ಕೂಡ್ಲಿಗಿ:ಗ್ರಾಮೀಣ ಪ್ರದೇಶಗಳ ಕಡೆ ಬಸ್ಸುಗಳಲ್ಲಿ ಓಡಾಡುವಾಗ ಶೀರ್ಷಿಕೆಯಲ್ಲಿ ಕೊಟ್ಟಿರುವ ಹಾಗೆ ಆಗಾಗ ಘಟನೆಗಳು ನಡೆಯುವುದನ್ನು ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇತ್ತೀಚೆಗೆ ಕೂಡ ಅಂತಹುದೇ ಒಂದು ಘಟನೆ ನಡೆದಿದೆ. ಏನಪ್ಪಾ ಅಂದ್ರೆ ಮಹಿಳೆಯೊಬ್ಬರು ರಟ್ಟಿನ ಬಾಕ್ಸ್​​​​ನಲ್ಲಿ ಕೋಳಿಯನ್ನು ಮುಚ್ಚಿಟ್ಟುಕೊಂಡು ಕೂಡ್ಲಿಗಿಯಿಂದ ಜಗಳೂರು ಕಡೆ ಪ್ರಯಾಣಿಸುತ್ತಿದ್ದರು. ಆಗ ಬಾಕ್ಸ್​​​​ನಲ್ಲಿದ್ದ ಕೋಳಿ ಕೋ ಕೋ ಕೋ ಎಂದು ಕೂಗಿದೆ. ಕೋಳಿ ಕೂಗು ಕೇಳಿ ಬಸ್ ಕಂಡಕ್ಟರ್ “ಕೋಳಿ ಯಾರಾದು”? ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆ ಕೋಳಿ ಮಾಲೀಕರಾದ ಮಹಿಳೆಯ ಬಳಿ ಕೋಳಿಗೆ ಟಿಕೆಟ್ ಕೇಳಿದಾಗ “ಟಿಕೆಟ್ ತಗೋತಿನಿ ಆದ್ರೆ ಅದಕ್ಕೂ ಬಸ್ಸಿನಲ್ಲಿ ಸೀಟು ಕೊಡುವಂತೆ ವಾಗ್ವಾದಕ್ಕಿಳಿದಿದ್ದಾರೆ.
ಈ ಅಪರೂಪದ ಘಟನೆ ಭಾನುವಾರ ರಾತ್ರಿ 7-30ಕ್ಕೆ ಕೂಡ್ಲಿಗಿ ಬಸ್ ನಿಲ್ದಾಣದ ಹಗರಿಬೊಮ್ಮನಹಳ್ಳಿ ಸಾರಿಗೆ ಸಂಸ್ಥೆ ಘಟಕದ ಧರ್ಮಸ್ಥಳ ಕಡೆ ಹೋಗುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿ ಘಟಕದಿಂದ ಹೊಸಪೇಟೆ ಮೂಲಕ ಕೂಡ್ಲಿಗಿ, ಕೊಟ್ಟೂರು, ಜಗಳೂರು ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ಬಸ್ಸು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುತ್ತಿದ್ದಂತೆ ಕೂಡ್ಲಿಗಿಯಿಂದ ಜಗಳೂರು ಕಡೆ ಪ್ರಯಾಣ ಬೆಳೆಸುವ ಮಹಿಳೆ ತನ್ನ ಸಂಬಂಧಿಕರ ಜೊತೆ ಬಸ್ಸು ಹತ್ತಿದ್ದು ಕೈಯಲ್ಲಿದ್ದ ಬಾಕ್ಸ್ ನ್ನು ಸೀಟಿನ ಮೇಲಿರುವ ಲಗೇಜ್ ಇಡುವ ಜಾಗದಲ್ಲಿಟ್ಟಾಗ ಬಾಕ್ಸ್ ನಲ್ಲಿದ್ದ ಕೋಳಿ ಕೂಗುವ ಸದ್ದು ಮಾಡಿದೆ.
ಆಗ ಕಂಡಕ್ಟರ್ ಮಹಿಳೆಗೆ ಟಿಕೆಟ್ ಕೇಳಿದ್ದೆ ತಡ “ಟಿಕೆಟ್ ತಗಂತೀನಿ ಆದ್ರೆ ಕೋಳಿಗಾಗಿ ಸೀಟು ಕೊಡಲೇಬೇಕು” ಎಂದು ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದು ಕೋಳಿ ಜಗಳ ಜೋರಾಯಿತು. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಮಹಿಳೆಗೆ ರೂಲ್ಸ್ ಬಗ್ಗೆ ಹೇಳಿದರೂ ಮಹಿಳೆ ಹಾಗೂ ಕಂಡಕ್ಟರ್ ಕೋಳಿ ಜಗಳ ನಿಲ್ಲದೆ ಸಾಗಿದ್ದು ಕಂಡುಬಂದಿದೆ.
ಕಬ್ಬನ್ ಪಾರ್ಕ್​​​​​ನಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಾಣ ಯೋಜನೆ ಕೈ ಬಿಟ್ಟ ಸರ್ಕಾರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
