ಕಲಬುರಗಿ:ಇಲ್ಲಿನ ಖಾಜಾ ಬಂದಾನವಾಜ್ ಆಸ್ಪತ್ರೆಯಲ್ಲಿ (ಕೆಬಿಎನ್) ಶನಿವಾರ ರಾತ್ರಿ ಮೂವರು ಕೋವಿಡ್ ರೋಗಿಗಳು ಏಕಕಾಲಕ್ಕೆ ಮೃತಪಟ್ಟಿದ್ದು, ಆಕ್ಸಿಜನ್ ಕೊರತೆಯಿಂದ ಬೇರೆಡೆ ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎಂದು ದೂರಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ ಅವರು ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳಿಸಿಕೊಟ್ಟಿದ್ದಾರೆ. ಈಗ ಉಳಿದ ರೋಗಿಗಳು ಸ್ಥಿರವಾಗಿದ್ದಾರೆ.
ಕೆಬಿಎನ್‌ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಲ್ಲಿ ಕೆಲವರು ಆಕ್ಸಿಜನ್ ಸಹಾಯ ಪಡೆದಿದ್ದರು. ಇನ್ನೇನು ಆಕ್ಸಿಜನ್ ದಾಸ್ತಾನು ಮುಗಿಯುತ್ತದೆ ಎನ್ನುವಾಗ ಆಂಬುಲೆನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ‘ವಿಜಯವಾಣಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಮೃತಪಟ್ಟಿದ್ದಾರೆ. ಆದರೆ, ಆಕ್ಸಿಜನ್ ಸಮಸ್ಯೆ ಇರಲಿಲ್ಲ ಎಂದು ಕೆಬಿಎನ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಆಕ್ಸಿಜನ್ ಅಗತ್ಯವಿದ್ದರೆ ಅವರು ಕರೆ ಮಾಡುತ್ತಿದ್ದರು. ಶುಕ್ರವಾರವೇ ಬೀದರ್‌ನಿಂದ ನಾವು ಆಕ್ಸಿಜನ್ ಟ್ಯಾಂಕರ್ ತರಿಸಿಕೊಂಡಿದ್ದೆವು. ಶನಿವಾರವೂ ಆಕ್ಸಿಜನ್ ಸಮಸ್ಯೆ ಇರಲಿಲ್ಲ. ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ’ ಎಂದರು.
ಆಕ್ಸಿಜನ್ ಸಿಗದೆ ನಾಲ್ವರು ಕೋವಿಡ್ ಸೋಂಕಿತರ ಸಾವು; ಅಲ್ಲೆಲ್ಲೋ ಅಲ್ಲ, ಇಲ್ಲೇ ಕರ್ನಾಟಕದಲ್ಲಿ..!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × three =
Remember me
