ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಸಾಲ, ವಿದ್ಯುತ್ ಸಂಪರ್ಕ, ಖಾತೆ ಬದಲಾವಣೆ.. ಮತ್ತಿತರ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ! ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ-ಸ್ವತ್ತು ನೀಡುವ ವಿಚಾರದಲ್ಲಿ ತಲೆದೋರಿರುವ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ. ಸ್ಥಳೀಯ ಮಟ್ಟದಲ್ಲೇ ಆಡಳಿತ ನೀಡುವ ಪರಿಕಲ್ಪನೆಯಡಿ ಅನೇಕ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಲಾಗುತ್ತದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ಈ ಸೌಲಭ್ಯಗಳು ಜನರ ಕೈಗೆ ಸಕಾಲದಲ್ಲಿ ಸಿಗುತ್ತಿಲ್ಲ.
ರೈತರು, ಸಾರ್ವಜನಿಕರು ದಾಖಲೆಗಳಿಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು 4.8 ಅವತರಣಿಕೆ ಮೇಲ್ದರ್ಜೆಗೇರಿಸಿ ನಮೂನೆ 11ಎ ಮತ್ತು 11ಬಿ ವಿತರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದು ಅವಾಂತರ ಸೃಷ್ಟಿಸಿದೆ. ಈ ತಂತ್ರಾಂಶ ಬಳಕೆದಾರಸ್ನೇಹಿ ಆಗಿಲ್ಲದ ಕಾರಣ ಪದೇಪದೆ ತಾಂತ್ರಿಕ ದೋಷ ಎದುರಾಗಿ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಡ್ಡಿಯಾಗಿದೆ. ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಸರ್ಕಾರದ ನಿರ್ದೇಶನದಂತೆ ನಮೂನೆ 9/11ಎ, 11 ಬಿ ವಿತರಿಸಿ ನಿವೇಶನ ತೆರಿಗೆ, ಕಟ್ಟಡಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.
ನಿತ್ಯ 50-60 ಸಾವಿರ ಅರ್ಜಿ
ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕನಿಷ್ಠ 50 ರಿಂದ 60 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಒಂದು ತಿಂಗಳಿಂದ ಸೇವೆ ಒದಗಿಸಲು ಆಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಂಚಾಯಿತಿ ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಇ-ಸ್ವತ್ತು ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ ಎಂದು ಪಿಡಿಒಗಳು ದೂರುತ್ತಾರೆ.
ಏನೇನು ಸಮಸ್ಯೆ?
ಗ್ರಾಮ ಪಂಚಾಯಿತಿಗಳ ಇ-ಸ್ವತ್ತಿನಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಎನ್​ಐಸಿ ಈಗಾಗಲೇ ಸಮಸ್ಯೆ ಪರಿಹರಿಸಿರುವುದಾಗಿ ಹೇಳಿದ್ದಾರೆ. ಆದಾಗ್ಯೂ ಬೆಂಗಳೂರು ಆಸುಪಾಸಿನ ಐದಾರು ಪಿಡಿಒಗಳನ್ನು ಸೋಮವಾರ ಕಚೇರಿಗೆ ಆಹ್ವಾನಿಸಿ ಎನ್​ಐಸಿ ಅವರ ಸಮ್ಮುಖದಲ್ಲೇ ಲಾಗಿನ್ ಮಾಡಿಸಿ ಚೆಕ್ ಮಾಡುತ್ತೇವೆ. ಏನಾದರೂ ಸಮಸ್ಯೆ ಇದ್ದರೆ ಅವುಗಳನ್ನು ಪರಿಹರಿಸುತ್ತೇವೆ.
| ಡಾ.ಕೆ. ನಂದಿನಿ ದೇವಿ, ನಿರ್ದೇಶಕರು, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
ಮನೆಗೆ ಹೋದ್ರೂ ಬಾಸ್​ ಕಾಟ ತಪ್ತಿಲ್ವಾ? ಇಲ್ಲಿನ ಉದ್ಯೋಗಿಗಳಿಗೆ ಸೂಪರ್​​ ಪವರ್​ ಕೊಟ್ಟಿದೆ ಈ ದೇಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 2 =
Remember me
