸೇಲ್ ತುಂಬಿಸಲು ಪೆಂಟ್ರೋಲ್ ಬಂಕ್‌ಗೆ ಹೋಗಿದ್ದರು. ಅದೇ ವೇಳೆ ಸ್ವ್‌ಟಿ ಕಾರಿನಲ್ಲಿ ಬಂದ ಮೂವರು ಕಿಡಿಗೇಡಿಗಳು, ಹಾರನ್ ಮಾಡಿದ್ದಾರೆ. ಆಗ ಬಂಕ್ ನೌಕರ, ಚಿಲ್ಲರೆ ಕೊಟ್ಟು ಕಳುಹಿಸುತ್ತೇನೆ ಸ್ವಲ್ಪ ಇರಿ ಎಂದು ಹೇಳಿದ್ದಾನೆ. ಅಷ್ಟಕ್ಕೆ ಕೆಳಗೆ ಇಳಿದ ಪುಂಡರು, ಬಂಕ್ ನೌಕರ ಮೇಲೆ ಹಲ್ಲೆ ನಡೆಸಿ ಶಂಕರೇಗೌಡರ ಕಾರಿನ ಡೋರ್ ತೆಗೆದು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ
ನೊಂದ ಕ್ಯಾಬ್ ಚಾಲಕ, ಪ್ರಶ್ನಿಸಲು ಕೆಳಗೆ ಇಳಿದಾಗ ಆತನಿಗೆ ಕಾರು ಗುದ್ದಿಸಿದ್ದು, ತಕ್ಷಣ ಶಂಕರೇಗೌಡ ಸ್ವ್‌ಟಿ ಕಾರಿನ ಬಾನೆಟ್ ಮೇಲೆ ಎಗರಿದ್ದಾರೆ. ಪುಂಡರು, ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಎರಡೂವರೆ ಕಿ.ಮೀ. ಹೋಗಿದ್ದಾರೆ. ಶಂಕರೇಗೌಡ, ಭಯದಿಂದ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಾಗ ಅಡ್ಡಾದಿಡ್ಡಿ ಕಾರು ತಿರುಗಿಸಿ ಬೀಳಿಸಲು ಯತ್ನಿಸಿದ್ದಾರೆ. ಬಸವೇಶ್ವರನಗರದಲ್ಲಿ ಜನರ ಗುಂಪು ನೋಡಿ ಕಾರಿನ ವೇಗ ಕಡಿಮೆ ಮಾಡಿದ್ದಾರೆ. ಆಗ ಶಂಕರೇಗೌಡ, ಪಕ್ಕಕ್ಕೆ ಜಿಗಿದಿದ್ದಾರೆ. ಪುಂಡರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವ್‌ಟಿ ಕಾರಿನ ಬಾನೆಟ್ ಹಿಡಿದು ಕ್ಯಾಬ್ ಚಾಲಕ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ದೃಶ್ಯ ಕಂಡು ಜನರು ಸಿನಿಮಾ ಶೂಟಿಂಗ್ ಇರಬೇಕೆಂದು ಭಾವಿಸಿದ್ದರು. ಕೊನೆಗೆ ಶಂಕರೇಗೌಡ ಕೆಳಗೆ ಬಿದ್ದು, ವಿಷಯ ತಿಳಿಸಿದಾಗ ಸತ್ಯಾಂಶ ಗೊತ್ತಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಂಕರೇಗೌಡ, ಕಿಡಿಗೇಡಿಗಳು ಕಾರನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಾಗ ಬಾನೆಟ್ ಮೇಲಿಂದ ಬಿದ್ದು ಹೆಣವಾಗಿಯೇ ಮನೆಗೆ ಹೋಗುವುದು. ಪತ್ನಿ, ಮಕ್ಕಳಿಗೆ ಆಧಾರ ಯಾರಾಗುತ್ತಾರೆ ಎಂಬ ಭಯ ಕಾಡಿತು ಎಂದಿದ್ದಾರೆ.
ಕಳೆದು ಹೋಗಿದ್ದ ಬಾಲಕ ಫೇಸ್‌ಬುಕ್‌ನಿಂದಾಗಿ ಮತ್ತೆ ಹೆತ್ತವರ ಮಡಿಲಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
