ಬೆಂಗಳೂರು:ರಾಜ್ಯದಲ್ಲಿ ಪರ್ಸೆಂಟೇಜ್ ವಿವಾದಕ್ಕೆ ಕಾರಣವಾಗಿರುವ ಪ್ಯಾಕೇಜ್ ಟೆಂಡರ್​ಗಳನ್ನು ರದ್ದು ಮಾಡುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುತ್ತಿಗೆದಾರರಿಗೆ ಭರವಸೆ ನೀಡಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪ್ಯಾಕೇಜ್ ಟೆಂಡರ್​ಗಳಿಂದ ಲೋಕಲ್ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ನಾನಾ ಇಲಾಖೆಯಲ್ಲಿ ಈಗಾಗಲೆ ಕಾಮಗಾರಿ ಮಾಡಿದ್ದು ಸರ್ಕಾರದಿಂದ ಗುತ್ತಿಗೆದಾರರಿಗೆ ಬರಬೇಕಾಗಿರುವ ಬಿಲ್ ಬಾಕಿ 25 ಸಾವಿರ ಕೋಟಿ ರೂ. ಇದೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡಬೇಕೆಂಬ ಗುತ್ತಿಗೆದಾರರ ಒತ್ತಾಯಕ್ಕೆ ಮಣಿದ ಸಿಎಂ, ಸರ್ಕಾರದ ನಾನಾ ಇಲಾಖೆಯಲ್ಲಿ ಬಾಕಿ ಇರುವ ಬಿಲ್​ಗಳನ್ನು ಯಾರ ಒತ್ತಡಕ್ಕೂ ಮಣಿಯದೆ ಸಿನಿಯಾರಿಟಿ ಮೇಲೆ ನೀಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅದಕ್ಕಾಗಿಯೇ ಸಾಫ್ಟ್​ವೇರ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ರವೀಂದ್ರ, ಕೃಷ್ಣಾರೆಡ್ಡಿ, ಮಂಜುನಾಥ್, ಶಂಕರರೆಡ್ಡಿ ಮತ್ತಿತರರು ಹಾಜರಿದ್ದರು.
ನಾನು ಯಾವುದೇ ಪಾರ್ಟಿ ಏಜೆಂಟ್ ಅಲ್ಲ. ನಾವು ಸುಳ್ಳು ಹೇಳಿದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ. ನಮ್ಮ ಬಳಿ ಇರುವ ದಾಖಲೆ ಬಿಡುಗಡೆ ಮಾಡುತ್ತೇವೆ. ಭ್ರಷ್ಟಾಚಾರಕ್ಕೆ ತಡೆ ಹಾಕಬೇಕು ಎನ್ನುವ ನಮ್ಮ ಉದ್ದೇಶಕ್ಕೆ ಸಿಎಂ ಕೂಡ ಸ್ಪಂದನೆ ನೀಡಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೇ 11 ರಿಂದ ಕಾಮಗಾರಿ ನಿಲ್ಲಿಸುವ ನಿರ್ಧಾರವನ್ನು ಮೀಟಿಂಗ್​ನಲ್ಲಿ ನಿರ್ಧಾರ ಮಾಡುತ್ತೇವೆ.
|ಕೆಂಪಣ್ಣಅಧ್ಯಕ್ಷರು, ರಾಜ್ಯ ಗುತ್ತಿಗೆದಾರರ ಸಂಘ
ಗುತ್ತಿಗೆದಾರರಿಂದ ಹರ್ಷ ವ್ಯಕ್ತ:ಗುತ್ತಿಗೆದಾರರ ಬಿಲ್ ಪಾವತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಸರಿಸುತ್ತಿರುವ ಪದ್ಧತಿಯ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಕೋಟಿ ಹಾಗೂ ಅದಕ್ಕಿಂತಲೂ ಕಡಿಮೆ ಮೊತ್ತದ ಸಣ್ಣ ಗುತ್ತಿಗೆದಾರರಿಗೆ ಹಿರಿತನದ ಮತ್ತು ಪೋ› ರೇಟಾ ಸಮಾನಾಂತರ ಅನುಪಾತ ಆಧಾರದ ಮೇಲೆ ಬಿಲ್ ಪಾವತಿ ಆಗುತ್ತಿರುವುದು ಉತ್ತಮ ಬೆಳವಣಿಗೆ ಇನ್ನು ಮುಂದೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ, ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳಲ್ಲಿ ಆದ್ಯತೆ ಮೇರೆಗೆ ಬಿಲ್ ಪಾವತಿ ಆಗುತ್ತಿದೆ. ಸಣ್ಣ ಗುತ್ತಿಗೆದಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಒಟ್ಟಾರೆ ಗುತ್ತಿಗೆದಾರರ ಬಾಕಿ ಬಿಲ್ ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿದೆ. ಕಿರಿಕಿರಿ ಕಡಿಮೆ ಆಗಿದೆ. ಇದೇ ವಾತಾವರಣ ಪದ್ಧತಿ ಮುಂದುವರಿಸಿ ಎಂದು ಕೆಂಪಣ್ಣ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಚರ್ಚೆಗೆ ಬಾರದ ಕಮೀಷನ್ ವಿಚಾರ:ಶೇ.40 ಕಮಿಷನ್ ವಿಷಯ ಇಂದು ಚರ್ಚೆಗೆ ಬರಲಿಲ್ಲ. ಆದರೆ, ಸಿಎಂ ನಮ್ಮ ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಆಲಿಸಿದ್ದು, ಕೂಡಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಅವರ ಮೇಲೆ ನಮಗೂ ವಿಶ್ವಾಸವಿದೆ. ಆದ್ದರಿಂದ ಕಾಯ್ದು ನೋಡುತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದರು.
2 ಕೋಟಿ ರೂ. ತನಕ ವಿಸ್ತರಣೆ:50 ಲಕ್ಷ ರೂ. ತನಕ ಯಾವುದೇ ಗುತ್ತಿಗೆಯನ್ನು ಮಿಷನರಿ ಬಳಕೆ ಮಾಡಿ ಕೊಳ್ಳದೆ ಮಾಡಬಹುದು ಎನ್ನುವ ನಿಯಮಾವಳಿಯನ್ನು 2 ಕೋಟಿ ರೂ. ಮಿತಿಗೆ ಏರಿಸಲು ಉದ್ದೇಶಿಸಲಾಗಿದೆಂದು ಸಿಎಂ ಭರವಸೆ ನೀಡಿದರು.
25 ಕೋಟಿ ರೂಪಾಯಿಗೆ ಇಳಿಕೆ:ಸರ್ಕಾರದ ಯಾವುದೇ ಕಾಮಗಾರಿಯ ಟೆಂಡರ್​ಗಳು 50 ಕೋಟಿ ರೂ. ದಾಟಿದ್ದರೆ ಅದನ್ನು ನಿವೃತ್ತ ನ್ಯಾಯಾಧೀಶರ ಮೂಲಕ ಪರಿಶೀಲಿಸಲು ಇತ್ತೀಚೆಗೆ ತೀರ್ವನಿಸಿದ್ದು ಅದನ್ನು 5 ಕೋಟಿ ರೂ.ಗೆ ಇಳಿಸಬೇಕು ಎಂಬ ಒತ್ತಾಯಕ್ಕೆ ಒಪ್ಪದ ಸಿಎಂ, ಮಿತಿಯನ್ನು 25 ಕೋಟಿ ರೂ.ಗೆ ಇಳಿಸಲು ನಿರ್ಧರಿಸಿದರು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಮಾಸ್ಕ್​ ಧರಿಸುವುದು ಕಡ್ಡಾಯ, ಉಗುಳಿದ್ರೂ ದಂಡ: ಸರ್ಕಾರದಿಂದ ಹೊಸದಾಗಿ ಮತ್ತೆ ಆದೇಶ..

ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆರು ವಿದ್ಯಾರ್ಥಿನಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
