ಶ್ರೀಕಾಂತ್ ಶೇಷಾದ್ರಿಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಿವಿಲ್ ಇಂಜಿನಿಯರ್ಸ್ ನೇಮಕ ವಿಚಾರದಲ್ಲಿ ಸರ್ಕಾರ ಮತ್ತು ಹುದ್ದೆ ಆಕಾಂಕ್ಷಿಗಳ ಜಟಾಪಟಿ ತೀವ್ರಗೊಂಡಿದ್ದು, ಸರ್ಕಾರದ ಹಠದ ವಿರುದ್ಧ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪರಿವೀಕ್ಷಣೆಗೆ ಉಂಟಾಗಿರುವ ಇಂಜಿನಿಯರ್ಸ್ ಕೊರತೆ ನೀಗಿಸಿಕೊಳ್ಳಲು ಹೊಸದಾಗಿ ಹುದ್ದೆ ಭರ್ತಿ ಮಾಡುವ ಸರ್ಕಾರದ ಪ್ರಯತ್ನ ಮತ್ತೆ ಹಳ್ಳಹಿಡಿವ ಲಕ್ಷಣ ಕಾಣಿಸಿದೆ.
660 ಸಹಾಯಕ ಇಂಜಿನಿಯರ್ಸ್ ಹುದ್ದೆ (ಗ್ರೂಪ್ ಬಿ), 330 ಕಿರಿಯ ಇಂಜಿನಿಯರ್ಸ್ (ಗ್ರೂಪ್ ಸಿ) ನೇಮಕ ಪ್ರಕ್ರಿಯೆಗೆ ಕೆಪಿಎಸ್ಸಿ ಜುಲೈ 30ರಂದು ಅಧಿಸೂಚನೆ ಹೊರಡಿಸಿದ್ದು, 2020ರ ಆ.17ರಿಂದ ಸೆ.16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಈ ಹಿಂದೆ ಮಾಡಿದ ಸ್ವಯಂಕೃತ ಅಪರಾಧಕ್ಕಾಗಿ ವಯೋಮಿತಿ ಸಡಿಲಿಸಿ, ಹಿಂದೆ ಅರ್ಜಿ ಸಲ್ಲಿಸಿರುವವರಿಗೆ ಶುಲ್ಕ ವಿನಾಯಿತಿ ಪ್ರಕಟಿಸಿದೆ. ಆದರೆ, ಒಂದು ಬಾರಿ 50 ಸಾವಿರ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದೇವೆ. ಅದರ ಫಲಿತಾಂಶ ಪ್ರಕಟಿಸಿ, ಆ ನೇಮಕಾತಿ ಪ್ರಕ್ರಿಯೆ ಮೊದಲು ಮುಗಿಸಿ. ಸರ್ಕಾರ ಬದಲಾಯಿತೆಂದು ನಮಗೇಕೆ ಹೊಸ ಪರೀಕ್ಷೆ ಎಂದು ಪ್ರಶ್ನಿಸುತ್ತಿರುವ ಅಭ್ಯರ್ಥಿಗಳು, ಸರ್ಕಾರದ ತೀರ್ವನದ ವಿರುದ್ಧ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ತಯಾರಿ ಮಾಡಿಕೊಂಡಿದ್ದಾರೆ.
ಅಭ್ಯರ್ಥಿಗಳ ಪ್ರಶ್ನೆಗಳು
12019ರ ಜೂ.21ರಿಂದ 24ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆ ಮೇಲೆ ಸರ್ಕಾರಕ್ಕೆ ಅನುಮಾನವೇ?
2ಸಂಪುಟ ತೀರ್ಮಾನ ಅಸಂವಿಧಾನಿಕ ಎಂದು ನ್ಯಾಯಾಲಯ ಹೇಳಿದರೂ ಸರ್ಕಾರಕ್ಕೆ ಮರು ಪರೀಕ್ಷೆ ನಡೆಸುವ ಹಠವೇಕೆ?
3ರಾಜಕೀಯ ಪ್ರತಿಷ್ಠೆಗಾಗಿ 50 ಸಾವಿರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಮತ್ತೆ ಏಕೆ ಪರೀಕ್ಷೆ ಬರೆಯಬೇಕು?
ಸರ್ಕಾರದ ಎಡವಟ್ಟೇನು?:2019ರಲ್ಲಿ ಲೋಕೋಪಯೋಗಿ ಇಲಾಖೆ 570 ಸಹಾಯಕ ಇಂಜಿನಿಯರ್ಸ್, 300 ಕಿರಿಯ ಇಂಜಿನಿಯರ್ಸ್ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. 2019ರ ಜೂ.22ರಿಂದ 24ರವರೆಗೆ ಪರೀಕ್ಷೆಯೂ ನಡೆದಿತ್ತು. ಇನ್ನೇನು ಫಲಿತಾಂಶ ಬರುತ್ತದೆ, ಸಂದರ್ಶನಕ್ಕೆ ತಯಾರಾಗಬೇಕೆಂದು ಹಲವು ಅಭ್ಯರ್ಥಿಗಳು ಖಾಸಗಿ ಕೆಲಸವನ್ನೂ ತೊರೆದಿದ್ದರು. 2019ರ ಅ.31ರ ಸಂಪುಟ ಸಭೆಯಲ್ಲಿ ಈ ನೇಮಕ ಪ್ರಕ್ರಿಯೆಗೆ ಸರ್ಕಾರ ತಡೆ ಹಾಕಿತು. ಇಷ್ಟರಲ್ಲಿ ಪರೀಕ್ಷೆ ನಡೆಸಿದ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆ 1.99 ಕೋಟಿ ರೂ. ಪಾವತಿಸಿ ಕೈತೊಳೆದುಕೊಂಡಿತು. ಜತೆಗೆ ಫಲಿತಾಂಶ ಪ್ರಕಟಣೆಗೆ ಅವಕಾಶ ಕೊಡಲಿಲ್ಲ.
ಇದನ್ನೂ ಓದಿ:ಸ್ಮಾರಕ ರಕ್ಷಣೆಗೆ ವಾಟರ್ ಪ್ರೂಫ್​ ತಂತ್ರಜ್ಞಾನದ ಮೊರೆ!
ಬಳಿಕ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋದರು. ಡಿ.3ರಂದು ನ್ಯಾಯಾಲಯ, ಸಂಪುಟದ ತೀರ್ಮಾನದ ಬಗ್ಗೆ ‘ಬಾಬರ್ ಫರ್ವನು’ ಎಂದು ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಮೂರು ವಾರ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸರ್ಕಾರಕ್ಕೆ ಸೂಚಿಸಿ ವ್ಯಾಜ್ಯವನ್ನು ಕೆಎಟಿಯಲ್ಲಿ ಬಗೆಹರಿಸಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚಿಸಿತ್ತು.
ಇದನ್ನೂ ಓದಿ:ಸ್ಮಾರ್ಟ್​ಫೋನ್ ಕಳೆದುಕೊಂಡವರ ತುರ್ತು ಗಮನಕ್ಕೆ…
ಈ ನಡುವೆ ಸರ್ಕಾರ ಹುದ್ದೆಗಳ ಸಂಖ್ಯೆ ಹೆಚ್ಚಿಸಿ ಹೊಸ ನೇಮಕ ಎಂಬಂತೆ ಕೆಪಿಎಸ್ಸಿ ಮೂಲಕ ನೇಮಕ ಪ್ರಕ್ರಿಯೆ ಆರಂಭಿಸಲು ಮುಂದಾಯಿತು. ಆದರೆ, ಅ.31ರ ಸಂಪುಟದ ನಿರ್ಣಯ ಅಸಂವಿಧಾನಿಕ, ದ್ವಂದ್ವ ಎಂದು ಕೆಎಟಿ ವ್ಯಾಖ್ಯಾನಿಸಿತು. ಜತೆಗೆ ಸರ್ಕಾರದ ತೀರ್ಮಾನ ರದ್ದು ಮಾಡಿತು. ಕರೊನಾ ಗದ್ದಲದ ನಡುವೆ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಮತ್ತೆ ಹುದ್ದೆಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿ ಕೆಪಿಎಸ್ಸಿ ಮೂಲಕ ನೇಮಕ ಪ್ರಕ್ರಿಯೆ ಶುರುಮಾಡಿದೆ. ಈ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ನಮಗೇನು ಗೊತ್ತಿಲ್ಲ, ಸಚಿವರನ್ನು ಕೇಳಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ.
ಜಿರಾಫೆ ಅಂದ್ರೇನೇ ಎತ್ತರ- ಅದ್ರಲ್ಲೂ ಗಿನ್ನೆಸ್ ದಾಖಲೆ ಅಂದ್ರೆ ಇನ್ನೆಷ್ಟು ಎತ್ತರ ಇರಬಹುದು ಅದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
