ಮೂಡುಬಿದಿರೆ:ನಾನು ಮಂಡ್ಯದವಳು. ನನಗೆ ಉತ್ತಮ ಶಿಕ್ಷಣ ಕೊಡಿಸಲು ತನ್ನ ಕನಸುಗಳನ್ನು ತ್ಯಾಗ ಮಾಡಿದ ತಂದೆಯ ಕನಸುಗಳನ್ನು ಈಡೇರಿಸಲು ರೈತ ವಿದ್ಯಾನಿಧಿ ದಾರಿಯಾಗಿದೆ. ನನ್ನ ತಂದೆಯ ಕನಸುಗಳನ್ನು ಈಡೇರಿಸುತ್ತೇನೆ.
ಇದು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎದುರು ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಂಡ್ಯದ ರೈತ ಕುಟುಂಬದ ಭಾವನಾ ಆಡಿದ ಭಾವುಕ ಮಾತು. ಖಾಸಗಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ ವ್ಯವಸ್ಥೆ ಇದೆ. ಅದರಂತೆ ಸರ್ಕಾರಿ ಕಾಲೇಜುಗಳಲ್ಲೂ ಅನುಕೂಲ ಕಲ್ಪಿಸುವ ಯೋಜನೆ ರೂಪಿಸುವಂತೆ ವಿದ್ಯಾರ್ಥಿನಿ ಮನವಿ ಮಾಡಿದರು.
ಉತ್ತರಿಸಿದ ಸಿಎಂ, ರಾಜ್ಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಜೆಟ್​ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ’ ಎನ್ನುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಬೈಜೂಸ್ ಆಪ್ ಜತೆ ಪ್ರಥಮ ಹಂತದ ಮಾತುಕತೆ ನಡೆಸಿದ್ದೇವೆ. ಈ ಯೋಜನೆಯಿಂದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, ಪರೀಕ್ಷೆ, ತಯಾರಿ ವಿಧಾನ ಸಹಿತ ವಿವಿಧ ಅಂಶಗಳನ್ನು ಕೂಡಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದರು. ಎಕ್ಸಲೆಂಟ್ ಪಿಯು ಕಾಲೇಜಿನ ಇನ್ನೋರ್ವ ವಿದ್ಯಾರ್ಥಿನಿ ಹಿತಶ್ರೀ ಪ್ರಶ್ನೆಗೆ ಉತ್ತರಿಸಿದ ಸಿಎಂ, ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸರ್ಕಾರದಿಂದ ನೆರವು ನೀಡುವ ಕುರಿತು ಕೂಡ ಚಿಂತನೆ ನಡೆಸುತ್ತೇವೆ ಎಂದು ಭರವಸೆಯಿತ್ತರು.
ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್:ಉಜಿರೆ ಎಸ್​ಡಿಎಂ ಪಾಲಿಟೆಕ್ನಿಕ್​ನ ವಿದ್ಯಾರ್ಥಿನಿ ನಿಶ್ಮಿತಾ, ರೈತರ ಮಕ್ಕಳಿಗೆ ಲ್ಯಾಪ್​ಟಾಪ್ ನೀಡುವಂತೆ ಬೇಡಿಕೆ ಮುಂದಿಟ್ಟರು. ರೈತರ ಮಕ್ಕಳು ಮಾತ್ರವಲ್ಲ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ನೀಡುವಂತೆ ಬೇಡಿಕೆ ಇದೆ. ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಿಎಂ ಉತ್ತರಿಸಿದರು.
ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ; ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 6 =
Remember me
