ನವದೆಹಲಿ:ಧಾರ್ವಿುಕ ಮತ್ತು ದತ್ತಿ ಸಂಸ್ಥೆಗಳು ನಿರ್ವಹಿಸುವ ಪ್ರವಾಸಿಗೃಹಗಳು, ಸಿಖ್ಖರ ‘ಸಾರೈಸ್’ (ಇನ್ಸ್) ಬಾಡಿಗೆ ಹಾಗೂ ಆಸ್ತಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಅನ್ವಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅಮೃತಸರದ ಸ್ವರ್ಣಮಂದಿರದ ಬಳಿ ಇರುವ ‘ಸಾರೈಸ್’ (ಇನ್ಸ್) ಮೇಲೆ ಶೇ.12 ಜಿಎಸ್​ಟಿ ವಿಧಿಸುವ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಕೋರಿ ಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್್ಸ (ಸಿಬಿಐಸಿ) ಮಂಡಳಿ ಈ ಸ್ಪಷ್ಟನೆ ನೀಡಿದೆ. ದಿನಕ್ಕೆ 1 ಸಾವಿರ ರೂ.ಗಿಂತ ಕಡಿಮೆ ಬಾಡಿಗೆಯ ಕೋಣೆಗಳ ಮೇಲೂ ಜಿಎಸ್​ಟಿ ವಿಧಿಸುವ ಪ್ರಸ್ತಾವನೆ ಕಳೆದ ಜು.18ರಂದು ಜಾರಿಗೆ ಬಂದ ನಂತರ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು (ಎಸ್​ಜಿಪಿಸಿ )ತಾನು ನಿರ್ವಹಿಸುವ ಕೆಲವು ವಸತಿಗೃಹಗಳ ಬಾಡಿಗೆಗೆ ಜಿಎಸ್​ಟಿ ಸಂಗ್ರಹಿಸಲು ಪ್ರಾರಂಭಿಸಿತ್ತು.
ರದ್ದತಿ ಶುಲ್ಕಕ್ಕೂ ತೆರಿಗೆ:ಹೋಟೆಲ್​ಗಳು, ಟೂರ್ ಮತ್ತು ಟ್ರಾವೆಲ್ ಆಪರೇಟರ್​ಗಳು ವಸೂಲಿ ಮಾಡುವ ರದ್ದತಿ ಶುಲ್ಕಕ್ಕೂ ಪ್ರಧಾನ ಸೇವೆಗೆ ಅನ್ವಯಿಸುವ ಜಿಎಸ್​ಟಿ ದರದಲ್ಲೇ ತೆರಿಗೆ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಟ್ಯಾಕ್ಸ್ ರೀಸರ್ಚ್ ಯೂನಿಟ್ (ಟಿಆರ್​ಯುು) ತಿಳಿಸಿದೆ. ಪಾವತಿಯು ಸರಬರಾಜಿಗಾಗಿ ಪರಿಗಣನೆಯನ್ನು ಹೊಂದಿದ್ದರೆ ಅದನ್ನು ಯಾವುದೇ ಹೆಸರಿನಿಂದ ಕರೆಯಲಾಗಿದ್ದರೂ ಅದು ತೆರಿಗೆಗೆ ಒಳಪಡುತ್ತದೆ. ಹಾನಿಗಳು, ಪರಿಹಾರ ಮತ್ತು ಒಪ್ಪಂದದ ಉಲ್ಲಂಘನೆಗೆ ವಿಧಿಸಲಾಗುವ ದಂಡವೂ ಜಿಎಸ್​ಟಿ ವ್ಯಾಪ್ತಿಗೆ ಒಳಪಡುತ್ತವೆ ಎಂದು ಟಿಆರ್​ಯುು ತಿಳಿಸಿದೆ.
ಸೇವಾ ಪೂರೈಕೆದಾರರು (ವಾರ್ಷಿಕ 20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದೊಂದಿಗೆ) ಅಥವಾ ವ್ಯಾಪಾರ (ವಾರ್ಷಿಕ 40 ಲಕ್ಷ ರೂ.ಗಿಂತ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಒಟ್ಟು ಆದಾಯದೊಂದಿಗೆ) ಮಾಡುವಂಥವರು ಅವರ ಮನೆಗಳನ್ನು ಬಾಡಿಗೆಗೆ ನೀಡಿದರೆ, ಅವರು ಪ್ರತಿ ಮನೆಯ ಬಾಡಿಗೆಗೆ ಶೇ.18 ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಆದರೆ, ಇದಕ್ಕಾಗಿ ಅವರು ಜಿಎಸ್​ಟಿ ಅನ್ವಯ ನೋಂದಾಯಿಸಿಕೊಂಡಿರಬೇಕು. ವಾರ್ಷಿಕ 40 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುವ ಉದ್ಯಮಗಳು ಮತ್ತು ಸಂಬಳ ಪಡೆಯುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ.
ಅಲ್ಲದೆ, ಕಂಪನಿಯು ತನ್ನ ಉದ್ಯೋಗಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಯಾವುದೇ ಜಿಎಸ್​ಟಿ ಪಾವತಿಸುವ ಅಗತ್ಯವಿಲ್ಲ. ಇದಲ್ಲದೆ ಬಾಡಿಗೆದಾರ ಮತ್ತು ಮಾಲೀಕರು ಇಬ್ಬರೂ ನೋಂದಾಯಿಸದಿದ್ದರೆ ಬಾಡಿಗೆಗೆ ಯಾವುದೇ ಜಿಎಸ್​ಟಿ ಪಾವತಿಸುವ ಕಾನೂನು ಬಾಧ್ಯತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಇವುಗಳಿಗೆ ತೆರಿಗೆ ಇದೆ:ಎಲೆಕ್ಟ್ರಿಕ್ ವಾಹನಗಳ ಮೇಲೆ (ಬ್ಯಾಟರಿ ಪ್ಯಾಕ್ ಇರಲಿ ಅಥವಾ ಇಲ್ಲದಿರಲಿ) 5%, ಮಾವಿನ ಹಣ್ಣಿನ ತಿರುಳಿನ ಮೇಲೆ ಶೇ.12, ನಿಕೋಟಿನ್ ಗಮ್ ಮೇಲೆ ಶೇ.18 ಜಿಎಸ್​ಟಿ ವಿಧಿಸಲಾಗಿದೆ.
ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!

ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಮರ, ತಂದೆ-ಮಗ ಸ್ಥಳದಲ್ಲೇ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − three =
Remember me
