ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಂದಿನ ವರ್ಷದ ಶೈಕ್ಷಣಿಕ ವೇಳಾಪಟ್ಟಿಯನ್ನುಸಾರ್ವಜನಿಕ ಶಿಕ್ಷಣ ಇಲಾಖೆಪ್ರಕಟಿಸಿದೆ. ಇದರಂತೆ, ಈ ಸಲದ ಬೇಸಿಗೆ ರಜೆ ಮೇ 28ಕ್ಕೆ ಕೊನೆಗೊಂಡು, ಮೇ 29ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ.
ಶಾಲಾ ದಿನಗಳ ವಿವರ ಪ್ರಕಟಿಸಿರುವ ಇಲಾಖೆ, ಮೊದಲನೇ ಅವಧಿ ಮೇ 29ರಿಂದ ಅಕ್ಟೋಬರ್ 2ರ ತನಕವೂ, ಎರಡನೇ ಅವಧಿಯು ಅಕ್ಟೋಬರ್ 26ರಿಂದ ಏಪ್ರಿಲ್ 14ರ ತನಕವೂ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಇವುಗಳ ನಡುವೆ, ರಜಾ ಅವಧಿಯನ್ನೂ ಉಲ್ಲೇಖಿಸಿದ್ದು, ಮಧ್ಯಂತರ ಅವಧಿಯ ರಜೆ ಅಕ್ಟೋಬರ್ 3ರಿಂದ 25 ಮತ್ತು ಬೇಸಿಗೆ ರಜೆ 2021ರ ಏಪ್ರಿಲ್ 15ರಿಂದ ಮೇ 29ರ ತನಕ ಇರಲಿದೆ ಎಂದಿದೆ.
ಬೋಧನಾ ದಿನಗಳು ಎಷ್ಟಿರಬೇಕು ಎಂದು ನಮೂದಿಸಿರುವ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ 321 ದಿನಗಳಿದ್ದು, ಈ ಪೈಕಿ 77 ರಜಾ ದಿನಗಳಿರುತ್ತವೆ. ಉಳಿದಂತೆ ನಾಲ್ಕು ವಿವೇಚನಾ ರಜೆಗೂ ಅವಕಾಶವಿಟ್ಟು, 240 ಬೋಧನಾ ದಿನಗಳು ಇರಬೇಕು ಎಂದು ಹೇಳಿದೆ. ಪ್ರಾಥಮಿಕ ಶಾಲಾ ಶಿಕ್ಷಣದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಏಪ್ರಿಲ್ 13ಕ್ಕೆ, ಪ್ರೌಢ ಶಾಲೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮ ಏಪ್ರಿಲ್​ 14ರಂದು ಆಚರಿಸಬೇಕು. ಇದರ ಜತೆಗೆ ಕೆಲವು ದಿನಾಚರಣೆಗಳ ನಿಬಂಧನೆಗಳನ್ನೂ ನೆನಪಿನೋಲೆಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
