| ಕೀರ್ತಿನಾರಾಯಣ ಸಿ.
ಬೆಂಗಳೂರು:ಕೋಲಾರ ಉಪ ವಿಭಾಗದಲ್ಲಿ ನಡೆದಿರುವ ‘ಬೋರ್​ವೆಲ್ ಗೋಲ್ಮಾಲ್’ ವಿಚಾರವನ್ನು ವಿಜಯವಾಣಿ ಬಯಲಿಗೆಳೆಯುತ್ತಿದ್ದಂತೆ ರಾಜ್ಯದ ಇತರ ವಿಭಾಗಗಳಲ್ಲಿ ನಡೆದಿರುವ ಬೋರ್​ವೆಲ್ ಅವ್ಯವಹಾರ ರಹಸ್ಯಗಳೂ ಬೆಳಕಿಗೆ ಬರತೊಡಗಿವೆ. ರಾಮನಗರ ವ್ಯಾಪ್ತಿಯಲ್ಲಿ ಕೊರೆದಿದ್ದ 476 ಕೊಳವೆಬಾವಿ ಕಾಮಗಾರಿಗಳಲ್ಲಿ ಅಕ್ರಮವೆಸಗಿರುವ 13 ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತರು ವರದಿ ಕೊಟ್ಟಿದ್ದರೂ ಕ್ಲೀನ್​ಚಿಟ್ ಕೊಟ್ಟು ಪ್ರಕರಣ ಮುಕ್ತಾಯಗೊಳಿಸಿರುವ ವಿಚಾರ ಬಹಿರಂಗವಾಗಿದೆ.
ರಾಮನಗರದ ಚನ್ನಪಟ್ಟಣ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ 2010 ರಿಂದ 2013ರ ಅವಧಿಯಲ್ಲಿ ಕೊರೆದ ಕೊಳವೆಬಾವಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಯ್ಯ ಕೊಟ್ಟಿದ್ದ ದೂರನ್ನು ಆಗಿನ ಬಿಜೆಪಿ ಸರ್ಕಾರ ಉಪ ಲೋಕಾಯುಕ್ತರ ತನಿಖೆಗೆ ಆದೇಶಿಸಿತ್ತು. ಬೆಂಗಳೂರು ಗ್ರಾಮಾಂತರ ಎಸ್ಪಿ ನೇತೃತ್ವದ ತಂಡದಿಂದ ತನಿಖೆ ನಡೆಸಿ ವರದಿ ಪಡೆಯಲಾಗಿತ್ತು. ಬೋರ್​ವೆಲ್ ಕೊರೆಸಿರುವ ಬಗ್ಗೆ ಪಂಚಾಯ್ತಿ ಆದೇಶ, ಜಲಬಿಂದು ದೃಢೀಕರಣ ಪತ್ರ, ಅಂತಿಮ ಬಿಲ್ ಪಾವತಿ ಸೇರಿ ಯಾವುದೇ ದಾಖಲಾತಿ ಇಲ್ಲದೆ ಹಣ ಬಿಡುಗಡೆ ಮಾಡಿರುವುದು ದೃಢಪಟ್ಟಿತ್ತು.ಇದನ್ನೂ ಓದಿ:ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಬೋರ್​ವೆಲ್ ಗುತ್ತಿಗೆದಾರರ ಜತೆ ಶಾಮೀಲಾಗಿ ಕೋಟ್ಯಂತರ ರೂ. ಕಬಳಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದೂ ಸೇರಿ 4 ಅಂಶಗಳ ಶಿಫಾರಸ್ಸಿನೊಂದಿಗೆ ಉಪ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದನ್ನಾಧರಿಸಿ 2018ರಲ್ಲಿ ಇಲಾಖೆಯ ಮುಖ್ಯ ಇಂಜಿನಿಯರ್, 13 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.
ಆದರೆ, 2018 ಡಿ.12ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಭೌತಿಕವಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮತ್ತೆ ಪ್ರತ್ಯೇಕ 3 ತಂಡಗಳನ್ನು ರಚನೆ ಮಾಡಿ ಆದೇಶಿಸಿದ್ದರು. ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ಅವ್ಯವಹಾರ ನಡೆದಿರುವುದು ದೃಢಪಟ್ಟಿಲ್ಲ. ಆದರೆ, ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಕಾಲದಲ್ಲಿ ಒದಗಿಸಿಲ್ಲ ಎಂದು ತನಿಖಾ ತಂಡಗಳು ವರದಿ ಸಲ್ಲಿಸಿದ್ದವು. ಉಪ ಲೋಕಾಯುಕ್ತ ವರದಿ ಹಾಗೂ ಇನ್ನಿತರ ತಂಡಗಳು ಅವ್ಯವಹಾರ ನಡೆದಿದೆ ಎಂದು ಕೊಟ್ಟ ವರದಿಗಳನ್ನೆಲ್ಲ ತಳ್ಳಿಹಾಕಿ ಈಗ ತಪ್ಪಿತಸ್ಥ ಸ್ಥಾನದಲ್ಲಿದ್ದ ಎಲ್ಲ ಅಧಿಕಾರಿಗಳಿಗೂ ಕ್ಲೀನ್​ಚಿಟ್ ಕೊಟ್ಟಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.ಇದನ್ನೂ ಓದಿ:ಮಾರ್ಗಮಧ್ಯೆಯೇ ಮೃತಪಟ್ಟ ರೋಗಿ; ಶವವನ್ನು ರಸ್ತೆ ಪಕ್ಕ ಇಟ್ಟು ಮರಳಿದ ಆಂಬ್ಯುಲೆನ್ಸ್ ಚಾಲಕ
ಬರೀ ವಾರ್ನಿಂಗ್ ಕೊಟ್ಟು ಖುಲಾಸೆ:2020 ಮಾ.27ರಂದು ಆದೇಶ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಳವೆ ಬಾವಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಯೋಜಿಸಿದ್ದ ತನಿಖೆ ತಂಡಗಳ ವರದಿ ಆಧರಿಸಿ ಕಾಮಗಾರಿಗಳ ದಾಖಲೆಗಳನ್ನು ಸಕಾಲದಲ್ಲಿ ಸಲ್ಲಿಸದಿರುವುದಕ್ಕೆ ಬರೀ ಆಡಳಿತಾತ್ಮಕ ಎಚ್ಚರಿಕೆ ಕೊಟ್ಟು ಎಲ್ಲ ಅಧಿಕಾರಿಗಳ ವಿರುದ್ಧದ ಇಲಾಖೆ ವಿಚಾರಣೆಯನ್ನು ಮುಕ್ತಾಯಗೊಳಿಸಲು ಸೂಚಿಸಿದೆ.
ಟೇಕಾಫ್ ಆಗದ ನ್ಯಾಯಾಂಗ ತನಿಖೆ:2019 ಸೆ.12ರಂದು ಇದೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿತ್ತು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಪಿ.ಎ.ಶಿವಪ್ರಸಾದ್ ನಾಯಕ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಶಿವಪ್ರಸಾದ್ ತಿಳಿಸಿದ್ದರು. ನಂತರ ಪ್ರಕರಣದ ನ್ಯಾಯಾಂಗ ತನಿಖೆ ಮುಂದುವರಿಯದೆ ಅಷ್ಟಕ್ಕೇ ನಿಂತು ಹೋಗಿತ್ತು.ಓದಿ:VIDEO: ಹಕ್ಕಿಗಳಿಗಾಗಿ ತನ್ನ ಕಾರು ಬಳಸುವುದೇ ಬಿಟ್ಟ ದುಬೈ ರಾಜಕುಮಾರ..
ಎಂ.ಚಂದ್ರಹಾಸ-ಇಇ, ರಾಮನಗರಎಸ್.ವೇಣುಗೋಪಾಲ-ಇಇ, ರಾಮನಗರಎಸ್.ಪ್ರಕಾಶ್-ಎಇಇ, ಚನ್ನಪಟ್ಟಣಎಂ.ಸಿ.ನಾಗರಾಜ್-ಎಇ, ಚನ್ನಪಟ್ಟಣಎಂ.ಎಲ್.ಶಂಕರಪ್ಪ-ಎಇ, ಚನ್ನಪಟ್ಟಣಎನ್.ಚಿಕ್ಕವೆಂಕಟೇಶ-ಜೆಇ, ಚನ್ನಪಟ್ಟಣಎ.ಆರ್.ವೆಂಕಟೇಶ-ಜೆಇ, ಚನ್ನಪಟ್ಟಣಎಸ್.ಶ್ರೀನಿವಾಸಯ್ಯ-ಎಫ್​ಡಿಎ, ರಾಮನಗರಟಿ.ಎಚ್.ನಿರಂಜನಗೌಡ-ಲೆಕ್ಕಾಧೀಕ್ಷಕರುಶ್ರೀನಿವಾಸ-ಎಇಇ ಚನ್ನಪಟ್ಟಣಎಸ್.ಜೆ.ಪ್ರಸನ್ನಕುಮಾರ್-ಜೆಇ, ಚನ್ನಪಟ್ಟಣಗೋವಿಂದರಾಜು-ಆಡಿಟರ್ ರಾಮನಗರಚಂದ್ರಶೇಖರ್-ಎಇ, ಚನ್ನಪಟ್ಟಣ
ಬೋರ್​​ವೆಲ್​ ಗೋಲ್ಮಾಲ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + three =
Remember me
