ರಾಮನಗರ:ಭೂವ್ಯಾಜ್ಯ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದ್ದು, ಐವರು ಗಾಯಗೊಂಡು, ಐದು ಬೈಕ್​ಗಳು ಸುಟ್ಟು ಕರಕಲಾಗಿವೆ. ಇತರ ವಾಹನಗಳೂ ಜಖಂಗೊಂಡಿವೆ.
ಕಾಂಪೌಂಡ್ ಹಾಕುವ ವಿಚಾರವಾಗಿ ಗ್ರಾಮಸ್ಥರು ಹಾಗೂ ಆರ್ಟ್ ಆಫ್ ಲಿವಿಂಗ್​ ಕಡೆಯವರ ನಡುವೆ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಕಾಂಪೌಂಡ್ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಅಂಬರೀಷ್ ರಸ್ತೆ ಇದೆ, ಮೈಸೂರಲ್ಲೂ ಇದೆ, ಮಂಡ್ಯದಲ್ಲೇಕೆ ಇಲ್ಲ? ನೀವೇ ಪ್ರಶ್ನಿಸಿ: ಸುಮಲತಾ
ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ‌ ಬಳಿ ಈ ಗಲಾಟೆ ನಡೆದಿದ್ದು, ಪರಿಣಾಮವಾಗಿ ಸೆಕ್ಯುರಿಟಿ ರೂಮ್​ ಗ್ಲಾಸ್​ಗಳು ಪುಡಿಯಾಗಿವೆ. ಮಾತ್ರವಲ್ಲದೆ, ಐವರಿಗೆ ಗಾಯವಾಗಿದ್ದು, 5 ಬೈಕ್​ ಹಾಗೂ 4 ಕಾರುಗಳಿಗೆ ಹಾನಿಯಾಗಿವೆ. ಐದು ಬೈಕ್​ಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
36 ಗುಂಟೆ ಜಾಗದಕ್ಕೆ ಆಶ್ರಮದ ಕಡೆಯವರು ಏಕಾಏಕಿ ಕಾಂಪೌಂಡ್ ಹಾಕಲು ತೆರಳಿದ್ದಾಗ ಈ ಗಲಾಟೆ ನಡೆದಿದೆ. ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ರಾಮನಗರ ಎಸ್​​ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ದೂರು-ಪ್ರತಿದೂರು ದಾಖಲಾಗಿವೆ.
ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
