| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆಗೂ ಮುನ್ನ ಜನರು ಎಚ್ಚರ ವಹಿಸಿ. ಇಲ್ಲವಾದರೆ, ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಗ್ಯಾರಂಟಿ.
ಸರ್ಕಾರ ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನಿಸಿದ ಕೆಲವೇ ದಿನಗಳಲ್ಲಿ ವೆಬ್​ಸೈಟ್ ಹ್ಯಾಕ್ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಸೈಬರ್ ಕಳ್ಳರು ನಕಲಿ ವೆಬ್​ಸೈಟ್ ಮತ್ತು ಲಿಂಕ್ ಸೃಷ್ಟಿಸಿ ನಾಗರಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕಲು ನಾನಾ ರೂಪದಲ್ಲಿ ಪ್ರಯತ್ನಿಸುತ್ತಿದ್ದಾರೆ.
ಸಾಮಾನ್ಯವಾಗಿ ಗೃಹ ಜ್ಯೋತಿ ಯೋಜನೆಗೆ ವಿದ್ಯುತ್ ಬಿಲ್, ಆಧಾರ್ ಮತ್ತು ಮೊಬೈಲ್ ನಂಬರ್ ಅಪ್​ಲೋಡ್ ಕೇಳುತ್ತಿದೆ. ಇದಾದ ಮೇಲೆ ತಿಂಗಳಿಗೆ ಹಣ ನೀಡುವ ಗೃಹಲಕ್ಷ್ಮಿ ಮತ್ತು ಯುವನಿಧಿಗೆ ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರ ಅಪ್​ಲೋಡ್ ಮಾಡಬೇಕಾಗಿದೆ. ಕೋಟ್ಯಂತರ ಜನರ ಆಧಾರ್, ಬ್ಯಾಂಕ್ ಖಾತೆ, ಯುಪಿಎ ವಿವರಕ್ಕೆ ಕನ್ನ ಹಾಕಲು ಸೈಬರ್ ಕಳ್ಳರು ಹವಣಿಸುತ್ತಿದ್ದಾರೆ. ಸರ್ಕಾರದ ಅಧಿಕೃತ ವೆಬ್​ಸೈಟ್ ಸೇವಾಸಿಂಧು ವಿಳಾಸ ಮತ್ತು ಲಿಂಕ್ ಎಲ್ಲೆಡೆ ಶೇರ್ ಆಗುತ್ತಿವೆ. ಇದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಅಪ್​ಲೋಡ್ ಮಾಡುವಂತೆ ಸಲಹೆಗಳು ಬರುತ್ತಿವೆ. ಇದನ್ನೇ ಟಾರ್ಗೆಟ್ ಮಾಡಿರುವ ಸೈಬರ್ ಕಳ್ಳರು, ಸೇವಾಸಿಂಧು ಮಾದರಿಯಲ್ಲೇ ವೆಬ್​ಸೈಟ್ ಅಥವಾ ಲಿಂಕ್ ಸೃಷ್ಟಿಸಿ ಎಲ್ಲೆಡೆ ವೈರಲ್ ಮಾಡಿ ಗ್ಯಾರಂಟಿ ಯೋಜನೆಗೆ ಅರ್ಜಿ ಸ್ವೀಕರಿಸುವ ನೆಪದಲ್ಲಿ ಜನರ ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಜತೆಗೆ ಒನ್ ಟೈಮ್ ಪಾಸ್​ವರ್ಡ್ (ಒಟಿಪಿ) ಸ್ವೀಕರಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಗಾಳ ಎಸೆದಿದ್ದಾರೆ. ಯಾಮಾರಿ ಸಿಕ್ಕಿಬಿದ್ದರೆ ಅಪಾಯ ತಪ್ಪಿದ್ದಲ್ಲ.
ಇನ್ನೂ ಸರ್ಕಾರದ ಸೇವಾಸಿಂಧು ಫೋರ್ಟಲ್ ಹ್ಯಾಕ್ ಆಗುತ್ತಿದೆ ಎಂಬ ಆರೋಪ-ಪ್ರತ್ಯಾರೋಪಗಳ ನಡುವೆಯೇ ನಿಜವಾಗಿಯೂ ಹ್ಯಾಕರ್ಸ್​ಗಳು ಡೇಟಾ ಕದ್ದರೇ ಕೋಟ್ಯಂತರ ಜನರ ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಗ್ಯಾರಂಟಿ.ಆದರಿಂದ ಮೊಬೈಲ್​ಗೆ ಬರುವ ಅಥವಾ ಸಿಕ್ಕಸಿಕ್ಕ ಲಿಂಕ್​ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು ಎಂಬುದು ಸೈಬರ್ ತಜ್ಞರ ಸಲಹೆಯಾಗಿದೆ.
ಯೋಜನೆ ನೆಪದಲ್ಲಿ ಕನ್ನ?:ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಸಂಪರ್ಕ ಕಡಿತ ಮಾಡುವುದಾಗಿ ಬೆದರಿಸಿ ಆನ್​ಲೈನ್​ನಲ್ಲಿ ಬಿಲ್ ಮೊತ್ತ ಸ್ವೀಕರಿಸುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರ ಪಡೆದು ಅಮಾಯಕರ ಖಾತೆಗೆ ಕನ್ನ ಹಾಕುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಆರ್​ಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಪಾನ್, ಆಧಾರ್ ಲಿಂಕ್ ಮತ್ತು ಪಾನ್​ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವಂತೆ ಸಲಹೆ ಕೊಡುವ ನೆಪದಲ್ಲಿ ಸಹ ಸೈಬರ್ ಖದೀಮರು ಕನ್ನ ಹಾಕುತ್ತಿದ್ದಾರೆ.
ಇದಲ್ಲದೆ, ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿ ಸಾಲ, ಪ್ರಧಾನಮಂತ್ರಿ ಜನ್​ಧನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಪಿಎಫ್ ರೀಫಂಡ್, ವೃದ್ಧಾಪ್ಯ ವೇತನ ಮತ್ತು ಕರೊನಾ ವೇಳೆ ಬ್ಯಾಂಕ್ ಸಾಲದ ಕಂತು ವಿನಾಯಿತಿ ನೆಪದಲ್ಲಿ ಅರ್ಜಿ ಸ್ವೀಕರಿಸುವ ನೆಪದಲ್ಲಿ ದಾಖಲೆ ಪತ್ರ ಪಡೆದು ಮೋಸ ಮಾಡುತ್ತಿರುವ ಸಾಕಷ್ಟು ಪ್ರಕರಣ ದಾಖಲಾಗುತ್ತಿವೆ. ರಾಜ್ಯದಲ್ಲಿ 2022ರಲ್ಲಿ 12,548 ಸೈಬರ್ ಅಪರಾಧ ದಾಖಲಾಗಿವೆ.
ಗ್ಯಾರಂಟಿ ಅನುಷ್ಠಾನಕ್ಕೆ ಆತುರ ಬೇಡ. ಅರ್ಜಿ ಸ್ವೀಕರಿಸುವ ವೆಬ್​ಸೈಟ್​ಗೆ ಸೈಬರ್ ಸೆಕ್ಯೂರಿಟಿ ಕಲ್ಪಿಸಿ. ಜನರ ಬ್ಯಾಂಕ್ ಖಾತೆ ವಿವರ ಸಂಪೂರ್ಣ ಸೇವಾಸಿಂಧು ಪೋರ್ಟಲ್​ನಲ್ಲಿ ಇರಲಿದೆ. ಸೈಬರ್ ಕಳ್ಳರ ಕೈ ಸೇರಿದರೇ ದೊಡ್ಡ ಆಪತ್ತು ಎದುರಾಗಲಿದೆ.
| ಡಾ. ಶುಭಾ ಮಂಗಳಾ, ಸೈಬರ್ ಸೆಕ್ಯುರಿಟಿ ತಜ್ಞೆ
ತಲಾ 1 ರೂ. ಕದ್ದರೂ ಕೋಟಿ ಲೆಕ್ಕ:ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ತಲುಪಲಿದೆ ಎನ್ನಲಾಗುತ್ತಿದೆ. ಸರ್ಕಾರ ಅಂದಾಜು 2.50 ಕೋಟಿ ಜನರಿಂದ ಅರ್ಜಿ ಬರುವ ನಿರೀಕ್ಷೆಯಲ್ಲಿದೆ. ಇವರಿಂದ ತಲಾ 1 ರೂ. ಕನ್ನ ಹಾಕಿದರೂ 2 ಕೋಟಿ ರೂ.ಗೂ ಅಧಿಕವಾಗಲಿದೆ. ಬ್ಯಾಂಕ್ ಖಾತೆಯಿಂದ 1 ರೂ. ಕಡಿತವಾದರೇ ಜನ ತಲೆಕೆಡಿಸಿಕೊಳ್ಳುವುದಿಲ್ಲ. ಸೈಬರ್ ಕ್ರೖೆಂನಲ್ಲಿ ಬಾಟಮ್ ಫೀಶ್ ಎನ್ನಲಾಗುತ್ತದೆ. ಈ ಹಿಂದೆ ಜನ್​ಧನ್ ಖಾತೆಗೆ ಕನ್ನ ಹಾಕಲಾಗಿತ್ತು. ಇದು ಮರು ಕಳುಹಿಸುವುದು ಬೇಡ ಎಂಬುದು ಸೈಬರ್ ತಜ್ಞರ ಸಲಹೆ.
ಬೆಂಗಳೂರು:ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆಗೆ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಪ್ರತಿ ದಿನವೂ ಜನರು ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರ ಗಳ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮಾಹಿತಿ ಅಪ್​ಲೋಡ್ ಮಾಡುವ ಸಂದರ್ಭದಲ್ಲಿ ಮಧ್ಯದಲ್ಲಿಯೇ ಸರ್ವರ್ ಕೈಕೊಡುತ್ತಿರುವ ಕಾರಣ ಸಮಸ್ಯೆಯಾಗುತ್ತಿದ್ದು, ಒತ್ತಡ ಹೆಚ್ಚುತ್ತಿದೆ.
ಹೊಸ ಲಿಂಕ್:ಸರ್ವರ್ ಸಮಸ್ಯೆ ನಿಭಾಯಿಸಲು ಗೃಹಜ್ಯೋತಿ ಪೋರ್ಟ್​ಲ್ಗೆ ಹೊಸ ಲಿಂಕ್ ಅನ್ನು ಇ ಆಡಳಿತ ಸೃಷ್ಟಿಸಿದೆ. ಆದರೆ, ಈ ಲಿಂಕ್ ಸಾರ್ವಜನಿಕರಿಗೆ ಲಭ್ಯವಿಲ್ಲ. ರಾಜ್ಯದ ಎಲ್ಲ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿದೆ. ಹಾಗಾಗಿ ರಾಜ್ಯದ 2 ಸಾವಿರಕ್ಕೂ ಹೆಚ್ಚು ವಿದ್ಯುಚ್ಛಕ್ತಿ ಕಚೇರಿಗಳಲ್ಲಿ ಗುರುವಾರದಿಂದ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.
12.51 ಲಕ್ಷ ನೋಂದಣಿ:ಗೃಹ ಜ್ಯೋತಿ ಯೋಜನೆಗೆ ನಾಲ್ಕನೇ ದಿನಕ್ಕೆ 12,51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ – 96,305, ಎರಡನೇ ದಿನ-3,34,845 ಮೂರನೇ ದಿನ- 4,64,225 ಹಾಗೂ ನಾಲ್ಕನೇ ದಿನ 3.56 ಲಕ್ಷ (ರಾತ್ರಿವೇಳೆಗೆ) ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಹಕರು ಸೇವಾ ಸಿಂಧು ಪೋರ್ಟಲ್https://sevasindhugs.karnataka.gov.inಮೂಲಕ ನೋಂದಾಯಿಸಬಹುದು.
70ಕ್ಕೂ ಅಧಿಕ ಚಿನ್ನದ ಪದಕ ಗಳಿಸಿರುವ ‘ಯೋಗಸಂಧ್ಯಾ’; ಹೆಗ್ಗಡೆ-ಬಿಎಸ್​ವೈ ಅವರಿಂದ ಯೋಗರತ್ನ ಪ್ರಶಸ್ತಿ ಪ್ರದಾನ

ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
