|ಹರೀಶ್ ಬೇಲೂರುಬೆಂಗಳೂರು
ಮೃತಪಟ್ಟವರು, ಹೊರ ರಾಜ್ಯ ಹಾಗೂ ಹೊರದೇಶಕ್ಕೆ ಹೋಗಿರುವ ಅಸಲಿ ವೈದ್ಯರ ಹೆಸರಲ್ಲಿ ನಕಲಿ ವೈದ್ಯರಿಗೆ ಕ್ಲಿನಿಕ್ ಆರಂಭಿಸಲು ಹಾಗೂ ಚಿಕಿತ್ಸೆ ನೀಡಲು ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ವೈದ್ಯ ಮಂಡಳಿಯೇ (ಕೆಎಯುಪಿ) ಅನುಮತಿ ನೀಡಿರುವ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಪ್ರತಿ ನೋಂದಣಿ ಪ್ರಮಾಣಪತ್ರಕ್ಕೆ ಅಂದಾಜು 4 ರಿಂದ 5 ಲಕ್ಷ ರೂ.ವರೆಗೆ ಲಂಚ ಪಡೆದು ನೂರಾರು ನಕಲಿ ವೈದ್ಯರಿಗೆ ಮಂಡಳಿಯ ರಿಜಿಸ್ಟ್ರಾರ್​ಗಳೇ ಪರವಾನಗಿ ವಿತರಿಸಿರುವುದು ಆಯುಷ್ ಇಲಾಖೆಯ ತಾಂತ್ರಿಕ ಸಮಿತಿಯ ಆಂತರಿಕ ಹಾಗೂ ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ.
1998-99, 2000-01, 2009-10 ಹಾಗೂ 2018ರಿಂದ 2020ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ವೈದ್ಯ ವೃತ್ತಿ ನಡೆಸಲು ಅರ್ಹತೆ ಹೊಂದಿಲ್ಲದ ಬೇನಾಮಿ ವ್ಯಕ್ತಿಗಳು ಕಾನೂನುಬಾಹಿರವಾಗಿ ವೈದ್ಯರ ನೋಂದಣಿ ಪ್ರಮಾಣಪತ್ರ ಪಡೆದು ಕ್ಲಿನಿಕ್​ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡುವುದರ ಜತೆಗೆ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ. ನಕಲಿ ವೈದ್ಯರ ಬಗ್ಗೆ ಸಿಐಡಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಪ್ರತ್ಯೇಕವಾಗಿ ವರದಿಗಳನ್ನು ಕೊಟ್ಟಿದ್ದರೂ, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಉದಾಸೀನ ಧೋರಣೆ ಅನುಸರಿಸಿದೆ.
ನಿಯಮದ ಪ್ರಕಾರ ರಾಜ್ಯದಲ್ಲಿ ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿ ಐದೂವರೆ ವರ್ಷ ಬ್ಯಾಚುಲರ್ ಆಫ್ ಆಯುರ್ವೆದಿಕ್ ಮೆಡಿಸಿನ್ ಆಂಡ್ ಸರ್ಜರಿ (ಬಿಎಎಂಎಸ್), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಆಂಡ್ ಸರ್ಜರಿ (ಬಿಯುಎಂಎಸ್) ಹಾಗೂ ಬ್ಯಾಚುಲರ್ ಆಫ್ ಯೋಗ ಆಂಡ್ ನ್ಯಾಚುರೋಪಥಿ (ಬಿವೈಎಎಸ್) ಕೋರ್ಸ್ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಕೆಎಯುಪಿಯಲ್ಲಿ ನೋಂದಾಯಿಸಿ ಪ್ರಮಾಣಪತ್ರ, ಬಾರ್​ಕೋಡ್ ಮತ್ತು ಗುರುತಿನ ಚೀಟಿ ಪಡೆಯಬೇಕು. ಈವರೆಗೆ ಅಂದಾಜು 60 ಸಾವಿರ ವೈದ್ಯರು ಕೆಎಯುಪಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 1965ರಿಂದ ಅರ್ಹ ವಿದ್ಯಾರ್ಹತೆ ಹೊಂದಿ ವೃತ್ತಿನಿರತರಾದ ವೈದ್ಯರಿಗೆ ಆಜೀವ ನೋಂದಣಿ ನೀಡುವ ನಿಯಮ ಜಾರಿಗೆ ತರಲಾಗಿತ್ತು.
ಹೀಗಾಗಿ ಎಲ್ಲ ವೈದ್ಯರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಈ ನಿಯಮ ಜಾರಿಗೆ ಬಂದು 57 ವರ್ಷ ಕಳೆದಿದ್ದು, ಕೆಲವರು ಮೃತಪಟ್ಟಿದ್ದಾರೆ. ಅದೇ ರೀತಿ ಹೊರರಾಜ್ಯ ಹಾಗೂ ವಿದೇಶಕ್ಕೆ ಹೋದವರ ಹೆಸರಿನಲ್ಲಿ ವೈದ್ಯ ಪ್ರಮಾಣಪತ್ರಗಳನ್ನು ಕೊಡುವ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದು ವೈದ್ಯರ ಆರೋಪ.
ಕಡತಗಳೇ ನಾಪತ್ತೆ!:2018-19 ಮತ್ತು 2019-20ರ ಅವಧಿಯಲ್ಲಿ ಮಂಡಳಿ ನೋಂದಣಾಧಿಕಾರಿ ಹುದ್ದೆಯಿಂದ ಬಿಡುಗಡೆ ಹೊಂದುವ ಸಂದರ್ಭದಲ್ಲಿ ಎಲ್ಲ ಮ್ಯಾನ್ಯುಯಲ್ ವಹಿಗಳು, ರಿಜಿಸ್ಟರ್​ಗಳು ಸೇರಿ ಇತರ ದಾಖಲೆಗಳ ಸಂಪೂರ್ಣ ಕಾರ್ಯಭಾರವನ್ನು ಹೊಸದಾಗಿ ನೇಮಕಗೊಂಡಿರುವ ನೋಂದಣಾಧಿಕಾರಿಗೆ ನೀಡಬೇಕು. ನಕಲಿ ವೈದ್ಯರಿಗೆ ಮಾಡಲಾದ ಶಿಫಾರಸುಗಳನ್ನು ಪತ್ತೆ ಹಚ್ಚುವುದನ್ನು ತಪ್ಪಿಸಲು ವೆಂಕಟರಾಮಯ್ಯ, ಉದ್ದೇಶಪೂರ್ವಕವಾಗಿ ಕಡತಗಳನ್ನು ನಾಪತ್ತೆ ಮಾಡಿರುವುದರ ಬಗ್ಗೆ ತಾಂತ್ರಿಕ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಕಲಿ ವೈದ್ಯರಿಗೆ ಶಿಕ್ಷೆಯೇನು?:ಮೊದಲ ಬಾರಿಗೆ ಸಿಕ್ಕಿಬೀಳುವ ನಕಲಿ ವೈದ್ಯರಿಗೆ 25 ಸಾವಿರ ರೂ., 2ನೇ ಬಾರಿ ಸಿಕ್ಕಿ ಬಿದ್ದರೆ 2.5 ಲಕ್ಷ ರೂ. ಮತ್ತು 1 ವರ್ಷ ಜೈಲು ಶಿಕ್ಷೆ, 3ನೇ ಬಾರಿ ಸಿಕ್ಕಿಬಿದ್ದರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಶಿಕ್ಷೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
