ಬೆಂಗಳೂರು:ಮಲಗುಂಡಿ ಸ್ವಚ್ಛತೆಗೆ ಮಾನವರ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸ್ವಾತಂತ್ರ್ಯ ಬಂದ 60 ವರ್ಷಗಳ ನಂತರವೂ ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ, ತನ್ನದಲ್ಲದ ದುರಾದೃಷ್ಟಕ್ಕೆ ಅವರು ಈ ಕೆಲಸ ಮಾಡಬೇಕಾಗಿದೆ. ಇದು ಮಾನವೀಯತೆಗೇ ನಾಚಿಕೆಯಾಗುವ ಸಂಗತಿ ಯಲ್ಲವೇ? ಈ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಬದುಕುತ್ತಿದ್ದೇವೆಯೇ? ಯಾರೋ ಒಬ್ಬರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಪ್ರಾಣಿಗಳಂತೆ ಕೆಟ್ಟದಾಗಿ ಜೀವನ ನಡೆಸಬೇಕೇ? ಎಂದು ಪ್ರಶ್ನಿಸಿದೆ.
ನಿಷೇಧದ ಹೊರತಾಗಿಯೂ ಮಲ ಹೊರುವ ಪದ್ಧತಿ ಜೀವಂತವಾಗಿರುವ ಕುರಿತು ಮಾಧ್ಯಮ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ಹೈಕೋರ್ಟ್ ಬುಧವಾರ ಆದೇಶಿಸಿತು. ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ದಿನಪತ್ರಿಕೆಯಲ್ಲಿ ಮಲಹೊರುವ ಪದ್ಧತಿ ಜೀವಂತವಾಗಿರುವ ಕುರಿತು ಪ್ರಕಟವಾಗಿರುವ ಸುದ್ದಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಪ್ರಸ್ತಾಪಿಸಿ, ಬಡತನ, ಜಾತಿಯ ಕಾರಣಕ್ಕೆ ಅನಿಷ್ಟ ಪದ್ಧತಿ ಜೀವಂತವಿರುವುದು ಶೋಚನೀಯ ಎಂದು ಅತೃಪ್ತಿ ವ್ಯಕ್ತಪಡಿಸಿತು.
ದೇಶವು ತಂತ್ರಜ್ಞಾನ ಬಳಕೆ ಮಾಡಿಕೊಂಡು ಚಂದ್ರಯಾನದ ಮೂಲಕ ಸಾಧನೆ ಬರೆದಿದೆ. ಆದರೆ, ನಮ್ಮಂತಿರುವ ಮನುಷ್ಯರನ್ನು ಸಹೋದರರಂತೆ ಪರಿಗಣಿಸುತ್ತಿಲ್ಲ. ಹಾಗಾದರೆ ತಂತ್ರಜ್ಞಾನದ ಅಭಿವೃದ್ಧಿ ವ್ಯರ್ಥವಾದಂತಲ್ಲವೇ. ಯಂತ್ರೋಪಕರಣ ಬಳಸಿ ಮಲಗುಂಡಿ ಸ್ವಚ್ಛಗೊಳಿಸುವುದಕ್ಕೆ ಅವಕಾಶವಿದೆ. ಆದರೂ ಬಳಕೆ ಮಾಡುತ್ತಿಲ್ಲ ಏಕೆ. ಇದು ತಂತ್ರಜ್ಞಾನದ ಸಮಸ್ಯೆ ಅಲ್ಲ. ಬದಲಾಗಿ ಮನಸ್ಥಿತಿ ಬದಲಾಗಬೇಕಾಗಿದೆ ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿತು. ಮರಾಠಿ ಕವಿಯ ದ್ವಿಪದಿ ಉಲ್ಲೇಖಿಸಿದ ಸಿಜೆ
ಮರಾಠಿ ಕವಿ ಸಾಹಿರ್ ಲುಧಿಯಾನ್ವಿ ಅವರ ಒಂದು ದ್ವಿಪದಿ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಮಿಟ್ಟಿ ಕಾ ಭಿ ಹೈ ಕುಚ್ ಮೋಲ್ ಮಗರ್ ಇನ್ಸಾನೋನ್ ಕಿ ಕಿಮತ್ ಕುಚ್ ಭಿ ನಹೀಂ, ಇನ್ಸಾನೋನ್ ಕಿ ಇಜ್ಜತ್ ಜಬ್ ಜುಟೆ ಸಿಕ್ಕೊನ್ ಮೇ ನಾ ತೌಲಿ ಜಾಯೆಂಗಿ, ವೋಹ್ ಸುಭಾಹ್ ಕಭಿ ತೋ ಆಯೆಂಗಿ. ಅರ್ಥಾತ್ ಇಲ್ಲಿ ಮಣ್ಣಿಗಾದರೂ ಬೆಲೆ ಇದೆ. ಮನುಷ್ಯ ಜಾತಿಗೆ ಬೆಲೆ ಇಲ್ಲ. ಮಾನವೀಯ ಮೌಲ್ಯಗಳನ್ನು ನಕಲಿ ನಾಣ್ಯಗಳಲ್ಲಿ ಅಳೆಯುವುದಕ್ಕೆ ಮುಂದಾಗಬೇಡಿ ಎಂದು ಸಲಹೆ ನೀಡಿದರು.
ಅಮಿಕಸ್ ಕ್ಯೂರಿ ನೇಮಕನ್ಯಾಯಲಯವು ಘಟನೆ ಕುರಿತಾಗಿ ಕೋರ್ಟ್ ಗೆ ಸಲಹೆ ನೀಡಲು ಅಮಿಕಸ್ ಕ್ಯೂರಿಯಾಗಿ ವಕೀಲ ಶ್ರೀಧರ್ ಪ್ರಭು ಅವರನ್ನು ನೇಮಕ ಮಾಡಿದೆ. ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಿದ್ಧಪಡಿಸಿ ಶುಕ್ರವಾರದೊಳಗೆ ರಿಜಿಸ್ಟ್ರಿಗೆ ಸಲ್ಲಿಸಬೇಕು. ರಿಜಿಸ್ಟ್ರಿ ಅವರು ಅರ್ಜಿ ವಿಚಾರಣೆಗೆ ಸೋಮವಾರಕ್ಕೆ ಪಟ್ಟಿ ಮಾಡ ಬೇಕು ಎಂದು ನ್ಯಾಯಪೀಠ ನಿರ್ದೇಶನ ಕೊಟ್ಟಿದೆ.
ಇದಪ್ಪಾ ಅದೃಷ್ಟ ಅಂದ್ರೆ! 279 ರೂ. ಕೊಟ್ಟು ಬಿರಿಯಾನಿ ತಿಂದಿದ್ದಕ್ಕೆ 7 ಲಕ್ಷ ರೂ. ಮೌಲ್ಯದ ಕಾರು ಗಿಫ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
