ಬೆಂಗಳೂರು:ಕೋವಿಡ್​ನಿಂದ ತಂದೆ-ತಾಯಿ, ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ನೆರವಿಗೆ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಬಾಲಸೇವಾ ಯೋಜನೆಯನ್ನು ರೂಪಿಸಿದ್ದಾಗಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿನ ಕರೊನಾ ಸ್ಥಿತಿಗತಿ ಕುರಿತು ನಡೆಸಿದ ಸಭೆ ಬಳಿಕ ಸುದ್ದಿಗೋಷ್ಠಿ ಕರೆದ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಬಾಲಸೇವಾ ಯೋಜನೆ ಕುರಿತ ಮಾಹಿತಿ ನೀಡಿದರು. ಕೋವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಹಲವರಿದ್ದಾರೆ. ರಾಜ್ಯದಲ್ಲಿ ಅಂಥ 13 ಹಾಗೂ ದೇಶದಲ್ಲಿ 577 ಪ್ರಕರಣಗಳು ದಾಖಲಾಗಿವೆ. ಸದ್ಯ ರಾಜ್ಯದ ಆ 13 ಮಕ್ಕಳಿಗೆ ಮುಂದಿನ 21 ವರ್ಷ ಪೂರೈಸುವವರೆಗೂ ಮಾಸಿಕ 3,500 ರೂ. ಲೆಕ್ಕದಲ್ಲಿ ಸಹಾಯಧನ ನೀಡಲಾಗುವುದು. ಇನ್ನು ಈ ಮಕ್ಕಳು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ನೋಡಿಕೊಳ್ಳಲು ಯಾರೂ ಇರದಿದ್ದರೆ ಸರ್ಕಾರದ ಪಾಲನ ಕೇಂದ್ರದ ಮೂಲಕ ಆರೈಕೆ ಮಾಡಲಾಗುವುದು. ಅಲ್ಲದೆ ಹತ್ತನೇ ತರಗತಿವರೆಗೆ ಮಾದರಿ ವಸತಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಒದಗಿಸಲಾಗುವುದು. ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್ ಮೂಲಕ ಈ ನೆರವು ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಅನಾಥ ಮಕ್ಕಳು ಹತ್ತನೇ ತರಗತಿ ಬಳಿಕ ಉನ್ನತ ಶಿಕ್ಷಣ ಕೈಗೊಳ್ಳಲು ಬ್ಯಾಂಕ್​ ಸಾಲಕ್ಕೆ ಸರ್ಕಾರದಿಂದಲೇ ಬಡ್ಡಿ ತುಂಬಲಾಗುವುದು. 18 ವರ್ಷದ ತನಕ ಆಯುಷ್ಮಾನ್ ಭಾರತ್ ಯೋಜನೆ ಅಡಿ 5 ಲಕ್ಷ ರೂ. ವಿಮೆ ಇರಲಿದ್ದು, ಆ ವಿಮಾ ಕಂತನ್ನು ಸರ್ಕಾರವೇ ಭರಿಸಲಿದೆ. ಹತ್ತನೇ ತರಗತಿ ಬಳಿಕ ಈ ಮಕ್ಕಳಿಗೆ ಉಚಿತವಾಗಿ ಟ್ಯಾಬ್​ ಅಥವಾ ಲ್ಯಾಪ್​​ಟಾಪ್​ ನೀಡಲಾಗುವುದು. ಇನ್ನು ಈ ಮಕ್ಕಳ ಪೈಕಿ ಹೆಣ್ಣುಮಕ್ಕಳಿದ್ದರೆ ಅವರಿಗೆ 21 ವರ್ಷ ತಂಬಿದ ಬಳಿಕ 1 ಲಕ್ಷ ರೂ. ಸಹಾಯಧನ ಕೂಡ ಸಿಗಲಿದೆ ಎಂದು ತಿಳಿಸಿದರು.
ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್​

ಜನರು ಸಹಕರಿಸದಿದ್ದರೆ ಮತ್ತೆ ಲಾಕ್​ಡೌನ್ ವಿಸ್ತರಣೆ​?; ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ…

ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
