ಬೆಂಗಳೂರು: ಕರೊನಾ ಸೋಂಕು ಹರಡದಂತೆ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇವತ್ತು ಘೋಷಿಸಿರುವ ಸಪ್ತಪದಿ ಸೂತ್ರಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಲಾಕ್​ ಡೌನ್ ನಿಯಮ ಬಿಗಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಘೋಷಿಸಿದರು.
ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಆರೋಗ್ಯ ಸೇತು ಆ್ಯಪ್​ ಡೌನ್​ಲೋಡ್​ ಮಾಡಬೇಕು ಎಂಬ ಅಂಶಗಳನ್ನು ಸೇರಿ ಪ್ರಧಾನಮಂತ್ರಿಯವರು ಸೂಚಿಸಿದ ಏಳು ಸೂತ್ರಗಳನ್ನು ಮುಖ್ಯಮಂತ್ರಿ ಬಿಎಸ್​ ವೈ ಪುನರುಚ್ಚರಿಸಿದರು.
ಲಾಕ್​ಡೌನ್​ ಅವಧಿ ಮೇ 1ರ ತನಕ ವಿಸ್ತರಿಸಬೇಕು ಎಂಬುದು ನಮ್ಮ ಅಪೇಕ್ಷೆಯೂ ಆಗಿತ್ತು. ಪ್ರಧಾನಮಂತ್ರಿಯವರ ಮಾರ್ಗಸೂಚಿ ಏನು ಎಂಬುದನ್ನು ನಿರೀಕ್ಷಿಸುತ್ತಿದ್ದೆವು. ಏಪ್ರಿಲ್​ 20ರೊಳಗೆ ಕರೊನಾ ಸೋಂಕು ನಿಯಂತ್ರಣಕ್ಕೆ ಬರಬೇಕು. ನಮ್ಮ ಶಕ್ತಿ ಮೀರಿ ಎಲ್ಲ ಕೆಲಸವನ್ನೂ ಮಾಡುತ್ತೇವೆ. ಜನರೂ ಸಹಕಾರ ನೀಡುತ್ತಿದ್ದಾರೆ. ಅಲ್ಲೊಬ್ಬರು, ಇಲ್ಲೊಬ್ಬರು ಉಲ್ಲಂಘನೆ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.
ಈಗಾಗಲೇ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. 95 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದೇವೆ. ನಿಯಮಗಳ ವಿಚಾರವನ್ನು ನಾಳೆ ಕೇಂದ್ರ ಸರ್ಕಾರದ ನಿಯಮ ಮಾರ್ಗಸೂಚಿ ಗಮನಿಸಿಕೊಂಡು ಮುಂದುವರಿಯುತ್ತೇವೆ. ಇವತ್ತಿನಿಂದ ನಿಯಮ ಇನ್ನೂ ಬಿಗಿಯಾಗಲಿದೆ. ಜನರ ಸಹಕಾರ ಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ವೈ ವಿನಂತಿ ಮಾಡಿಕೊಂಡಿದ್ದಾರೆ.
https://www.vijayavani.net/lock-down-extended-till-may-3-govt-to-issue-guidelines-tomorrow/
ಮದ್ಯ ಮಾರಾಟದ ಐಡಿಯಾ ಕೈಕೊಡ್ತು- ಸಪ್ಲೈಯರ್ ಆಟ ನಡೀಲಿಲ್ಲ!

ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
