ಚಿಕ್ಕೋಡಿ‌:ಲೈಸೆನ್ಸ್​ ಕೇಳುವ ಬದಲು ಪೊಲೀಸರು ಕಾರಿನ ಗಾಜು ಒಡೆದರು ಎಂದು ಆರೋಪಿಸಿರುವ ಮಹಿಳೆಯೊಬ್ಬಳು ನಡು ರಸ್ತೆಯಲ್ಲೇ ಕಾರು ನಿಲ್ಲಿಸಿ ಅದರ ಮೇಲೇರಿ ಕುಳಿತ ಘಟನೆ ಗುರುವಾರ ಸಂಜೆ ಸಂಕೇಶ್ವರ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಘಟಪ್ರಭಾ ಪೊಲೀಸರ ವಿರುದ್ಧ ಚಿಕ್ಕೋಡಿ ಮ‌ೂಲದ ಮಹಿಳೆ ಆರೋಪ ಮಾಡಿದ್ದಾರೆ. ಪೊಲೀಸರು ಕೈ ತೋರಿ ನಿಲ್ಲಿಸಿ ಎಂದು ಹೇಳಿದರೂ ಸಹ ಚಾಲಕ ಕಾರು ನಿಲ್ಲಿಸದಿದ್ದಾಗ ಪೊಲೀಸರು ಲಾಠಿ ಬೀಸಿದ್ದಾರೆನ್ನಲಾಗಿದೆ.
ಇದನ್ನೂ ಓದಿರಿ:ನಾನು ಬರೀ ಗ್ಲಾಮರ್ ಗೊಂಬೆಯಲ್ಲ; ಆ ಅದಿತಿಯೇ ಬೇರೆ, ಈ ಅದಿತಿಯೇ ಬೇರೆ..
ಇದಾದ ಬಳಿಕ ಕಾರು ನಿಲ್ಲಿಸಿ, ನೀವು ಏನು ಬೇಕಾದರೂ ಕೇಳಿ ಮತ್ತು ಕೇಸ್ ಹಾಕಿ, ಆದರೆ ವಾಹನ ನಿಲ್ಲಿಸುವುದಕ್ಕೂ ಮೊದಲು ಕಾರಿನ ಗಾಜು ಏಕೆ ಒಡೆದ್ರಿ ಎಂದು ಪೊಲೀಸರಿಗೆ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಸಿಪಿಐ ಶ್ರೀಶೈಲ್ ಬ್ಯಾಕೂಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಚಾಲಕ ಕುಡಿದು ಕಾರು ಚಲಾಯಿಸುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು, ಬಳಿಕ ಡ್ರಿಂಕ್ ಆಂಡ್ ಡ್ರೈವ್ ಕೇಸ್ ಹಾಕಿ ಕಳುಹಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)

ಇನ್ನೊಂದು ತಾಜ್​ಮಹಲ್; ನೈಜ ಘಟನೆ ಆಧಾರಿತ ಸಿನಿಮಾ
https://www.vijayavani.net/%e0%b2%b5%e0%b3%8b%e0%b2%9f%e0%b3%81-%e0%b2%b9%e0%b2%be%e0%b2%95%e0%b3%81%e0%b2%a4%e0%b3%8d%e0%b2%a4%e0%b3%87%e0%b2%b5%e0%b3%86-%e0%b2%86%e0%b2%a6%e0%b2%b0%e0%b3%86-%e0%b2%ac%e0%b2%a6%e0%b3%81/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
