ಬೆಂಗಳೂರು:ಲಾಕ್​ಡೌನ್ ಉಲ್ಲಂಘಿಸಿ ಸರ್ಕಾರಿ ವಾಹನದಲ್ಲೇ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದನ್ನು ಜಪ್ತಿ ಮಾಡಿದ ಪ್ರಕರಣದಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ (ಎಡಿಸಿಪಿ) ಹಾಗೂ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ನಡುವೆ ಕಿತ್ತಾಟ ನಡೆದಿದೆ.
ಲಂಚ ಪಡೆಯಲಾಗಿದೆ ಎಂದು ಎಡಿಸಿಪಿ ಮುರುಗನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಸಿಪಿ ವಾಸು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದು, ಖಾಕಿ ಕಿತ್ತಾಟ ಬೀದಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿಗಳಿಂದ ಎಲೆಕ್ಟ್ರಾನಿಕ್ಸ್ ಸಿಟಿ ಎಸಿಪಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಮುರುಗನ್ ಇಲಾಖೆಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ‘ಸರ್ಕಾರಿ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನನ್ನು ಬಿಟ್ಟು ಕಳುಹಿಸಲಿಲ್ಲ ಎಂಬ ಕಾರಣಕ್ಕೆ ಎಡಿಸಿಪಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಮುರುಗನ್ ಅವರೇ ಹಣ ಪಡೆದಿದ್ದು, ಆರೋಪಿಗಳನ್ನು ಬಿಟ್ಟು ಕಳುಹಿಸುವಂತೆ ಒತ್ತಡ ಹೇರಿದ್ದರು’ ಎಂದು ಎಸಿಪಿ ವಾಸು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಏನಿದು ಪ್ರಕರಣ?: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಹಾಗೂ ಸಾಗಣೆಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಈ ನಡುವೆಯೂ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಏ.11ರಂದು ತಮಗೆ ಬಂದ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ಸ್ ಸಿಟಿ ಉಪವಿಭಾಗದ ಎಸಿಪಿ ವಾಸು, ಎಲೆಕ್ಟ್ರಾನಿಕ್ಸ್ ಸಿಟಿ ಠಾಣಾಧಿಕಾರಿ ಕಿಶೋರ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ರಾತ್ರಿ 9 ಗಂಟೆಯಲ್ಲಿ ಬೆಟ್ಟದಾಸನಪುರ ರಸ್ತೆಯಲ್ಲಿ ‘ಕೋವಿಡ್ 19 ಜಾಗೃತ ದಳದ ಸರ್ಕಾರಿ ವಾಹನ’ದಲ್ಲಿ ಲಕ್ಷಾಂತರ ರೂ. ಮೌಲ್ಯದ ಮದ್ಯ ಸಾಗಿಸುತ್ತಿರುವುದು ಪತ್ತೆಯಾಗಿತ್ತು. ವಾಹನ ಸಮೇತ ಮದ್ಯ ಜಪ್ತಿ ಮಾಡಿ, ಚಾಲಕ ಗೋಪಿ ಹಾಗೂ ವಿಶ್ವಾಸ್ ಗುಪ್ತಾ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.
ವಾಹನ ಜಪ್ತಿ ವಿಚಾರ ತಿಳಿಯುತ್ತಿದ್ದಂತೆ ವಾಸುಗೆ ಕರೆ ಮಾಡಿದ್ದ ಮುರುಗನ್, ಆರೋಪಿಗಳನ್ನು ಬಿಟ್ಟು ಕಳುಹಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಅದನ್ನು ನಿರಾಕರಿಸಿದ್ದಕ್ಕೆ ‘ವಾಸು ಆರೋಪಿಗಳ ಬಳಿ 50 ಲಕ್ಷ ರೂ. ಲಂಚ ಕೇಳಿದ್ದಾರೆ’ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಈ ವರದಿಯನ್ನು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸಿಪಿ ಆರೋಪವೇನು?:ಏ.11ರಂದು ಸರ್ಕಾರಿ ವಾಹನದಲ್ಲಿದ್ದ 8 ಬಾಕ್ಸ್ ಮದ್ಯವನ್ನು ವಾಹನ ಸಮೇತ ಜಪ್ತಿ ಮಾಡಲಾಗಿತ್ತು. ಅಲ್ಲದೆ, ಆರೋಪಿಗಳನ್ನು ಠಾಣೆಗೆ ಕರೆತಂದು ಕೇಸ್ ದಾಖಲಿಸಲಾಗಿದೆ. ಈ ವೇಳೆ ಆರೋಪಿ ವಿಶೇಷ್ ಗುಪ್ತ ಎಂಬುವನು ‘ತನಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗೊತ್ತು, ಐಪಿಎಸ್ ಅಧಿಕಾರಿ ಮುರುಗನ್ ಪರಿಚಯವಿದೆ’ ಎಂದಿದ್ದ. ಅಲ್ಲದೆ, ತನ್ನನ್ನು ಬಿಟ್ಟರೆ 5 ಲಕ್ಷ ರೂ. ಲಂಚ ಕೊಡುವುದಾಗಿ ಆಮಿಷವೊಡ್ಡಿದ್ದ. ಅದಕ್ಕೆ ನಾನು ನಿರಾಕರಿಸಿದ್ದೆ. ಮರುದಿನ (ಏ.12) ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್​ತಮ್ಮನ್ನು ಮಡಿವಾಳ ಠಾಣೆಗೆ ಕರೆಸಿಕೊಂಡು, ಮದ್ಯ ಸಾಗಿಸುತ್ತಿದ್ದ ಸರ್ಕಾರಿ ವಾಹನ ಜಪ್ತಿ ಮಾಡಿರುವ ಬಗ್ಗೆ ಮಾಹಿತಿ ಪಡೆದರು. ಅದಾದ ಬಳಿಕ ಠಾಣಾ ಜಾಮೀನು ನೀಡಿ ಬಿಟ್ಟುಕಳುಹಿಸುವಂತೆ ಸೂಚಿಸಿದ್ದರು. ಇದೀಗ ಜನಾರ್ದನ್ ಎಂಬ ಸಿಬ್ಬಂದಿಯಿಂದ ಹೇಳಿಕೆ ಪಡೆದು ಲಂಚದ ಆರೋಪ ಹೊರಿಸುತ್ತಿದ್ದಾರೆ. ಸೇವೆಯಿಂದ ಅಮಾನತು ಮಾಡುವಂತೆ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಮದ್ಯ ಸಾಗಾಟದಲ್ಲಿ ಮುರುಗನ್ ಪಾಲು ಇದೆ ಎಂದಿದ್ದಾರೆ.
ವಾಣಿಜ್ಯ ತೆರಿಗೆ ವಾಹನ!
ಮದ್ಯ ಸಾಗಣೆ ಮಾಡುತ್ತಿದ್ದ ಟಾಟಾ ಸುಮೋ ಕಾರು ರಾಜ್ಯ ವಾಣಿಜ್ಯ ತೆರಿಗೆ ಆಯುಕ್ತರ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ, ಕೋವಿಡ್- 19 ತುರ್ತು ಸೇವೆಗಾಗಿ 25 ವಾಹನಗಳನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಚ್ ಕೊನೆಯ ವಾರದಲ್ಲಿ ಎರವಲು ಪಡೆದುಕೊಂಡಿದೆ. ಮದ್ಯ ಸಾಗಾಟಕ್ಕೂ ಮತ್ತು ವಾಣಿಜ್ಯ ತೆರಿಗೆ ಇಲಾಖೆಗೂ ಯಾವುದೇ ಸಂಬಂಧ ಇಲ್ಲ ಎಂದು ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ.
ವಾಹನ ದುರುಪಯೋಗ
ವಾಣಿಜ್ಯ ತೆರಿಗೆ ಇಲಾಖೆಯಿಂದ 25 ವಾಹನಗಳನ್ನು ಎರವಲು ಪಡೆಯುವಾಗ, ‘ಕ್ವಾರಂಟೈನ್​ಗೆ ಒಳಗಾಗಿರುವ ಕರೊನಾ ಶಂಕಿತರಿಗೆ, ಆಹಾರ ಮತ್ತು ಔಷಧ ಸೇವೆಗೆ ಬಳಸಿಕೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೀಗ, ವಾಹನವನ್ನು ಮದ್ಯ ಸಾಗಾಟಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಳೆಗಾಲದಲ್ಲಿ ಕರೊನಾ 2ನೇ ಅಲೆ? ಬೆಂಗಳೂರು, ಮುಂಬೈನಲ್ಲಿ ಅಧ್ಯಯನ ನಡೆಸಿ ವರದಿ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 1 =
Remember me
