ಕೀರ್ತಿನಾರಾಯಣ ಸಿ. ಬೆಂಗಳೂರುಪೊಲೀಸ್ ಕಾನ್​ಸ್ಟೆಬಲ್​ಗಳಿಗೆ ಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್​ಟಿ) ಉತ್ತೀರ್ಣರಾಗುವುದು ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಿರುವ ರಾಜ್ಯ ಸರ್ಕಾರ, ಸಿಎಲ್​ಟಿ ಟೆಸ್ಟ್​ನಲ್ಲಿ ಪಾಸ್ ಆಗುವುದನ್ನು ಹೊರತುಪಡಿಸಿ ಜ್ಯೇಷ್ಠತೆ ಹೊಂದಿರುವ ಅಧಿಕಾರಿ ಮತ್ತು ನೌಕರರು ಉಳಿದೆಲ್ಲ ಅರ್ಹತೆಗಳನ್ನು ಹೊಂದಿದ್ದರೆ ಬಡ್ತಿಗೆ ಪರಿಗಣಿಸುವಂತೆ ತಿಳಿಸಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಪ್ರೋತ್ಸಾಹ ಧನ ಮಂಜೂರು ಹಾಗೂ ಮುಂಬಡ್ತಿ ನೀಡುವ ಕುರಿತ ಪೊಲೀಸ್ ಇಲಾಖೆಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ 2023ರ ಮೇ 20ರಂದು ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರು. ಇದನ್ನು ಪರಿಶೀಲಿಸಿರುವ ಒಳಾಡಳಿತ ಇಲಾಖೆ ಗೊಂದಲಗಳನ್ನು ನಿವಾರಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ 2012 ಮಾ.17ರ ಅಧಿಸೂಚನೆಯಲ್ಲಿ ಸಿಎಲ್​ಟಿ ಉತ್ತೀರ್ಣರಾಗಲು ನಿಗದಿಪಡಿಸಿರುವ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿದೆ.
ನಿಯಮ 2 ಮತ್ತು 3ಕ್ಕೆ ತಿದ್ದುಪಡಿ ತರುವ ಮೂಲಕ ನೇರ ನೇಮಕಾತಿ ಹೊಂದಿದವರು ಉತ್ತೀರ್ಣರಾಗುವ ಅವಧಿ ವಿಸ್ತರಿಸಲಾಗುತ್ತಾ ಬರಲಾಗುತ್ತಿದೆ. ಹಿಂದಿನ ದಿನಾಂಕದಿಂದ ವಿಸ್ತರಿಸಿ ನಿಗದಿಪಡಿಸಲಾಗಿರುವ ದಿನಾಂಕದವರೆಗೆ ಸಿಎಲ್​ಟಿಯಲ್ಲಿ ಉತ್ತೀರ್ಣರಾಗಲು ಅಧಿಕಾರಿ ಮತ್ತು ನೌಕರರಿಗೆ ಅವಕಾಶ ಕೊಡಲಾಗುತ್ತಿದೆ. ತಿದ್ದುಪಡಿ ನಿಯಮದ ಅನ್ವಯ 2023ರ ಫೆ.17ರಿಂದ 2023 ಡಿ.31ರವರೆಗೆ ಸಿಎಲ್​ಟಿಯಲ್ಲಿ ಉತ್ತೀರ್ಣರಾಗುವುದನ್ನು ಹೊರತುಪಡಿಸಿ ಜ್ಯೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿ ಮತ್ತು ನೌಕರರು ಮುಂಬಡ್ತಿಗೆ ಅರ್ಹರಾಗಿದ್ದಲ್ಲಿ ಪರಿಗಣಿಸಬಹುದು ಎಂದು ಸೂಚಿಸಿದೆ. ಇದರೊಂದಿಗೆ ಸಿಎಲ್​ಟಿ ಪಾಸ್ ಆಗದ ಕಾರಣಕ್ಕೆ ಮುಂಬಡ್ತಿ ತಡೆ ಹಿಡಿಯಲಾಗಿದ್ದ ಹಲವರಿಗೆ ಈಗ ಬಡ್ತಿ ದೊರೆಯಲಿದೆ.
ಲಂಚಕ್ಕೆ ಬೇಡಿಕೆ ಆರೋಪ:ಕಿಯೋನಿಕ್ಸ್ ಮೂಲಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ 3 ಬ್ಯಾಚ್​ನಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಡೆಸಲಾಗುತ್ತದೆ. 2012ಕ್ಕಿಂತ ಮುಂಚೆ ನೇಮಕಗೊಂಡವರು 28 ಅಂಕ ಹಾಗೂ 2012ರ ನಂತರ ನೇಮಕಾತಿ ಹೊಂದಿದವರು 40 ಅಂಕ ಪಡೆದರೆ ಉತ್ತೀರ್ಣರಾಗುತ್ತಾರೆ. ಉತ್ತೀರ್ಣಗೊಳಿಸಲು ಆರಂಭದಲ್ಲಿ ಏಜೆನ್ಸಿ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುವ ಆರೋಪವೂ ಕೇಳಿಬಂದಿತ್ತು. ಆರಂಭದಲ್ಲಿ 3 ರಿಂದ 5 ಸಾವಿರ ರೂ. ಲಂಚ ಇತ್ತು. ನಂತರ 10 ರಿಂದ 15 ಸಾವಿರ ರೂ.ಗೆ ಏರಿಕೆಯಾಗಿ ಈಗ 20 ರಿಂದ 30 ಸಾವಿರ ರೂ. ಕೊಡಬೇಕು ಎಂದು ನೌಕರರು ಆರೋಪ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
