ಬೆಂಗಳೂರು:ನಗರ ವಿಶೇಷ ಘಟಕದ ಹೆಡ್​ಕಾನ್​ಸ್ಟೇಬಲ್​ ಪಿ.ಎಂ. ಬಾಬು ವಿರುದ್ಧ ಈತನ ಪತ್ನಿಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ತಾನು ಅನುಭವಿಸುತ್ತಿರುವ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
11 ವರ್ಷದ ಹಿಂದೆ ನನಗೆ ಬಾಬು ಪರಿಚಯ ಆಯ್ತು, ಮದ್ವೆ ಆಗುವುದಾಗಿ ನಂಬಿಸಿದ. ಎಲ್ಲವೂ ಮುಗಿದ ಮೇಲೆ ವರಸೆ ಬದಲಿಸಿದ. ಅಂದಿನಿಂದ ಇಂದಿನ ವರೆಗೂ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಿದ್ದಾನೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಅವರಿಗೂ ಬಾಯಿಗೆ ಬಂದಂತೆ ಬೈಯ್ಯುತ್ತಾನೆ. ಹಿಂಸಿಸುತ್ತಾನೆ. ತಿಂಗಳ ಮುಟ್ಟಿನ ವೇಳೆಯೂ ದೈಹಿಕವಾಗಿ ಹಿಂಸಿಸಿದ್ದಾನೆ. ಇವನಿಗೆ ನಾನೊಬ್ಬಳೇ ಪತ್ನಿಯಲ್ಲ, ನಾಲ್ವರನ್ನು ಮದ್ವೆ ಆಗಿ ವಂಚಿಸಿದ್ದಾನೆ. ಹಲವರ ಜೊತೆ ಅಕ್ರಮ ಸಂಬಂಧವೂ ಇದೆ… ಎಂದು ಹೆಡ್​ಕಾನ್​ಸ್ಟೇಬಲ್​ ವಿರುದ್ಧ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಪತ್ನಿಯೇ ದೂರು ನೀಡಿದ್ದಾಳೆ.
ಹಲವು ಬಾರಿ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿಲ್ಲ. ಕುಡಿದು ಬಂದು ಮಕ್ಕಳ ಮುಂದೆಯೇ ಹಲ್ಲೆ ಮಾಡುತ್ತಾನೆ. ನನ್ನ ಎಡಗೈ ಸ್ವಾದೀನ ಕಳೆದುಕೊಂಡಿದೆ. ಹೇಗೂ ನಮ್ಮ ಪಾಡಿಗೆ ನಾವು ಬದುಕೋಣ ಅಂದ್ರೂ ಆತ ಬಿಡ್ತಿಲ್ಲ. ಇವನು ಪೊಲೀಸ್​ ಇಲಾಖೆಯ ಸಂಬಳವನ್ನೇ ನಂಬಿ ಕೂತಿಲ್ಲ. ರಿಯಲ್​ಎಸ್ಟೇಟ್​ ವ್ಯವಹಾರವನ್ನೂ ಮಾಡುತ್ತಿದ್ದಾನೆ. ಆತನಿಂದ ನನ್ನ ಮಕ್ಕಳಿಗೆ ಮತ್ತು ನನಗೆ ಜೀವ ಬೆದರಿಕೆ ಇದೆ, ದಯವಿಟ್ಟು ಆತನಿಂದ ನಮ್ಮನ್ನು ರಕ್ಷಿಸಿ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾಳೆ.
ಹನಿಟ್ರ್ಯಾಪ್​ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

ಹಾವಿನ ಮೊಟ್ಟೆ ಒಡೆಯಲು 54 ದಿನ ಹೆದ್ದಾರಿ ಕಾಮಗಾರಿ ಸ್ಥಗಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
