ಬೆಂಗಳೂರು:ಕೆಲ ಸಚಿವರ ನಡವಳಿಕೆ, ಅನುದಾನ ನಿರಾಕರಣೆ, ವರ್ಗಾವಣೆ ಬೇಡಿಕೆಗಳಿಗೆ ಅಸಮ್ಮತಿ ಸೇರಿ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಶಾಸಕರ ಅಸಮಾಧಾನ ಸ್ಪೋಟಗೊಳ್ಳಲಿದೆ ಎಂದೇ ನಿರೀಕ್ಷಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ಸೌಹಾರ್ದಯುತವಾಗಿ ಮುಗಿದಿದೆ. ಅತೃಪ್ತ ಶಾಸಕರ ದನಿ ಸಿಎಲ್​ಪಿ ಸಭೆಯಲ್ಲಿ ಕ್ಷೀಣಿಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮ್ಯಾರಥಾನ್ ಸಭೆಯ ಆರಂಭದಲ್ಲಿ ಸಭೆಯ ಔಚಿತ್ಯದ ಬಗ್ಗೆ ಸಿಎಂ ವಿವರಿಸಿದರು. ಜತೆಗೆ ಶಾಸಕರು ವಿಷಯ ಎತ್ತುವ ಮೊದಲೇ ಸಿಎಂ ಪರಿಹಾರ ಸೂತ್ರವನ್ನು ಮುಂದಿಟ್ಟರು. ಶಾಸಕರಲ್ಲಿ ಬೇಸರ ಹೆಪ್ಪುಗಟ್ಟುವುದನ್ನು ತಡೆಯುವ ಉದ್ದೇಶದಿಂದ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ಖಾತ್ರಿಯನ್ನು ಸಿಎಂ ನೀಡಿದರು.
ಗ್ಯಾರಂಟಿ ಕಾರಣಕ್ಕೆ ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಹೊಂದಿಸಿಕೊಡುತ್ತೇನೆ. ಬಜೆಟ್ ತಯಾರಿ, ಅಧಿವೇಶನ ಸೇರಿ ವಿವಿಧ ಕಾರಣದಿಂದ ವರ್ಗಾವಣೆಗಳಿಗೆ ತಡೆಯಾಗಿತ್ತು, ಇದನ್ನು ಬೇಡಿಕೆ ಆಧಾರದ ಮೇಲೆ ಈಡೇರಿಸುವೆ ಎಂದು ಶಾಸಕರಿಗೆ ಭರವಸೆ ನೀಡಿದರು. ಸಿಎಂ, ಪ್ರತಿ ತಿಂಗಳು ಜಿಲ್ಲಾವಾರು ಉಸ್ತುವಾರಿ ಸಚಿವ, ಶಾಸಕರ ಸಭೆಗೆ ನಡೆಸುವುದಾಗಿ ಸಭೆಯಲ್ಲಿ ಪ್ರಕಟಿಸಿದರು.
ಶಾಸಕರು ಹೇಳಿದ್ದೇನು?:ಅನುದಾನ ಕೊಡದಿದ್ದರೆ ಜನರ ನಿರೀಕ್ಷೆ ಈಡೇರಿಸುವುದು ಕಷ್ಟವಾಗಲಿದೆ. ಮುಂದೆ ಚುನಾವಣೆ ಕೂಡ ಬರಲಿದೆ. ಆದ್ಯತೆ ಮೇಲೆ ಅನುದಾನ ಹಂಚಿಕೆ ಒದಗಿಸಿ ಎಂದು ಶಾಸಕರು ಒತ್ತಾಯಿಸಿದರು. ವರ್ಗಾವಣೆ ವಿಚಾರದಲ್ಲಿ ನಾವು ಸಚಿವರಿಗೆ ಮನವಿ ಕೊಟ್ಟಿದ್ದೆವು. ಕೆಲವರು ಪುರಸ್ಕರಿಸಿಲ್ಲ. ಇನ್ನು ಕೆಲವರು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಶಿಫಾರಸು ಹೊರತಾಗಿಯೂ ವರ್ಗಾವಣೆ ನಡೆದಿವೆ. ಹಾಗಿದ್ದರೆ ನಮ್ಮ ಪತ್ರಕ್ಕೆ ಕಿಮ್ಮತ್ತೇನು? ಎಂದು ಪ್ರಶ್ನಿಸಿದಾಗ ಸಭೆಯಲ್ಲಿದ್ದ ಹಲವರು ದನಿಗೂಡಿಸಿದರು.
ಪತ್ರ ಬರೆದ ಬಹುತೇಕ ಶಾಸಕರು ಸಭೆಗೆ ಹಾಜರಾಗಿದ್ದು, ಎಲ್ಲರ ನೇತೃತ್ವವನ್ನು ಬಸವರಾಜ ರಾಯರಡ್ಡಿ ವಹಿಸಿಕೊಂಡಿದ್ದರು. ಇನ್ನು, ಅಸಮಾಧಾನಿತ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಸಭೆಗೆ ಹಾಜರಾಗಿ, ಶಾಸಕರೊಂದಿಗೆ ಆಸೀನರಾಗಿದ್ದರು.
ಸಭೆಯಲ್ಲಿ ಪತ್ರದ ಕಾವು
ವರ್ಗಾವಣೆ, ಅನುದಾನದ ವಿಷಯದಲ್ಲಿ ಶಾಸಕರ ಸಹಿ ಸಂಗ್ರಹ ಮಾಡಿದ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ನಮ್ಮಿಂದ ಪತ್ರ ಬಂದಿದೆ ಅಂತ ಗೊಂದಲ ಶುರುವಾಗಿದೆ. ನಾವು ಪತ್ರಕ್ಕೆ ಸಹಿ ಹಾಕಿರುವುದು ನಿಜ. ನಿಮ್ಮ ಗಮನ ಸೆಳೆಯಲು ನಾವು ಪತ್ರ ಬರೆದಿದ್ದು. ಆದರೆ ಪತ್ರದಲ್ಲಿದ್ದ ಅಂಶವೇ ಬೇರೆ. ಅದು ಇಷ್ಟು ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹಿರಿಯ ಶಾಸಕರು ಸಿಎಂ ಉದ್ದೇಶಿಸಿ ಹೇಳಿದರು. ಅಲ್ಲದೇ, ನಮಗೆ ಎಲ್ಲೂ ಅಸಮಾಧಾನವಿಲ್ಲ. ಕೆಲ ಸಣ್ಣಪುಟ್ಟ ಸಮಸ್ಯೆಗಳು ಇವೆ. ನಾವು ಎಲ್ಲವೂ ಇಲ್ಲವೆಂದು ಹೇಳುತ್ತಿಲ್ಲ. ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಬೇರೆ ಉದ್ದೇಶ ಇಟ್ಟುಕೊಂಡು ಪತ್ರ ಬರೆದಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮದು ಪಕ್ಷ, ಸರ್ಕಾರ ವಿರೋಧಿ ನಡೆಯೂ ಅಲ್ಲ. ಇದನ್ನು ದಯವಿಟ್ಟು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಹಿರಿಯ ಶಾಸಕರು ಸಮರ್ಥಿಸಿಕೊಂಡರು.
ಶಾಸಕರಿಗೆ ಟಾರ್ಗೆಟ್
ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದು, ಗ್ಯಾರಂಟಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಕ್ರಮ ರೂಪಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಶಾಸಕರಿಗೆ ಸೂಚಿಸಿದರು.
ಶಾಸಕರಿಗೆ ಸಿಎಂ ಸಲಹೆಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 3 =
Remember me
