ಬೆಂಗಳೂರು:‘ನಟಿ ಸಂಜನಾ ಗಲ್ರಾನಿ ಮುಸ್ಲಿಂ ಎನ್ನುವುದು ನೂರಕ್ಕೆ ನೂರು ಸತ್ಯ..’ – ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೇ ಈ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೂರಕ್ಕೆ ನೂರು ಸತ್ಯ. ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನಮ್ಮ ಮದರಸಾದಲ್ಲೇ ಎಂದು ಬೆಂಗಳೂರಿನ ಟ್ಯಾನರಿ ರೋಡ್​ನ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಸಾದ ಮೌಲಾನಾ ಜೈನುಲಬ್ದೀನ್ ಖಚಿತ ಪಡಿಸಿದ್ದಾರೆ.

ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಸ್ವೀಕರಿಸುತ್ತಿದ್ದೇನೆ ಅಂತ ಸಂಜನಾ ಹೇಳಿದ್ದರು. ಅವರು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಮತ್ತೆ ಹೊಸ ಜೀವನ ಪ್ರಾರಂಭಿಸಿದರೆ, ಅವರನ್ನು ಅಲ್ಲಾಹು ಕ್ಷಮಿಸುತ್ತಾರೆ. ಇಸ್ಲಾಂನಲ್ಲಿ ದಂಧೆ ಮಾಡುವುದು ತಪ್ಪು. ಸಂಜನಾ ಅದನ್ನು ಬಿಟ್ಟು ಬಂದರೆ ನಾವು ಅವರನ್ನು ಮುಸ್ಲಿಂ ಎಂದೇ ಸ್ವೀಕರಿಸುತ್ತೇವೆ ಎಂದಿರುವ ಮೌಲಾನಾ ಜೈನುಲಬ್ದೀನ್​, ಆಕೆಯನ್ನು ನೋಡಲು ತಾವು ಜೈಲ್​ಗೆ ಹೋಗುವುದಿಲ್ಲ, ತಾವು ಹಾಗೆ ಹೋಗುವ ಹಾಗೂ ಇಲ್ಲ ಎಂಬುದಾಗಿ ಹೇಳಿದ್ದಾರೆ.
ಹಿಂದಿ ನಟ ದಿಲೀಪ್ ಕುಮಾರ್​ ಅವರ ಮೂಲ ಹೆಸರು ಮಹಮ್ಮದ್ ಯೂಸುಫ್. ಆದರೆ ಅವರು ದಿಲೀಪ್ ಕುಮಾರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ಹಾಗಾಗಿ ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಅಂಥ ಸಮಸ್ಯೆ ಏನಲ್ಲ ಎಂದು ಮೌಲಾನಾ ಜೈನುಲಬ್ದೀನ್ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − sixteen =
Remember me
