ಬೆಂಗಳೂರು:ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.​ ಯಡಿಯೂರಪ್ಪ ಅವರು ಸದ್ಯ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ರಾಜ್ಯದ ಜನತೆಗೆ ವಿಡಿಯೋ ಸಂದೇಶ ಕಳಿಸಿದ್ದಾರೆ.
‘ನನಗೆ ಕರೊನಾ ಸೋಂಕು ಇರುವುದು ನಿನ್ನೆ(ಭಾನುವಾರ) ರಾತ್ರಿ 8.30ಕ್ಕೆ ದೃಢಪಟ್ಟಿತ್ತು. ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದೇನೆ‌. ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಮಠಾಧೀಶರು ಬೇಗ ಗುಣ ಮುಖರಾಗುವಂತೆ ಹಾರೈಸಿದ್ದಾರೆ. ಜೆಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಂ ಕರೆ ಮಾಡಿದ್ರು. ಆರೂವರೆ ಕೋಟಿ ಕನ್ನಡಿಗರ ರಕ್ಷಣೆ ನಮ್ಮ ಮೇಲಿದೆ’ ಎಂದಿರುವ ಸಿಎಂ, ಕರೊನಾ ವಿರುದ್ಧ ಗೆಲ್ಲುವ ಬಗೆಯನ್ನೂ ವಿವರಿಸಿದ್ದಾರೆ.
ಇದನ್ನೂ ಓದಿರಿಅಮಿತ್ ಷಾ ವಿರುದ್ಧ ಆಕ್ಷೇಪಾರ್ಹ ಬರಹ: ಕೆಪಿಸಿಸಿ ಸೋಷಿಯಲ್ ಮೀಡಿಯಾ ಸೆಕ್ರೆಟರಿ ಬಂಧನ
‘ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡ್ರೆ ಮಾತ್ರ ನಾವು ಇದರ(ಕರೊನಾ) ವಿರುದ್ಧ ಗೆಲ್ಲಬಹುದು. ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ಕೊಡ್ತಿದ್ದೇನೆ. ಬೇಗ ಗುಣಮುಖನಾಗಿ ಎಂದಿನಂತೆ ಜನಪರ ಕೆಲಸದಲ್ಲಿ ನಿರತನಾಗುತ್ತೇನೆ. ನಾನು ಸುರಕ್ಷಿತ, ನೀವು ಸುರಕ್ಷಿತರಾಗಿರಿ.. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ.. ಕರೊನಾ ಓಡ್ಸಿ.. ಬೇಗ ಮೀಟ್ ಆಗೋಣ..’ ಎಂದು ವಿಡಿಯೋ ಸಂದೇಶ ಕಳಿಸಿರುವ ಸಿಎಂ, ‘ಸರ್ಕಾರದ ಕೆಲಸಗಳಿಗೆ ಯಾವುದೇ ಅಡ್ಡಿ- ಆತಂಕ ಆಗಬಾರದು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
https://www.facebook.com/VVani4U/videos/604103466914627/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
