ತುಮಕೂರು:ಆರೋಪಿಯನ್ನು ಬಂಧಿಸಲು ಕಾರು ತೆಗೆದುಕೊಂಡು ಬಾ ಎಂದು ದೂರುದಾರನಿಗೇ ದಬಾಯಿಸಿದ್ದ ಸಬ್​​ ಇನ್​ಸ್ಟೆಕ್ಟರ್ ದರ್ಬಾರು ಇದೀಗ ಸರ್ಕಲ್​ ಇನ್​​ಸ್ಪೆಕ್ಟರ್​ಗೂ ಮುಳುವಾಗಿದೆ.
ಆರೋಪಿಯ ಬಂಧನಕ್ಕೆ ಕೋರಿ ತುಮಕೂರು ಜಿಲ್ಲೆ ದಂಡಿನಶಿವರ ಠಾಣೆಗೆ ಬಂದಿದ್ದ ದೂರುದಾರ ನಾಗೇಂದ್ರಪ್ಪಗೆ, ‘ಆರೋಪಿಯನ್ನು ಬಂಧಿಸಬೇಕಿದ್ದರೆ ಬಾಡಿಗೆ ಕಾರು ತೆಗೆದುಕೊಂಡು ಬಾ’ ಎಂದು ಸಬ್​ ಇನ್​ಸ್ಪೆಕ್ಟರ್ ಶಿವಲಿಂಗಯ್ಯ ದಬಾಯಿಸಿ ಸತಾಯಿಸಿದ್ದರು.
ಇದನ್ನೂ ಓದಿ:ರಾಜ್ಯದಲ್ಲಿ 1 ಸಾವಿರ ದಾಟಿತು ಒಮಿಕ್ರಾನ್ ಪ್ರಕರಣ; ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ…
ಇದರಿಂದ ಬೇಸತ್ತಿದ್ದ ನಾಗೇಂದ್ರಪ್ಪ ಜ. 13ರಂದು ಸೀದಾ ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಅವರಲ್ಲಿಗೇ ತೆರಳಿ ಅಹವಾಲು ಹೇಳಿಕೊಂಡಿದ್ದರು. ಆಗ ಎಸ್​ಪಿ ತಮ್ಮ ಕಾರನ್ನೇ ಕೊಟ್ಟು ದೂರುದಾರರನ್ನು ಆ ಕಾರಿನಲ್ಲಿ ಠಾಣೆಗೆ ಕಳುಹಿಸಿದ್ದಲ್ಲದೆ, ಆರೋಪಿಯನ್ನು ಬಂಧಿಸುವಂತೆ ಎಸ್​ಐಗೆ ಕರೆ ಮಾಡಿ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದರು.
ಇದನ್ನೂ ಓದಿ:ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!
ಈಗ ಅದೇ ಪ್ರಕರಣ ತುರುವೇಕೆರೆ ಸರ್ಕಲ್​ ಇನ್​ಸ್ಪೆಕ್ಟರ್ ನವೀನ್​​ಗೂ ಮುಳುವಾಗಿದೆ. ಪ್ರಕರಣ ಸಂಬಂಧ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನವೀನ್​ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
