ಬೆಂಗಳೂರು:ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ಭಾರಿ ಮಳೆಯಾಗಿದ್ದು, ನಗರಾದ್ಯಂತ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ಸಾವು-ನೋವಿನಂಥ ಅನಾಹುತಗಳೂ ಸಂಭವಿಸಿವೆ. ಮಳೆ ಅವಾಂತರದಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಒಂದೆಡೆಯಾದರೆ, ಆಡಳಿತ ಯಂತ್ರವೂ ಚುರುಕುಗೊಂಡಿದೆ.
ನಿನ್ನೆ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಉಲ್ಲಾಳ ಉಪನಗರದ ಉಪ್ಕಾರ್ ಲೇಔಟ್ ಬಸ್ ನಿಲ್ದಾಣದ ಬಳಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರು. ಈ ಸ್ಥಳದಲ್ಲಿ ಕಾವೇರಿ 5ನೇ ಹಂತದ ಪೈಪ್​ಲೈನ್​ ಕಾಮಗಾರಿಯಲ್ಲಿ ತೊಡಗಿದ್ದ ಬಿಹಾರ ಮೂಲದ ದೇವಬಾತ್ ಮತ್ತು ಉತ್ತರಪ್ರದೇಶ ಮೂಲದ ಅಂಕಿತ್ ಕುಮಾರ್ ಮೃತಪಟ್ಟಿದ್ದರು. ತ್ರಿಲೋಕ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಅಷ್ಟೇ ಅಲ್ಲದೆ ನಗರಾದ್ಯಂತ ಹಲವೆಡೆ ನೀರು ನುಗ್ಗಿದ್ದು, ಅನೇಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡ ಪ್ರಕರಣಗಳೂ ನಡೆದಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ನಿನ್ನೆಯ ಅವಘಡದಲ್ಲಿ ಸಾವಿಗೀಡಾದ ಇಬ್ಬರ ಕುಟುಂಬಕ್ಕೂ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೆಯೇ ಮಳೆಯಿಂದ ಹಾನಿಗೀಡಾಗಿರುವ ಮನೆಗಳವರಿಗೆ 25 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ಬೆಳಗಿನ ಜಾವ ಮನೆ ಬಾಗಿಲು ತೆರೆದವರಿಗೆ ಕಾದಿತ್ತು ಅಚ್ಚರಿ!; ನಾನೇ ಇಟ್ಕೋತೀನಿ ಅಂದ್ರೂ ಪೊಲೀಸರು ಬಿಡಲಿಲ್ಲ!

ನಲಪಾಡ್​ ಹಳೇ ಕೇಸ್​ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ..

Sign in to your account
Please enter an answer in digits:1 × two =
Remember me
