| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಪೌರಸಂಸ್ಥೆಗಳಲ್ಲಿ ಆದಾಯ ಸಂಗ್ರಹಕ್ಕೆ ಹೊಸ ಮಾರ್ಗವನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿದ್ದು, ಮುಂದಿನ ಅಧಿವೇಶನದಲ್ಲಿ ಪೌರಸಂಸ್ಥೆ ಕಾಯ್ದೆಗೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಪೌರಸಂಸ್ಥೆಗಳಿಗೆ ಆಸ್ತಿ ತೆರಿಗೆ, ನೀರಿನ ಕರ ಹೊರತುಪಡಿಸಿ ಸ್ವಂತ ಸಂಪನ್ಮೂಲವಿಲ್ಲ. ಆಸ್ತಿ ತೆರಿಗೆಯೂ ಸರಿಯಾಗಿ ವಸೂಲಿ ಆಗುತ್ತಿಲ್ಲ. ಹೀಗಾಗಿ ಸಂಸ್ಥೆಗಳು ಸರ್ಕಾರಗಳಿಂದ ಬರುವ ಅನುದಾನವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಕೆಲ ಸಂಸ್ಥೆಗಳಲ್ಲಿ ನೌಕರರಿಗೆ ಸಂಬಳ ಕೊಡುವುದಕ್ಕೂ ಪರದಾಡುವ ಸ್ಥಿತಿ ಇದೆ.
ರಾಜ್ಯದ ಪೌರಸಂಸ್ಥೆಗಳಲ್ಲಿ ವಾರ್ಷಿಕ 1,338 ಕೋಟಿ ರೂ. ಮಾತ್ರ ತೆರಿಗೆ ವಸೂಲಿಯಾಗುತ್ತಿದೆ. ವಿವಿಧ ಯೋಜನೆಗಳಿಗೆ ಪಾಲು, ಸಾಲ ಸೇರಿ 6,500 ಕೋಟಿ ರೂ. ಗಳ ಹೊರೆ ಇದೆ. ಅಕ್ರಮ-ಸಕ್ರಮದ ಮೂಲಕ 5 ಸಾವಿರ ಕೋಟಿ ರೂ.ಗಳ ಆದಾಯ ಸಂಗ್ರಹಕ್ಕೆ ಮುಂದಾಗಿರುವ ಸರ್ಕಾರ, ಜತೆಗೆ ಹೊಸ ಮಾರ್ಗವನ್ನು ಕಂಡುಕೊಳ್ಳಲು ನಿರ್ಧರಿಸಿದೆ.
ಏನಿದು ಹೊಸ ಮಾರ್ಗ?:ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಕಷ್ಟು ಮೊಬೈಲ್ ಟವರ್​ಗಳಿವೆ. ಖಾಸಗಿ ಜಾಹೀರಾತು ಹೋರ್ಡಿಂಗ್ಸ್​ಗಳಿವೆ. ಇವುಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ಆದಾಯ ಹೋಗಲಿ, ಹಿಡಿತವೂ ಇಲ್ಲ. ಹೀಗಾಗಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳನ್ನು ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.
ಎಷ್ಟಿವೆ?:ಮೊಬೈಲ್ ಸಂಪರ್ಕ ನೂರಕ್ಕೆ ನೂರು ಎಲ್ಲರನ್ನೂ ತಲುಪಿವೆ. ಟವರ್​ಗಳ ಸಂಖ್ಯೆಯೂ ಅದೇ ರೀತಿಯಲ್ಲಿ ಏರಿಕೆಯಾಗಿದೆ. ಇಡೀ ದೇಶದಲ್ಲೇ ಅತೀಹೆಚ್ಚು ಮೊಬೈಲ್ ಟವರ್​ಗಳಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ ನಂತರ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿರುವ 50 ಸಾವಿರಕ್ಕೂ ಅಧಿಕ ಟವರ್​ಗಳ ಪೈಕಿ 9,000 ಗ್ರಾಮೀಣ ಭಾಗದಲ್ಲಿದ್ದರೆ, ಉಳಿದವು ನಗರ ಮತ್ತು ಪಟ್ಟಣಗಳಲ್ಲಿವೆ. ಇನ್ನು ಜಾಹೀರಾತು ಫಲಕಗಳು ಎಷ್ಟಿವೆ ಎಂಬ ಅಂದಾಜು ಸಿಗುತ್ತಿಲ್ಲ. ಸರ್ಕಾರದ ವತಿಯಿಂದ ಅಳವಡಿಸಿರುವ ಫಲಕಗಳಲ್ಲಿ ಸರ್ಕಾರದ ಯೋಜನೆಗಳ ಪ್ರಚಾರ ಆಗುತ್ತಿದೆ. ಆದರೆ, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿಯವರು ಜಾಹೀರಾತು ಫಲಕಗಳನ್ನು ಅಳವಡಿಸಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ನಗರ ಮತ್ತು ಪಟ್ಟಣಗಳ ಸೌಂದರ್ಯವನ್ನು ಇವು ಹಾಳು ಮಾಡುತ್ತಿವೆ. ಕಟ್ಟಡಗಳ ಮೇಲೆ ಅಥವಾ ಜಮೀನುಗಳಲ್ಲಿ ಟವರ್​ಗಳಿದ್ದರೆ ಮಾಲೀಕರಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ, ಆ ಮೊತ್ತ ಅತ್ಯಂತ ಕಡಿಮೆ.ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಂದ ಬರುವ ಆದಾಯ ಹೆಚ್ಚು ಇಲ್ಲದಿದ್ದರೂ ಸಿಬ್ಬಂದಿ ವೇತನ, ಕಚೇರಿ ಆಡಳಿತ ವೆಚ್ಚಕ್ಕೆ ಸಾಕಾದರೂ ಆರ್ಥಿಕ ಹೊರೆ ಅಷ್ಟರಮಟ್ಟಿಗೆ ಕಡಿಮೆಯಾಗಲಿದೆ ಎಂಬುದು ಲೆಕ್ಕಾಚಾರ.
ಕಾಯ್ದೆ ತಿದ್ದುಪಡಿಬಿಬಿಎಂಪಿ ಕಾಯ್ದೆಯಲ್ಲಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವಾರ್ಷಿಕ ಶುಲ್ಕ ವಿಧಿಸುವ ಅವಕಾಶ ಮಾಡಿಕೊಳ್ಳಲಾಗಿದೆ. ಪಂಚಾಯ್ತಿಗಳ ವ್ಯಾಪ್ತಿಯಲ್ಲಿಯೂ ಟವರ್​ಗಳಿಗೆ ಶುಲ್ಕ ವಿಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಆದರೆ, ಜಾರಿಗೆ ಇನ್ನೂ ಬಂದಿಲ್ಲ. ಆದರೆ ಪೌರಸಂಸ್ಥೆಗಳ ವ್ಯಾಪ್ತಿಯ ಕಾಯ್ದೆಯಲ್ಲಿ ಈ ಅವಕಾಶ ಇಲ್ಲ. ಆದ್ದರಿಂದಲೇ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಪೌರಸಂಸ್ಥೆ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಪೌರಾಡಳಿತ ಇಲಾಖೆ ಮೂಲಗಳು ಖಚಿತಪಡಿಸಿವೆ.
ಎಷ್ಟಿರಲಿದೆ ತೆರಿಗೆ?ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವಾರ್ಷಿಕ ತೆರಿಗೆ ವಿಧಿಸಲಾಗುತ್ತದೆ. ಕಂಪನಿಗಳೇ ಪಾವತಿ ಮಾಡಬೇಕಾಗುತ್ತದೆ. ಭೂಮಿಯ ಮಾರ್ಗಸೂಚಿ ಬೆಲೆ ಆಧಾರದಲ್ಲಿ ತೆರಿಗೆ ನಿಗದಿ ಮಾಡಲಾಗುತ್ತದೆ. ಹಾಗಾಗಿ ಏಕರೂಪತೆ ಇರುವುದಿಲ್ಲ. ಆ ರೀತಿಯಲ್ಲಿ ಕಾಯ್ದೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಲಭ್ಯ ಮಾಹಿತಿ ಪ್ರಕಾರ ಮೊಬೈಲ್ ಟವರ್​ಗೆ ವಾರ್ಷಿಕ ಕನಿಷ್ಠ 25 ಸಾವಿರ ರೂ. ಗಳ ತೆರಿಗೆ ನಿಗದಿಯಾಗಬಹುದೆಂದು ಹೇಳಲಾಗುತ್ತಿದೆ. ತಿದ್ದುಪಡಿ ಕಾಯ್ದೆ ಸಚಿವ ಸಂಪುಟದ ಮುಂದೆ ಬಂದಾಗ ಮಾತ್ರ ತೆರಿಗೆಯ ಪ್ರಮಾಣದ ಸ್ಪಷ್ಟತೆ ಸಿಗಲಿದೆ. ಮಾರ್ಗಸೂಚಿ ಬೆಲೆ ಆಧಾರ ಎಂಬುದು ಮಾತ್ರ ಬಹುತೇಕ ಅಂತಿಮವಾಗಿದೆ. ಏಕರೂಪವಾಗಿ ಎಲ್ಲೆಡೆ ಒಂದೇ ದರ ನಿಗದಿ ಮಾಡುವುದು ವೈಜ್ಞಾನಿಕವಾಗುವುದಿಲ್ಲವೆಂದು ಹೇಳಲಾಗುತ್ತಿದೆ.
* ರಾಜ್ಯದಲ್ಲಿ ಐವತ್ತು ಸಾವಿರ ಟವರ್, ಜಾಹೀರಾತು ಫಲಕಗಳ ಲೆಕ್ಕ ಇಲ್ಲ
* ಗ್ರಾಮೀಣ ಭಾಗದ ಮೊಬೈಲ್ ಟವರ್​ಗಳಿಗೆ 17,500 ರೂ. ಶುಲ್ಕ ಸಾಧ್ಯತೆ
ಪೌರಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢ ಮಾಡಲೇಬೇಕಾಗಿದೆ. ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಲೇಬೇಕಾಗಿದೆ. ಅದಕ್ಕಾಗಿ ಅಕ್ರಮ-ಸಕ್ರಮದ ಮಾದರಿಯಲ್ಲಿಯೇ ಬೇರೆ ಮೂಲಗಳನ್ನು ಹುಡುಕುತ್ತಿದ್ದೇವೆ. ಆ ನಿಟ್ಟಿನಲ್ಲಿ ಮೊಬೈಲ್ ಟವರ್ ಮತ್ತು ಜಾಹೀರಾತು ಫಲಕಗಳಿಗೆ ವೈಜ್ಞಾನಿಕವಾಗಿ ತೆರಿಗೆ ನಿಗದಿ ಮಾಡಲಿದ್ದೇವೆ.
| ರಹೀಂಖಾನ್ ಪೌರಾಡಳಿತ ಸಚಿವ
ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + one =
Remember me
